For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಸಿನಿಮಾ ನಿರ್ಮಾಪಕನ ಮೇಲೆ ಅತ್ಯಾಚಾರ ಆರೋಪ: ಸುಳ್ಳೆಂದು ಸಾಕ್ಷ್ಯ ನೀಡಿದ ಟಿ-ಸೀರೀಸ್

  |

  ಭಾರತ ಚಿತ್ರರಂಗದ ದೊಡ್ಡ ಬಜೆಟ್ ಸಿನಿಮಾ ನಿರ್ಮಾಪಕರಲ್ಲೊಬ್ಬರಾಗಿರುವ ಭೂಷಣ್ ಕುಮಾರ್ ವಿರುದ್ಧ ಮಾಡೆಲ್ ಒಬ್ಬರು ಅತ್ಯಾಚಾರ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  ಭೂಷಣ್ ಕುಮಾರ್ ವಿರುದ್ಧ ಮುಂಬೈನ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಭೂಷಣ್ ಕುಮಾರ್ ಒಡೆತನದ ಟಿ-ಸೀರೀಸ್ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಆಗಿದ್ದು, ''ಈ ಆರೋಪ ಸುಳ್ಳಾಗಿದ್ದು, ಟಿ-ಸೀರೀಸ್ ಸಂಸ್ಥೆಯ ಹಾಗೂ ಅದರ ಚೇರ್‌ಮನ್‌ರ ಮಾನಹಾನಿ ಮಾಡಲು ಈ ರೀತಿ ಸುಳ್ಳು ಆರೋಪ ಮಾಡಲಾಗಿದೆ'' ಎಂದಿದ್ದಾರೆ.

  ಮಲ್ಲಿಕಾರ್ಜುನ ಪೂಜಾರಿ ಎಂಬ ರಾಜಕಾರಣಿಯೊಬ್ಬ ಭೂಷಣ್‌ ಕುಮಾರ್ ಅವರಿಂದ ಹಣ ವಸೂಲಿ ಮಾಡಲು ಈ ತಂತ್ರ ಹೆಣೆದಿದ್ದಾನೆ ಎಂದಿರುವ ಟಿ-ಸೀರೀಸ್. ಮಲ್ಲಿಕಾರ್ಜುನ ಪುಜಾರಿಯು ಮಾಡೆಲ್ ಒಬ್ಬರನ್ನು ಸಂಪರ್ಕಿಸಿ ಇನ್ನೂ ಕೆಲವರನ್ನು ಸೇರಿಸಿಕೊಂಡು ಈ ವ್ಯೂಹ ರಚಿಸಿದ್ದಾರೆ ಎಂದಿದೆ ಟಿ-ಸೀರೀಸ್.

  ಕಳೆದ ತಿಂಗಳು ಜೂನ್‌ನಲ್ಲಿ ಮಲ್ಲಿಕಾರ್ಜುನ್ ಪೂಜಾರಿ, ಭೂಷಣ್ ಕುಮಾರ್ ಅವರನ್ನು ಸಂಪರ್ಕಿಸಿ ಬೆದರಿಕೆ ಹಾಕಿದ್ದರು, ಹಣ ನೀಡುವಂತೆ ಒತ್ತಾಯಿಸಿದ್ದರು. ಹಣ ನೀಡಲಿಲ್ಲವೆಂದರೆ ಹುಡುಗಿಯೊಬ್ಬಳು ಬಂದು ಸುಳ್ಳು ದೂರು ನೀಡಿ ಮಾನಹಾನಿ ಮಾಡುತ್ತಾಳೆ ಎಂದು ಬೆದರಿಸಿದ್ದರು. ಈ ಬೆದರಿಕೆ ವಿರುದ್ಧ ಭೂಷಣ್ ಕುಮಾರ್ ಅವರು ಜುಲೈ 1 ನೇ ತಾರೀಖಿನಂದು ಲಿಖಿತ ದೂರು ಸಹ ನೀಡಿದ್ದರು ಎಂದಿದೆ ಟಿ-ಸೀರೀಸ್.

  ಜುಲೈ 5ನೇ ತಾರೀಕು ಟಿ-ಸೀರೀಸ್‌ನ ಕೃಷ್ಣ ಕುಮಾರ್ ಅನ್ನು ದಿ ರೆಗೆನ್ಜಾ ಬೈ ತುಂಗಾ ಹೋಟೆಲ್‌ಗೆ ಬರಲು ಹೇಳಿದ್ದ ರಾಜಕಾರಣಿ ಮಲ್ಲಿಕಾರ್ಜುನ ಪೂಜಾರಿ ಅಲ್ಲಿ ಕೃಷ್ಣ ಕುಮಾರ್‌ಗೆ ಕೆಲವು ಸಂದೇಶಗಳನ್ನು ತೋರಿಸಿ ಯುವತಿಯು ಭೂಷಣ್ ಕುಮಾರ್ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಆತ ತೋರಿಸಿದ ಸಂದೇಶಗಳು ಭೂಷಣ್ ಕುಮಾರ್ ಅಥವಾ ಟಿ-ಸೀರೀಸ್‌ನ ಇನ್ನಾವುದೆ ಸಿಬ್ಬಂದಿಯ ಮೊಬೈಲ್‌ ಸಂಖ್ಯೆಯಿಂದ ಹೋಗಿದ್ದಲ್ಲ ಎಂದು ಹೇಳಿಕೆಯಲ್ಲಿ ಟಿ-ಸೀರೀಸ್ ಹೇಳಿದೆ.

  ಮಲ್ಲಿಕಾರ್ಜುನ ಹಣಕ್ಕಾಗಿ ಪದೇ-ಪದೇ ಕೃಷ್ಣ ಕುಮಾರ್‌ಗೆ ಕರೆ ಮಾಡುತ್ತಲೇ ಇದ್ದ ಆದರೆ ಕೃಷ್ಣ ಕುಮಾರ್ ಪ್ರತಿಕ್ರಿಯಿಸಲಿಲ್ಲ ಹಾಗಾಗಿ ಮಲ್ಲಿಕಾರ್ಜುನ್ ಪುಜಾರಿ ಅವರು ಮೊದಲೇ ಬೆದರಿಕೆ ಹಾಕಿದ್ದಂತೆ ಸುಳ್ಳು ದೂರು ಕೊಡಿಸಿದ್ದಾರೆ ಎಂದಿದ್ದಾರೆ.

  Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada

  ಭೂಷಣ್ ಕುಮಾರ್, ಬಾಲಿವುಡ್‌ನ ಶ್ರೀಮಂತ ಸಂಸ್ಥೆಗಳಲ್ಲಿ ಒಂದಾದ ಟಿ-ಸೀರೀಸ್‌ನ ಚೇರ್‌ಮನ್ ಆಗಿದ್ದಾರೆ. ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾ ಆಗಲಿದೆ.

  English summary
  A model complaint against producer Bhushan Kumar of T-series company. T-series says its false. A politician did this all to extract money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X