»   » ನಟಿ ರಾಧಿಕಾ ಗಾಂಧಿಗೆ ಬಾಲಿವುಡ್ ನಲ್ಲಿ ಚಾನ್ಸ್

ನಟಿ ರಾಧಿಕಾ ಗಾಂಧಿಗೆ ಬಾಲಿವುಡ್ ನಲ್ಲಿ ಚಾನ್ಸ್

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ಬೆಡಗಿ ಪೂಜಾಗಾಂಧಿ ತಂಗಿ ರಾಧಿಕಾ ಗಾಂಧಿಗೆ ಬಾಲಿವುಡ್ ನಲ್ಲಿ ಚಾನ್ಸ್ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ಅಕ್ಕನಷ್ಟು ತಂಗಿ ಕ್ಲಿಕ್ ಆಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಧಿಕಾ ಕೆಲವು ಚಿತ್ರಗಳಲ್ಲಿ ಅಭಿನಯಿಸಿದರೂ ಆರಕ್ಕೂ ಏರಲಿಲ್ಲ ಮೂರಕ್ಕೂ ಇಳಿಯಲಿಲ್ಲ.

ಸದ್ಯಕ್ಕೆ ರಾಧಿಕಾ ಗಾಂಧಿ ಕನ್ನಡದ 'ಅಕ್ಕಪಕ್ಕ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೆ ಅವರ ತಾಯಿ ಜ್ಯೋತಿ ಗಾಂಧಿ ಜೊತೆ ರಾಧಿಕಾ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಇವರು ಹಿಂದಿಯಲ್ಲಿ ಯಾರ ಜೊತೆ ಅಭಿನಯಿಸುತ್ತಿದ್ದಾರೆ, ಚಿತ್ರದ ಹೆಸರು ಕುಲ ಗೋತ್ರ ನಕ್ಷತ್ರಗಳೇನು ಎಂಬುದು ಇನ್ನಷ್ಟ್ಟೇ ಗೊತ್ತಾಗಬೇಕಾಗಿದೆ.

ಪೂಜಾಗಾಂಧಿ ಮದುವೆ, ನಿಶ್ಚಿತಾರ್ಥ ಮುರಿದುಬಿದ್ದದ್ದು, ಡಾ.ಕಿರಣ್ ಎಂಬುವರು ಅವರ ವಿರುದ್ಧ ದೂರು ನೀಡಿದ್ದು ಈ ಎಲ್ಲಾ ಬೆಳವಣಿಗೆಳಿಂದ ಪೂಜಾಗಾಂಧಿ ಕುಟುಂಬ ಹೈರಾಣಾಗಿತ್ತು. ಈಗ ರಾಧಿಕಾ ಗಾಂಧಿ ಬಾಲಿವುಡ್ ನಲ್ಲಿ ಚಾನ್ಸ್ ಸಿಕ್ಕಿರುವುದು ಅವರ ಕುಟುಂಬಕ್ಕೆ ಒಂದಷ್ಟು ಖುಷಿ ಕೊಟ್ಟಿದೆ.

ಈಗಾಗಲೆ ಬಾಲಿವುಡ್ ಚಿತ್ರರಂಗಕ್ಕೆ ನಿಧಿ ಸುಬ್ಬಯ್ಯ, ಐಂದ್ರಿತಾ ರೇ ಅಡಿಯಿಟ್ಟಿದ್ದಾರೆ. ಈಗ ರಾಧಿಕಾ ಗಾಂಧಿ ಕೂಡ ಅದೇ ಹಾದಿಯಲ್ಲಿ ಸಾಗಿರುವುದು ವಿಶೇಷ. ಚಿಕ್ಕಮಗಳೂರ ಚಿಕ್ಕಮಲ್ಲಿಗೆ, ಕಲಾಕಾರ್, ಶ್ರೀಹರಿಕಥೆ, ಪಂಚಾಮೃತ, ಹೊಸ ಪ್ರೇಮ ಪುರಾಣ ಚಿತ್ರಗಳಲ್ಲಿ ರಾಧಿಕಾ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Kannada actress Radhika Gandhi, she has a sister of actress Pooja Gandhi is now debuts in bollywood. But details of the movie not revealed by her family sources. At present she working in Kannada film Akka Pakka.
Please Wait while comments are loading...