»   » ಆಸಿನ್ ಮದುವೆ ಡೇಟ್ ಫಿಕ್ಸ್ ಆಯ್ತು

ಆಸಿನ್ ಮದುವೆ ಡೇಟ್ ಫಿಕ್ಸ್ ಆಯ್ತು

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟಿ, ಮಲಯಾಳಿ ಕುಟ್ಟಿ ಆಸಿನ್ ಅವರು 2008 ರಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರ 'ಘಜನಿ' ಚಿತ್ರದ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟರು. ತದನಂತರ ಹಿಂತಿರುಗಿ ನೋಡದ ನಟಿ ಬಾಲಿವುಡ್ ನಲ್ಲೇ ಮುಂದುವರಿದರು.

ಇದೀಗ ಈ ನಟಿ ಜನವರಿ 2016 ಹೊಸ ವರ್ಷದಲ್ಲಿ ನೂತನ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೌದು ನಟಿ ಆಸೀನ್ ಅವರು ಜನವರಿ 23 ರಂದು ಮೈಕ್ರೋ ಮ್ಯಾಕ್ಸ್ ಮೊಬೈಲ್ ಕಂಪೆನಿಯ ಸ್ಥಾಪಕ ರಾಹುಲ್ ಶರ್ಮಾ ಅವರೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ.

Revealed Asin and Rahul Sharma's Wedding date, Venue

ನಟಿ ಆಸಿನ್ ಹಾಗೂ ದೆಹಲಿ ಮೂಲದ ಉದ್ಯಮಿ ರಾಹುಲ್ ಶರ್ಮಾ ಅವರ ಮದುವೆ ದೆಹಲಿಯಲ್ಲೇ ನಡೆಯಲಿದ್ದು, ಬಳಿಕ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಗಾಗಿ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭ ನಡೆಯಲಿದೆ.

ಕಳೆದ ಕೆಲವು ವರ್ಷಗಳಿಂದ ಆಸಿನ್ ಹಾಗೂ ದೆಹಲಿ ಮೂಲದ ಉದ್ಯಮಿ ರಾಹುಲ್ ಅವರು ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬಾಲಿವುಡ್ ಸಿನಿ ಕ್ಷೇತ್ರಕ್ಕೆ ವಿದಾಯ ಹೇಳುತ್ತಿದ್ದಾರೆ.

Revealed Asin and Rahul Sharma's Wedding date, Venue

ಇತ್ತೀಚೆಗಷ್ಟೆ ಮದುವೆ ಸುದ್ದಿಯನ್ನು ಖಚಿತಪಡಿಸಿದ್ದ ನಟಿ ಆಸಿನ್, ನಾನು ಈಗ ನನ್ನ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ಕೊಡಬೇಕಾಗಿರುವುದರಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಹೊಸ ಚಿತ್ರಗಳಿಗೆ ಸಹಿ ಮಾಡಿಲ್ಲ ಎಂದಿದ್ದಾರೆ.

ಹಲವಾರು ಹಿಂದಿ ಚಿತ್ರಗಳು ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಆಸಿನ್ ಅವರ ಮದುವೆ ಸುದ್ದಿ ಆಸಿನ್ ಅಭಿಮಾನಿಗಳಿಗೆ ಕೊಂಚ ಬೇಸರ ಉಂಟು ಮಾಡಿದರೂ ಅಚ್ಚರಿ ಇಲ್ಲ.

English summary
Actress Asin is reportedly getting married to Micromax founder Rahul Sharma on November 26, in Delhi. The intimate ceremony will be followed by a reception at West end Greens. Asin had managed to keep her love life under wraps until August 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada