»   » ಆಸ್ಕರ್ ಚಿತ್ರ ಗ್ರಂಥಾಲಯಕ್ಕೆ ಪ್ರಭುದೇವ ಚಿತ್ರ

ಆಸ್ಕರ್ ಚಿತ್ರ ಗ್ರಂಥಾಲಯಕ್ಕೆ ಪ್ರಭುದೇವ ಚಿತ್ರ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಡ್ಯಾನ್ಸರ್ ಕಮ್ ನಿರ್ದೇಶಕ ಮೈಸೂರಿನ ಮೂಗುರು ಮೂಲದ ಪ್ರಭುದೇವ ಅವರ ಚಿತ್ರವೊಂದು ಅಕಾಡೆಮಿ ಪ್ರಶಸ್ತಿ (ಆಸ್ಕರ್) ಫಿಲಂ ಲೈಬ್ರರಿ ಸೇರಿದೆ. ಇದರಿಂದ ಆಸ್ಕರ್ ಪ್ರಶಸ್ತಿ ಗೆದ್ದಷ್ಟೇ ಸಂಭ್ರಮದಲ್ಲಿ ಪ್ರಭು ದೇವ ಹಾಗೂ ಅವರ ಚಿತ್ರ ತಂಡ ಕುಣಿದಾಡಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ನ ಲೈಬರಿಗೆ ಪ್ರಭುದೇವ ಅವರು ನಿರ್ದೇಶಿಸಿರುವ ಹಿಂದಿ ಸಿನಿಮಾದ ಚಿತ್ರಕಥೆ ಸೇರ್ಪಡೆಗೊಂಡಿದೆ. ಈ ಚಿತ್ರದ ಸ್ಕ್ರಿಪ್ಟ್ ಇನ್ಮುಂದೆ ಚಿತ್ರ ನಿರ್ಮಾಣಕಾರ, ಸಾಹಿತಿ, ವಿದ್ಯಾರ್ಥಿ, ನಟ, ನಟಿ ಹಾಗೂ ಇನ್ನಿತರ ಸಿನಿಪ್ರೇಮಿಗಳಿಗೆ ಲಭ್ಯವಾಗಲಿದೆ.

ಅಂದ ಹಾಗೆ, ಜಗತ್ತಿನ ಗಮನ ಸೆಳೆದಿರುವ ಪ್ರಭುದೇವ ಅವರ ನಿರ್ದೇಶನದ ಚಿತ್ರದ ಹೆಸರು R...Rajkumar. ಬಾಲಿವುಡ್ ನಲ್ಲಿ ಎಷ್ಟೇನೂ ಸದ್ದು ಮಾಡದ ಆರ್ ರಾಜ್ ಕುಮಾರ್ ಚಿತ್ರ ಹಾಲಿವುಡ್ ಅಂಗಳಕ್ಕೆ ಜಿಗಿದಿದ್ದು ಮಾತ್ರ ಅಚ್ಚರಿಯ ಸಂಗತಿ. ಶಹೀದ್ ಕಪೂರ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯಿಸಿರುವ ಈ ಚಿತ್ರ ಪಕ್ಕಾ ಠಪೋರಿ ಸ್ಟೈಲ್ ಲವ್ ಸ್ಟೋರಿ ಕಥೆ ಹೊಂದಿದೆ.

R… Rajkumar's Screenplay Goes To Oscars

ಜಬ್ ವೀ ಮೆಟ್, ಕಮೀನೆ ನಂತರ ಶಹೀದ್ ಕಪೂರ್ ಅವರ ವೃತ್ತಿ ಬದುಕಿನಲ್ಲಿ ಆರ್ ರಾಜ್ ಕುಮಾರ್ ತಕ್ಕಮಟ್ಟಿನ ಯಶಸ್ಸು ತಂದುಕೊಟ್ಟ ಚಿತ್ರ. ಆದರೆ, ವಿಮರ್ಶಕರಿಂದ ಹೆಚ್ಚಿನ ಮೆಚ್ಚುಗೆ ಈ ಚಿತ್ರಕ್ಕೆ ಸಿಕ್ಕಿರಲಿಲ್ಲ. ಪ್ರಭುದೇವ, ಸುನಿಲ್ ಅಗರವಾಲ್, ರವಿ ಎಸ್ ಸುಂದರಂ ಅವರ ಸೃಜನಶೀಲತೆಗೆ ವಿಶ್ವಮಾನ್ಯತೆ ಸಿಕ್ಕಿದೆ. ಈ ಚಿತ್ರಕ್ಕೆ ಶಿರಾಜ್ ಅಹ್ಮದ್ ಅವರು ಸಂಭಾಷಣೆ ಒದಗಿಸಿದ್ದರು.

