For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಾವಿಗೆ ಸಹೋದರಿ ಕಾರಣ: ಸಾಕ್ಷ್ಯದೊಂದಿಗೆ ದೂರು ನೀಡಿದ ರಿಯಾ!

  |

  ಸುಶಾಂತ್ ಸಿಂಗ್ ಕುಟುಂಬ ರಿಯಾ ಚಕ್ರವರ್ತಿ ವಿರುದ್ಧ ಆರೋಪಗಳ ಮೇಲೆ ಆರೋಪ, ದೂರುಗಳು ನೀಡಿದೆ. ಈಗ ರಿಯಾ ಸಹ ಸುಶಾಂತ್ ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದಾರೆ.

  ವೈರಲ್ ಆಯ್ತು Prashanth Sambaragi ಪಾರ್ಟಿ ಫೋಟೋ | Oneindia Kannada

  ಸುಶಾಂತ್ ಸಾವು ಪ್ರಕರಣದಲ್ಲಿ ರಿಯಾ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ, ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಾವಿನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಲೇ ಇರುವ, ಈ ಹಿಂದೆಯೂ ರಿಯಾಳೊಂದಿಗೆ ಮನಸ್ತಾಪ ಹೊಂದಿದ್ದರು ಎನ್ನಲಾಗುವ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ದೂರು ನೀಡಿದ್ದಾರೆ.

  ಸುಶಾಂತ್ ಸಿಂಗ್‌ ಗೆ ನೀಡಿದ ಮಾತ್ರಗಳನ್ನು ಬೋಗಸ್ ಮಾಡಿ ಅಥವಾ ತಪ್ಪು ಪ್ರಮಾಣದಲ್ಲಿ ನೀಡಿ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಸಿಂಗ್ ಹಾಗೂ ವೈದ್ಯ ತರುಣ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಸುಶಾಂತ್ ಹಾಗೂ ಪ್ರಿಯಾಂಕಾ ನಡುವೆ ನಡೆದಿರುವ ಸಂಭಾಷಣೆ ಜೊತೆಗೆ ಕೆಲವು ನಿರ್ದಿಷ್ಟ ಕಾಯ್ದೆಗಳು, ನಿಯಮಗಳನ್ನು ಉಲ್ಲೇಖಿಸಿದ್ದಾರೆ ರಿಯಾ.

  ಆರು ದಿನಗಳ ಮುಂಚೆ ಪ್ರಿಯಾಂಕಾ ಕಳಿಸಿದ್ದ ಸಂದೇಶ

  ಆರು ದಿನಗಳ ಮುಂಚೆ ಪ್ರಿಯಾಂಕಾ ಕಳಿಸಿದ್ದ ಸಂದೇಶ

  ಸುಶಾಂತ್ ಸಾವಿಗೆ ಆರು ದಿನಗಳ ಮುಂಚೆ ಸುಶಾಂತ್‌ ಗೆ ಸಂದೇಶ ಕಳಿಸಿದ್ದ ಪ್ರಿಯಾಂಕಾ ಸಿಂಗ್, 'ಲಿಬ್ರಿಯಂ ಎಂಬ ಮಾತ್ರೆಯನ್ನು ವಾರಕ್ಕೊಮ್ಮೆ, ನೆಕ್ಸಿಟೊ ಎಂಬ ಮಾತ್ರೆಯನ್ನು ಪ್ರತಿದಿನ, ಹಾಗೂ ಲೋನಾಜೆಪ್ ಮಾತ್ರೆಯನ್ನು ಆತಂಕದ ಅನುಭವ ಆದಾಗ ತೆಗೆದುಕೊಳ್ಳುವಂತೆ ಹೇಳಿದ್ದರು.

