For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರ ಬ್ಲೂ ಫಿಲ್ಮ್ ದಂಧೆ ಪ್ರಕರಣ: ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬ್ಲೂ ಫಿಲ್ಮ್ ದಂಧೆ ಪ್ರಕರಣ ಸಂಬಂಧ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಕ್ರೈಮ್ ಬ್ರಾಂಚ್ ವಿಶೇಷ ವಿಭಾಗ ಸಮನ್ಸ್ ಜಾರಿ ಮಾಡಿದೆ. ನಟಿ ಶೆರ್ಲಿನ್‌ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

  ಗುರುವಾರ ಬೆಳಗ್ಗೆ ರಾಜ್ ಕುಂದ್ರ ಒಡೆತನದ ಆರ್ಮ್ ಸ್ಪ್ರೈಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಸೌರಭ್ ಕುಶ್ವಾ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ವಿಚಾರಣೆಗೆ ಒಳಪಡಿಸಿತ್ತು. ಸೌರಭ್ ವಿಚಾರಣೆ ಬೆನ್ನಲ್ಲೇ ಶೆರ್ಲಿನ್ ಚೋಪ್ರಾಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

  'ಕಿಸ್ ಮಾಡಲು ಯತ್ನ, ಶಿಲ್ಪಾ ಜೊತೆ ಸಂಬಂಧ ಸರಿಯಿಲ್ಲ': ಶೆರ್ಲಿನ್ ಚೋಪ್ರಾ ಬಾಂಬ್'ಕಿಸ್ ಮಾಡಲು ಯತ್ನ, ಶಿಲ್ಪಾ ಜೊತೆ ಸಂಬಂಧ ಸರಿಯಿಲ್ಲ': ಶೆರ್ಲಿನ್ ಚೋಪ್ರಾ ಬಾಂಬ್

  ಈ ಮಧ್ಯೆ ಮುಂಬೈ ಸೆಷನ್ಸ್ ನ್ಯಾಯಾಲಯ ಗುರುವಾರ ಉದ್ಯಮಿ ರಾಜ್ ಕುಂದ್ರ ಮತ್ತು ಅವರ ಸಹವರ್ತಿ ರಯಾನ್ ಥೋರ್ಪೆ ಜಾಮೀನು ಅರ್ಜಿ ವಿಚಾರಣೆ ಆಗಸ್ಟ್ 10ರಂದು ನಡೆಸುವುದಾಗಿ ಹೇಳಿದೆ. ರಾಜ್ ಕುಂದ್ರ ಮತ್ತು ಸಹಚರ ರಿಯಾನ್ ಥೋರ್ಪೆ ತಮ್ಮ ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ತನ್ನ ಅದೇಶವನ್ನು ಕಾಯ್ದಿರಿಸಿತ್ತು.

  ವಿಚಾರಣೆ ವೇಳೆ ರಾಜ್ ಕುಂದ್ರ ಲ್ಯಾಪ್‌ಟಾಪ್‌ನಲ್ಲಿ 68ಕ್ಕೂ ಅಧಿಕ ಅಶ್ಲೀಲ ವೀಡಿಯೋಗಳು ಕಂಡುಬಂದಿವೆ ಎಂದು ತನಿಖಾಧಿಕಾರಿಗಳು ನ್ಯಾಯಾಲಕ್ಕೆ ತಿಳಿಸಿದ್ದರು. ವಿಡಿಯೋ ಜೊತೆಗೆ ಅಶ್ಲೀಲ ವಿಡಿಯೋಗೆ ಸಂಬಂಧಿಸಿದ ಸ್ಕ್ರಿಪ್ಟ್ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಇನ್ನು ನಟಿ ಶೆರ್ಲಿನ್ ಚೋಪ್ರಾ ಕಳೆದ ಏಪ್ರಿಲ್ ತಿಂಗಳಲ್ಲೇ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಈ ದೂರಿನಲ್ಲಿ ರಾಜ್ ಕುಂದ್ರಾ ನನ್ನ ಮೇಲೆ ಲೈಂಗಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. 2019ರಲ್ಲಿ ಬಿಸಿನೆಸ್ ಆಪ್ ಸಂಬಂಧ ತನ್ನನ್ನು ಮೀಟಿಂಗ್‌ಗೆ ಕರೆದಿದ್ದ ರಾಜ್ ಕುಂದ್ರಾ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರ ಬಹಿರಂಗವಾಗಿದೆ.

