For Quick Alerts
  ALLOW NOTIFICATIONS  
  For Daily Alerts

  'ದಬ್ಬಂಗ್ 3'ಗೆ ನಿರ್ದೇಶನ ಮಾಡ್ತಾರೆ ಪ್ರಭುದೇವ!

  By Harshitha
  |

  2010 ರಲ್ಲಿ ಬಿಡುಗಡೆ ಆಗಿದ್ದ ಆಕ್ಷನ್ ಸಿನಿಮಾ 'ದಬ್ಬಂಗ್' ಬಾಲಿವುಡ್ ನಲ್ಲಿ ಹೊಸ ಸಂಚಲನ ಹುಟ್ಟುಹಾಕಿತ್ತು. ಚುಲ್ ಬುಲ್ ಪಾಂಡೆಯಾಗಿ ಖಾಕಿ ತೊಟ್ಟಿದ್ದ ಸಲ್ಮಾನ್ ಖಾನ್ ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. 'ದಬ್ಬಂಗ್'ಗೆ ಸಿಕ್ಕ ಯಶಸ್ಸಿನಿಂದ ಪ್ರೇರಿತರಾಗಿ ಅರ್ಬಾಝ್ ಖಾನ್ 'ದಬ್ಬಂಗ್ 2' ಚಿತ್ರ ರೆಡಿ ಮಾಡಿದರು.

  ಅಭಿನವ್ ಕಶ್ಯಪ್ ನಿರ್ದೇಶನದ 'ದಬ್ಬಂಗ್' ಹಾಗೂ ಅರ್ಬಾಝ್ ಖಾನ್ ಆಕ್ಷನ್ ಕಟ್ ಹೇಳಿದ 'ದಬ್ಬಂಗ್ 2'... ಎರಡೂ ಸೂಪರ್ ಸಕ್ಸಸ್ ಆದ್ಮೇಲೆ ಇದೀಗ 'ದಬ್ಬಂಗ್ 3' ಸೆಟ್ಟೇರಲು ಸಜ್ಜಾಗಿದೆ. 'ದಬ್ಬಂಗ್ 3' ಚಿತ್ರಕ್ಕೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಡೈರೆಕ್ಟರ್ ಕ್ಯಾಪ್ ತೊಡುವುದು ಖಚಿತವಾಗಿದೆ.

  ''ಕಳೆದ ವಾರವಷ್ಟೇ ನಾನು ಮುಂಬೈನಲ್ಲಿದ್ದೆ. 'ದಬ್ಬಂಗ್ 3' ಚಿತ್ರಕ್ಕೆ ನಾನು ನಿರ್ದೇಶನ ಮಾಡುತ್ತಿರುವುದು ನಿಜ. ಸಲ್ಮಾನ್ ಖಾನ್ ಹಾಗೂ ಅರ್ಬಾಝ್ ಖಾನ್ ಆಫರ್ ಮಾಡಿದಾಗ ಇಲ್ಲ ಎನ್ನಲು ಸಾಧ್ಯವೇ ಆಗಲಿಲ್ಲ'' ಎಂದಿದ್ದಾರೆ ನೃತ್ಯ ಸಂಯೋಜಕ ಕಮ್ ನಿರ್ದೇಶಕ ಪ್ರಭುದೇವ.

  ಸಲ್ಮಾನ್ ಖಾನ್ ಈಸ್ ಬ್ಯಾಕ್: ಬಾಕ್ಸ್ ಆಫೀಸ್ ನಲ್ಲಿ 'ಟೈಗರ್' ಹವಾ

  ಅಷ್ಟಕ್ಕೂ, ಸಲ್ಮಾನ್ ಖಾನ್ ಗೆ ಪ್ರಭುದೇವ ನಿರ್ದೇಶನ ಮಾಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. 2009 ರಲ್ಲೇ ಸಲ್ಲು ಅಭಿನಯದ 'ವಾಂಟೆಡ್' ಚಿತ್ರಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದರು. ಸಾಲದಕ್ಕೆ, ಬಾಲಿವುಡ್ ನಲ್ಲಿ 'ರೌಡಿ ರಾಥೋರ್', 'ಆಕ್ಷನ್ ಜಾಕ್ಸನ್', 'ಸಿಂಗ್ ಈಸ್ ಬ್ಲಿಂಗ್' ಎಂಬ ಸಿನಿಮಾಗಳನ್ನು ನಿರ್ದೇಶಿಸಿ ಪ್ರಖ್ಯಾತಿ ಪಡೆದಿದ್ದಾರೆ ಪ್ರಭುದೇವ.

  ಅಂದ್ಹಾಗೆ, 'ದಬ್ಬಂಗ್ 3' ಚಿತ್ರದಲ್ಲೂ ಚುಲ್ ಬುಲ್ ಪಾಂಡೆ ಆಗಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ಹಾಗೂ ಅರ್ಬಾಝ್ ಖಾನ್ ಇರ್ತಾರೆ. ಸಾಜಿದ್-ವಾಜಿದ್ ಸಂಗೀತ ಇರಲಿದೆ. ಇನ್ನು ಕೆಲವೇ ತಿಂಗಳಲ್ಲಿ 'ದಬ್ಬಂಗ್ 3' ಸಿನಿಮಾ ಸೆಟ್ಟೇರಲಿದೆ.

  English summary
  Choreographer cum Director Prabhudeva to direct Bollywood Actor Salman Khan's Dabangg 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X