  ಸೂಚಿಸಿರುವ ಕ್ರಮ ತಪ್ಪು ಎಂದು ದೂರು

  ಸೂಚಿಸಿರುವ ಕ್ರಮ ತಪ್ಪು ಎಂದು ದೂರು

  ನಿಯಮದ ಪ್ರಕಾರ, ಈ ಮಾತ್ರೆಗಳನ್ನು ತೆಗೆದುಕೊಳ್ಳುವ ಕ್ರಮ ಇದಲ್ಲ. ಪ್ರಿಯಾಂಕಾ ಸಿಂಗ್, ಮಾತ್ರೆಗಳನ್ನು ತೆಗೆದುಕೊಳ್ಳುವ ಕ್ರಮವನ್ನು ತಪ್ಪಾಗಿ ಸುಶಾಂತ್‌ ಗೆ ಹೇಳಿದ್ದಾರೆ. ಅಷ್ಟೇ ಅಲ್ಲದೆ, 'ಯಾರಿಗೂ ಗೊತ್ತಾಗದಂತೆ, ಮುಂಬೈನ ಅತ್ಯುತ್ತಮ ವೈದ್ಯರ ಬಳಿ ನಿನಗೆ ಚಿಕಿತ್ಸೆ ಕೊಡಿಸುತ್ತೇನೆ' ಎಂದು ಸಹ ಪ್ರಿಯಾಂಕಾ, ಸುಶಾಂತ್‌ಗೆ ಸಂದೇಶದಲ್ಲಿ ಹೇಳಿದ್ದಾರೆ. ಇದರ ಆಧಾರದ ಮೇಲೆಯೇ ರಿಯಾ ಈಗ ದೂರು ದಾಖಲಿಸಿದ್ದಾರೆ.

  ಉದ್ದೇಶಪೂರ್ವಕವಾಗಿ ತಪ್ಪು ಕ್ರಮ ಹೇಳಲಾಗಿದೆಯೆಂದು ಆರೋಪ

  ಉದ್ದೇಶಪೂರ್ವಕವಾಗಿ ತಪ್ಪು ಕ್ರಮ ಹೇಳಲಾಗಿದೆಯೆಂದು ಆರೋಪ

  ಔಷಧ ಕಾಯ್ದೆ, ಹಾಗೂ ನಿಯಮಗಳನ್ನು ಉಲ್ಲಂಘಿಸಿ ಸುಶಾಂತ್‌ಗೆ ಔಷಧಗಳನ್ನು ತಪ್ಪು ಕ್ರಮದಲ್ಲಿ ತೆಗೆದುಕೊಳ್ಳಲು ಹೇಳಲಾಗಿತ್ತು. ಆ ಔಷಧಗಳನ್ನು ತೆಗೆದುಕೊಂಡ ಒಂದು ವಾರದಲ್ಲಿ ಸುಶಾಂತ್ ಅಸುನೀಗಿದ್ದಾನೆ. ಉದ್ದೇಶಪೂರ್ವಕವಾಗಿ ಹೀಗೆ ತಪ್ಪು ಕ್ರಮದಲ್ಲಿ ಔಷಧ ತೆಗೆದುಕೊಳ್ಳುವಂತೆ ಹೇಳಲಾಗಿದೆ ಎಂದು ರಿಯಾ ದೂರಿನಲ್ಲಿ ಆರೋಪಿಸಿದ್ದಾರೆ.

  ಸುಶಾಂತ್‌ ಗೆ ಮಾದಕ ವ್ಯಸನವಿತ್ತೆಂದು ಹೇಳಿದ ರಿಯಾ?

  ಸುಶಾಂತ್‌ ಗೆ ಮಾದಕ ವ್ಯಸನವಿತ್ತೆಂದು ಹೇಳಿದ ರಿಯಾ?

  ಎನ್‌ಸಿಬಿ ವಿಚಾರಣೆಯಲ್ಲಿ ಹಲವು ವಿಷಯಗಳನ್ನು ರಿಯಾ ಬಿಚ್ಚಿಟ್ಟಿದ್ದು, ಸುಶಾಂತ್ ಹಾಗೂ ಗೆಳೆಯರು ಮಾದಕ ವಸ್ತು ಸೇವನೆ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ರಿಯಾ ಮಾತ್ರವಲ್ಲದೆ ಸುಶಾಂತ್‌ನ ಮನೆ ಸಿಬ್ಬಂದಿ ಸಹ ಎನ್‌ಸಿಬಿ ಎದುರಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

  English summary
  Actress Rhea Chakraborty gave complaint against Sushant's sister Pryanka and doctor Tarun Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X