  ಈ ಬಗ್ಗೆ ಬಹಿರಂಗ ಪಡಿಸಿದ್ದ ಶೆರ್ಲಿನ್, ''ರಾಜ್ ಕುಂದ್ರ ಮೀಟಿಂಗ್ ಎಂದು ಕರೆದು ನನ್ನನ್ನ ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು. ಇದಕ್ಕೆ ನಾನು ವಿರೋಧಿಸಿದೆ. ಆಗ ನಮ್ಮಿಬ್ಬರ ನಡುವೆ ಜಗಳ ಶುರುವಾಯಿತು. ನನ್ನನ್ನು ಎಳೆದಾಡಿದರು. ಭಯದಿಂದ ನಾನು ಕೇಳಿಕೊಂಡೆ. ಆದರೂ ರಾಜ್ ಕುಂದ್ರಾ ಸುಮ್ಮನಾಗಲಿಲ್ಲ. ಅವರಿಂದ ತಪ್ಪಿಸಿಕೊಳ್ಳಲು ನಾನು ಶೌಚಾಲಯದಲ್ಲಿ ಅಡಗಿ ಕುಳಿತಿದ್ದೆ'' ಎಂದು ಹೇಳಿದ್ದರು.

  ಇನ್ನು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಂತೆಯೂ ಶೆರ್ಲಿನ್ ಚೋಪ್ರಾ ಆಘಾತಕಾರಿ ವಿಷಯ ಹೊರಹಾಕಿದ್ದಾರೆ. ''ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿಯಿಲ್ಲ, ನಾನು ಸದಾ ಒತ್ತಡದಲ್ಲಿದ್ದೇನೆ'' ಎಂದು ಶೆರ್ಲಿನ್ ಬಳಿ ರಾಜ್ ಕುಂದ್ರಾ ಹೇಳಿಕೊಂಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.

  ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ಜುಲೈ 20 ರಂದು ಕುಂದ್ರಾ ಸಂಸ್ಥೆಯಲ್ಲಿ ಐಟಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಥೋರ್ಪೆಯನ್ನು ಅರೆಸ್ಟ್ ಮಾಡಲಾಗಿತ್ತು. ಬಳಿಕ ರಾಜ್ ಕುಂದ್ರ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇದೀಗ ಕುಂದ್ರ ನ್ಯಾಯಾಂಗ ಬಂಧನದಲ್ಲಿದ್ದಾರೆ.

  ಕುಂದ್ರ ಬಂಧನದ ಬೆನಲ್ಲೇ ಬ್ಲೂ ಫಿಲ್ಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ನಟನೆಯ ಹೆಸರು ಕೇಳಿಬರುತ್ತಿದೆ. ಶೆರ್ಲಿನ್ ಚೋಪ್ರಾ, ಗೆಹನಾ ವಸಿಷ್ಠ್ ಮತ್ತು ಪೂನಂ ಪಾಂಡೆ ಹೆಸರು ಚಾಲ್ತಿಯಲ್ಲಿದೆ. ಗೆಹನಾ ರಾಜ್ ಕುಂದ್ರ ಪರ ಮಾತನಾಡಿದ್ದು, ರಾಕ್ ಕುಂದ್ರ ಮಾಡಿದ್ದು ಅಶ್ಲೀಲ ವಿಡಿಯೋ ಅಲ್ಲ ಶೃಂಗಾರದ (ಎರೋಟಿಕಾ) ವಿಡಿಯೋ ಎಂದು ಹೇಳಿದ್ದಾರೆ. ಇನ್ನು ನಟಿ ಪೂನಂ ಪಾಂಡೆ ಈ ಹಿಂದೆಯೇ ಕುಂದ್ರ ವಿರುದ್ಧ ಕೊರ್ಟ್ ಮೆಟ್ಟಿಲೇರಿದ್ದರು.

  English summary
  Property cell of Mumbai crime branch summons Sherlyn Chopra in connection to Raj Kundra porn case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X