twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ದೇಶ ಸಂಕಷ್ಟದಲ್ಲಿದೆ ಸಹಾಯ ಮಾಡಿ: ಅಮೆರಿಕ ಅಧ್ಯಕ್ಷರಿಗೆ ಪ್ರಿಯಾಂಕಾ ಮನವಿ

    |

    ಭಾರತ ಕೋವಿಡ್-19ನಿಂದ ತತ್ತರಿಸಿ ಹೋಗಿದೆ. ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದಾರೆ. ಸಾವಿರಾರು ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರತದ ಈ ಸಂಕಷ್ಟ ಪರಿಸ್ಥಿತಿ ಈಗ ಇಡೀ ವಿಶ್ವದ ಗಮನ ಸೆಳೆದಿದೆ.

    Recommended Video

    ನನ್ನ ದೇಶ ಕಷ್ಟದಲ್ಲಿದೆ ಎಂದು ಅಮೆರಿಕಾ ಸಹಾಯ ಕೇಳಿದ ನಟಿ ಪ್ರಿಯಾಂಕ ಚೋಪ್ರಾ | Filmibeat Kannada

    ಈ ಸಮಯದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಸಹಾಯ ಮಾಡಿ ಎಂದು ಅಮೆರಿಕ ಅಧ್ಯಕ್ಷರನ್ನು ಕೇಳಿಕೊಂಡಿದ್ದಾರೆ. ಪ್ರಿಯಾಂಕಾ ಸದ್ಯ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಕೊರೊನಾದಿಂದ ಭಾರತೀಯರು ನರಳುತ್ತಿರುವುದನ್ನು ನೋಡಿ ಪ್ರಿಯಾಂಕಾ ಅಮೆರಿಕ ಅಧ್ಯಕ್ಷರಿಗೆ ಟ್ವೀಟ್ ಮೂಲಕ ಸಹಾಯ ಕೋರಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಉಡುಪಿಯ ಬಾಣಸಿಗ: ಮೆನುನಲ್ಲಿ ಏನಿದೆ?ಪ್ರಿಯಾಂಕಾ ಚೋಪ್ರಾ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಉಡುಪಿಯ ಬಾಣಸಿಗ: ಮೆನುನಲ್ಲಿ ಏನಿದೆ?

    ಹೆಚ್ಚಿನ ಲಸಿಕೆ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ, 'ನನ್ನ ಹೃದಯ ಛಿದ್ರವಾಗಿದೆ. ಭಾರತ ಕೋವಿಡ್-19ನಿಂದ ನರಳುತ್ತಿದೆ. ಯುಎಸ್ ಅಗತ್ಯಕ್ಕಿಂತ 550ಮಿ ಹೆಚ್ಚಿನ ಲಸಿಕೆಯನ್ನು ಬೇಡಿಕೆ ಇಟ್ಟಿದೆ. ಆದರೆ ನನ್ನ ದೇಶದ ಪರಿಸ್ಥಿತಿ ಸಂಕಷ್ಟದಲ್ಲಿದೆ. ನೀವು ತುರ್ತಾಗಿ ಭಾರತಕ್ಕೆ ಲಸಿಕೆ ಹಂಚಿಕೊಳ್ಳುತ್ತೀರಾ? ಎಂದು ಕೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಜೊ ಬೈಡನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

    Priyanka Chopra seeks vaccine for India as US ordered more than needed

    ಪ್ರಿಯಾಂಕಾ ಟ್ವೀಟ್ ಗೆ ಗ್ಲೋಬಲ್ ಸಿಟಿಜನ್ ಪ್ರತಿಕ್ರಿಯೆ ನೀಡಿದೆ. ಲಸಿಕೆ ಸಮಾನತೆ ಬಗ್ಗೆ ಧ್ವನಿ ಎತ್ತಿರುವ ಪ್ರಿಯಾಂಕಾಗೆ ಧನ್ಯವಾದ ತಿಳಿಸಿರುವ ಗ್ಲೋಬಲ್ ಸಿಟಿಜನ್, 'ಆದಷ್ಟು ಬೇಗ ಭಾರತಕ್ಕೆ ಲಸಿಕೆ ನೀಡುತ್ತೀರಾ, ಭಾರತಕ್ಕೆ ತುರ್ತಾಗಿ ಬೇಕಾಗಿದೆ' ಎಂದು ಕೇಳಿಕೊಂಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಾತುಗಳು ಹೇಳಿಬರುತ್ತಿದೆ. ಪ್ರಿಯಾಂಕಾ ಚೋಪ್ರಾ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಈ ಸಂಕಷ್ಟದ ಸಮಯದಲ್ಲಿ ಅಗತ್ಯ ಆಸ್ಪತ್ರೆ ಸೇವೆಗೆ ಮನವಿ ಮಾಡುವ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ.

    English summary
    Actress Priyanka Chopra seeks vaccine for India as US ordered more than needed.
    Tuesday, April 27, 2021, 8:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X