»   » ಮೋದಿಯಾಗಿ ಮೋಡಿ ಮಾಡಲಿರುವ ಪರೇಶ್ ರಾವಲ್

ಮೋದಿಯಾಗಿ ಮೋಡಿ ಮಾಡಲಿರುವ ಪರೇಶ್ ರಾವಲ್

Posted By:
Subscribe to Filmibeat Kannada

ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕಥೆಯಾಧಾರಿತ ಚಿತ್ರ ಶೀಘ್ರದಲ್ಲೇ ಸೆಟ್ಟೇರುತ್ತಿದೆ. ವಿಭಿನ್ನ ಪಾತ್ರಗಳ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪರೇಶ್ ರಾವಲ್ ಅವರು ಮೋದಿ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಈ ಚಿತ್ರ ಆಗಸ್ಟ್ ನಲ್ಲಿ ಸೆಟ್ಟೇರುತ್ತಿದೆ. ಸಿನಿಮಾ ಒಂದರ ಪ್ರಚಾರ ಕಾರ್ಯಕ್ರಮದಲ್ಲಿ ಪರೇಶ್ ರಾವಲ್ ಅವರು ಈ ವಿಷಯವನ್ನು ತಿಳಿಸಿದರು. "ಮೋದಿ ಅವರ ಸಂಕಲ್ಪ ಶಕ್ತಿ, ದಾರ್ಶನಿಕತೆ, ನಾಯಕತ್ವ ಲಕ್ಷಣಗಳು ನನ್ನ ಪಾತ್ರದಲ್ಲಿ ಪ್ರತಿಬಿಂಬಿಸಲಿವೆ. ಆದರೆ ಮೋದಿಯನ್ನು ಯಾವ ರೀತಿಯಲ್ಲೂ ಅನುಕರಣೆ ಮಾಡುವುದಿಲ್ಲ" ಎಂದಿದ್ದಾರೆ. [ಮೋದಿಯಾಗಿ ಪರೇಶ್, ತಾರೆಗಳ ಜತೆ ಮೋದಿ]

Paresh Rawal's Modi biopic

ಈ ಹಿಂದೆ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗಿ ಚಿತ್ರವೊಂದರಲ್ಲಿ ಪರೇಶ್ ಅಭಿನಯಿಸಿದ್ದರು. ಹಾಲಿ ಬಿಜೆಪಿ ಸಂಸದರೂ ಆಗಿರುವ ಪರೇಶ್ ತನ್ನ ಪಾರ್ಲಿಮೆಂಟ್ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಕಲಾಪದಲ್ಲಿ ನಡೆಯುವ ಚರ್ಚೆಗಳು ನನಗೆ ಸಾಕಷ್ಟು ಉಪಯೋಗವಾಗುತ್ತಿವೆ. ಒಬ್ಬ ಪ್ರಜೆಯಾಗಿ ಅಷ್ಟೇ ಅಲ್ಲದೆ ನಟನಾಗಿಯೂ ಸಾಕಷ್ಟು ಕಲಿಯುತ್ತಿದ್ದೇನೆ ಎಂದಿದ್ದಾರೆ.

ನರೇಂದ್ರ ಮೋದಿ ಅವರ ಜೀವನ ಪಯಣ ನನಗೆ ಸಾಕಷ್ಟು ಸ್ಫೂರ್ತಿ ನೀಡಿದೆ. ಶ್ರೀಸಾಮಾನ್ಯನಾಗಿ ಚಾಯ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಅವರು ಮುಖ್ಯಮಂತ್ರಿ, ಪ್ರಧಾನಿ ಸ್ಥಾನದವರೆಗೂ ಬೆಳೆದದ್ದು ನಿಜಕ್ಕೂ ಅದ್ಭುತ. ಅವರ ಜೀವನದ ವಿವಿಧ ಘಟ್ಟಗಳನ್ನು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸುತ್ತೇವೆ" ಎಂದಿದ್ದಾರೆ ನಿರ್ಮಾಪಕ ಕಮ್ ನಿರ್ದೇಶಕ ಮಿತೇಶ್ ಪಟೇಲ್.

ಅವರ ಬಾಲ್ಯ, ಆರ್ಎಸ್ಎಸ್ ನೊಂದಿಗಿನ ಒಡನಾಡ, ಪ್ರಧಾನಮಂತ್ರಿಯಾಗುವ ತನಕ ಅವರ ಪಯಣವನ್ನು ಚಿತ್ರದಲ್ಲಿ ನೋಡಬಹುದು. ಹಾಗಂತ ಇದು ಮೋದಿ ಅವರ ಯಥಾವತ್ ಜೀವನ ಚರಿತ್ರೆಯಲ್ಲ. ಅವರ ಸ್ಫೂರ್ತಿದಾಯಕ ಅಂಶಗಳನ್ನಿಟ್ಟುಕೊಂಡು ಒಂದಷ್ಟು ಕಾಲ್ಪನಿಕ ಅಂಶಗಳೊಂದಿಗೆ ಕಥೆಯನ್ನು ಹೆಣೆದಿದ್ದೇವೆ ಎನ್ನುತ್ತಾರೆ ಪಟೇಲ್.

ತಮ್ಮ ಕಥೆಗೆ ಮೋದಿ ಅವರ ಒಪ್ಪಿಗೆ ಪಡೆಯದಿದ್ದರೂ ಈ ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿರುವುದಿಲ್ಲ. ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ತಮಗೆ ಇಷ್ಟವಿಲ್ಲ ಎನ್ನುತ್ತಾರೆ ನಿರ್ದೇಶಕರು. ಗುಜರಾತಿನ ವಡೋದರಾ ಮೂಲದ ನಿರ್ದೇಶಕರು ಸದ್ಯಕ್ಕೆ ಯುಎಸ್ಎ (ಕ್ಯಾಲಿಫೋರ್ನಿಯಾ) ಸೆಟ್ಲ್ ಆಗಿದ್ದಾರೆ. (ಏಜೆನ್ಸೀಸ್)

English summary
Actor Paresh Rawal is eagerly looking forward to the shooting of the Narendra Modi biopic and feels it’s a massive responsibility as an artiste to don the role of Indian Prime Minister.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada