For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಇಷ್ಟದ ಹುಡುಗಿ ಬಗ್ಗೆ ಬಾಯ್ಬಿಟ್ಟ ರಣ್ಬೀರ್ ಕಪೂರ್

  By Bharath Kumar
  |

  'ಸಂಜು' ಚಿತ್ರದ ಟ್ರೈಲರ್ ಮೂಲಕ ಬಾಲಿವುಡ್ ನಟ ರಣ್ಬೀರ್ ಕಪೂರ್ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಸಂಜಯ್ ದತ್ ಅವರ ಬಯೋಪಿಕ್ ನಲ್ಲಿ ರಣ್ಬೀರ್ ಅಭಿನಸಿದ್ದು, 'ಸಂಜು' ಪಾತ್ರಕ್ಕೆ 100 % ಜೀವ ತುಂಬಿರುವ ಬಗ್ಗೆ ಟ್ರೈಲರ್ ನಲ್ಲೇ ಸುಳಿವು ನೀಡಿದ್ದಾರೆ. ಹೀಗಾಗಿ, ರಣ್ಬೀರ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಈ ಮಧ್ಯೆ ರಣ್ಬೀರ್ ಕಪೂರ್ ಅವರ ಪ್ರೀತಿಯ ವಿಚಾರವೂ ಅಷ್ಟೇ ಸುದ್ದಿ ಮಾಡುತ್ತಿದೆ. ನಟಿ ಆಲಿಯಾ ಭಟ್ ಜೊತೆ ರಣ್ಬೀರ್ ಕಪೂರ್ ಡೇಟಿಂಗ್ ನಲ್ಲಿದ್ದಾರೆ ಎಂಬ ಮಾತು ಬಿಟೌನ್ ನಲ್ಲಿ ಗಿರಿಗಿಟ್ಲೆ ಹೊಡಿತಿದೆ. ಇದೀಗ, ಈ ವಿಷ್ಯದ ಬಗ್ಗೆ ರಣ್ಬೀರ್ ಮೌನಮುರಿದಿದ್ದಾರೆ.

  ಆಲಿಯಾ-ರಣ್ಬೀರ್ ಮದುವೆ ಬಗ್ಗೆ ಸುಳಿವು ನೀಡಿದ ಟ್ವೀಟ್.!ಆಲಿಯಾ-ರಣ್ಬೀರ್ ಮದುವೆ ಬಗ್ಗೆ ಸುಳಿವು ನೀಡಿದ ಟ್ವೀಟ್.!

  ಜಿಕ್ಯೂ ಸಂದರ್ಶನದಲ್ಲಿ ಭಾಗಿಯಾಗಿದ್ದ ರಣ್ಬೀರ್ ಬಳಿ ನಿರೂಪಕರು ''ಆಲಿಯಾ ಭಟ್ ಜೊತೆ ಡೇಟಿಂಗ್ ನಲ್ಲಿದ್ದೀರಾ...?'' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಣ್ಬೀರ್ ''ಇದು ನಿಜಕ್ಕೂ ಹೊಸದಾಗಿದೆ. ಈ ಬಗ್ಗೆ ನಾನು ಈಗಲೇ ಮಾತನಾಡಲು ಇಷ್ಟಪಡುವುದಿಲ್ಲ. ಇನ್ನು ಸಮಯ ಇದೆ ಎಂದುಕೊಂಡಿದ್ದೇನೆ'' ಎಂದು ಹೇಳುವ ಮೂಲಕ ಪರೋಕ್ಷವಾಗಿ ಇಬ್ಬರ ಸಂಬಂಧದ ಬಗ್ಗೆ ಒಪ್ಪಿಕೊಂಡಿದ್ದಾರೆ.

  'ಕಾಸ್ಟಿಂಗ್ ಕೌಚ್' ಎದುರಾದ್ರೆ ಹೀಗೆ ಮಾಡಿ ಎಂದ ಆಲಿಯಾ ಭಟ್ 'ಕಾಸ್ಟಿಂಗ್ ಕೌಚ್' ಎದುರಾದ್ರೆ ಹೀಗೆ ಮಾಡಿ ಎಂದ ಆಲಿಯಾ ಭಟ್

  ''ನಟಿಯಾಗಿ, ವ್ಯಕ್ತಿಯಾಗಿ ಆಲಿಯಾ ಭಟ್ ಅವರನ್ನ ಹೆಚ್ಚು ಇಷ್ಟಪಡುತ್ತೇನೆ. ಅವರ ಜೊತೆಗಿನ ಬಾಂಧವ್ಯ ತುಂಬ ಹೊಸದಾಗಿದೆ. ಸಂಬಂಧಕ್ಕೆ ಮಹತ್ವ ನೀಡುತ್ತೇನೆ'' ಎಂದು ಹೇಳಿ ತಮ್ಮ ಗೆಳತಿಯ ಗುಣವನ್ನ ಹೊಗಳಿದ್ದಾರೆ.

  ಮತ್ತೊಂದೆಡೆ ಆಲಿಯಾ ಭಟ್ ಕೂಡ ರಣ್ಬೀರ್ ಕಪೂರ್ ಅವರನ್ನ ಒಪ್ಪಿಕೊಂಡಿದ್ದು, ಈಗಾಗಲೇ ಮನೆಯಲ್ಲಿ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೊ ಒಂದು ಹಂತ ಮುಂದೆ ಹೋಗಿರುವ ಕುಟುಂಬಗಳು ಈ ಬಗ್ಗೆ ಪರಸ್ಪರ ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.

  ಅದನ್ನ ಹೊರತು ಪಡಿಸಿದ್ರೆ, 'ಸಂಜು' ಚಿತ್ರದಲ್ಲಿ ರಣ್ಬೀರ್ ಕಪೂರ್ ನಟಿಸಿದ್ರೆ, 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಣ್ಬೀರ್ ಮತ್ತು ಆಲಿಯಾ ಭಟ್ ಜೊತೆಯಾಗಿ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಬಹುಶಃ ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದಲ್ಲಿ ಈ ಜೋಡಿಯೂ ಸಪ್ತಪದಿ ತುಳಿಯಬಹುದು.

  English summary
  Ranbir Kapoor confirms he is dating Alia Bhatt, says it’s really new. Ranbir has accepted that he is dating Alia Bhatt. He also said he is more mature today to handle relationships.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X