ಅಕಾಡೆಮಿ ಲೈಬ್ರರಿಗೆ ಆರ್ ರಾಜ್ ಕುಮಾರ್ ಚಿತ್ರಕಥೆ ಸೇರ್ಪಡೆಗೊಂಡಿದ್ದನ್ನು ಪ್ರಭುದೇವ ಅವರು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ ಖಚಿತಪಡಿಸಿದ್ದಾರೆ. ಸದ್ಯ ಬ್ಯಾಂಕಾಕಿನಲ್ಲಿ ತಾವು ನಿರ್ದೇಶಿರುತ್ತಿರುವ ಅಜಯ್ ದೇವಗನ್ ನಾಯಕತ್ವದ ಹೊಸ ಚಿತ್ರ ಆಕ್ಷನ್ ಜಾಕ್ಸನ್ ಚಿತ್ರೀಕರಣದಲ್ಲಿ ಪ್ರಭುದೇವ ಬ್ಯುಸಿಯಾಗಿದ್ದಾರೆ. ಆಸ್ಕರ್ ಲೈಬ್ರರಿಗೆ ನನ್ನ ನಿರ್ದೇಶನದ ಚಿತ್ರವೊಂದು ಸೇರ್ಪಡೆಗೊಳ್ಳುತ್ತಿರುವ ವಿಷಯ ಕೇಳಿ ಥ್ರಿಲ್ ಆಗಿಬಿಟ್ಟೆ. ನನ್ನ ಚಿತ್ರದ ನಿರ್ಮಾಪಕ ವಿಕಿ ರಾಜನಿ ಆವರ ಪ್ರಯತ್ನ ಸಫಲವಾಗಿದೆ. ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಮೂರು ರಿಮೇಕ್ ಚಿತ್ರಗಳನ್ನು ನೀಡಿದೆ. ಆದರೆ, ಆರ್ ರಾಜ್ ಕುಮಾರ್ ಸ್ವಂತವಾಗಿ ಕಥೆ ಬರೆದ ಚಿತ್ರವಾಗಿದ್ದು, ಆಸ್ಕರ್ ಅಕಾಡೆಮಿ ಮಾನ್ಯತೆ ಸಿಕ್ಕಿದ್ದು ತುಂಬಾ ಖುಷಿಯಾಗಿದೆ ಎಂದಿದ್ದಾರೆ.

ಲಗಾನ್, ಚಕ್ ದೆ ಇಂಡಿಯಾ, ರಾಜ್ ನೀತಿ ಹಾಗೂ ದೇವದಾಸ್ ಚಿತ್ರಗಳ ಸಾಲಿಗೆ ಈಗ ಆರ್ ರಾಜ್ ಕುಮಾರ್ ಚಿತ್ರ ಸೇರ್ಪಡೆಗೊಂಡಿದೆ. ವಿವಾದಿತ ಚಿತ್ರ ಡ್ಯಾಮ್ 999 ಕೂಡಾ ಭಾರತೀಯ ಚಲನಚಿತ್ರಗಳ ವಿಭಾಗದಲ್ಲಿ ಬಿಡುಗಡೆಗೆ ಮುನ್ನವೇ ಸೇರ್ಪಡೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Prabhu Deva is on cloud nine after his film R... Rajkumar's screenplay is chosen to feature in the Library of the Academy of Motion Picture Arts and Sciences. Now it will be accessible to film makers, writers, students, actors and other film enthusiasts.
Please Wait while comments are loading...