For Quick Alerts
  ALLOW NOTIFICATIONS  
  For Daily Alerts

  ಬಂಧನಕ್ಕೆ ರಿಯಾ ಸಿದ್ಧ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕುವುದಿಲ್ಲ: ವಕೀಲ

  |

  ಸುಶಾಂತ್ ಸಿಂಗ್ ಸಾವು ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿ ಇಂದು ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದು, ಇಂದು ಸಂಜೆ ವೇಳೆಗೆ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.

  ರಿಯಾ ಳ ಸಹೋದರ ಶೋವಿಕ್, ಸುಶಾಂತ್‌ ನ ಮಾಜಿ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಹಾಗೂ ಸುಶಾಂತ್ ಸಿಂಗ್ ನಿವಾಸದ ನೌಕರ ದೀಪೇಶ್ ಸಾವಂತ್ ಅವರುಗಳನ್ನು ಈಗಾಗಲೇ ಬಂಧಿಸಲಾಗಿದೆ.

  ಡ್ರಗ್ ನಂಟು: ಸುಶಾಂತ್ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಬಂಧನಡ್ರಗ್ ನಂಟು: ಸುಶಾಂತ್ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಬಂಧನ

  ರಿಯಾ ಚಕ್ರವರ್ತಿಗೆ ಎನ್‌ಸಿಬಿಯು ನೊಟೀಸ್ ಜಾರಿ ಮಾಡಿದ್ದು, ರಿಯಾ ಈಗಾಗಲೇ ವಿಚಾರಣೆಗೆ ಹಾಜರಾಗಿದ್ದಾರೆ. ರಿಯಾ ರನ್ನು ಡ್ರಗ್ಸ್ ಜಾಲದೊಂದಿಗೆ ನಂಟು ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ ಎನ್‌ಸಿಬಿ.

  ರಿಯಾ ಳನ್ನು ಬಂಧಿಸುವ ಸಾಧ್ಯತೆ ಇದೆ

  ರಿಯಾ ಳನ್ನು ಬಂಧಿಸುವ ಸಾಧ್ಯತೆ ಇದೆ

  ವಿಚಾರಣೆ ನಂತರ ರಿಯಾ ಚಕ್ರವರ್ತಿಯನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಯಾ ಚಕ್ರವರ್ತಿಯ ವಕೀಲ ಸತೀಶ್ ಮನೆಶಿಂಡೆ, 'ಬಂಧನಕ್ಕೆ ರಿಯಾ ಸಿದ್ಧವಾಗಿದ್ದಾರೆ. ಇದೊಂದು ದುರುದ್ದೇಶಪೂರ್ವಕ ಬಂಧನವಾದ್ದರಿಂದ ಆಕೆ ಎಲ್ಲದಕ್ಕೂ ತಯಾರಾಗಿದ್ದಾರೆ' ಎಂದಿದ್ದಾರೆ.

  'ಪ್ರೀತಿಸುವುದು ಅಪರಾಧವೆಂದಾದರೆ, ಪರಿಣಾಮಗಳನ್ನು ಎದುರಿಸುತ್ತಾರೆ'

  'ಪ್ರೀತಿಸುವುದು ಅಪರಾಧವೆಂದಾದರೆ, ಪರಿಣಾಮಗಳನ್ನು ಎದುರಿಸುತ್ತಾರೆ'

  'ಒಬ್ಬರನ್ನು ಪ್ರೀತಿಸುವುದು ತಪ್ಪು ಎನ್ನುವುದಾದರೆ, ಆ ಪ್ರೀತಿಯ ಪರಿಣಾಮಗಳನ್ನು ಎದುರಿಸಲು ರಿಯಾ ಚಕ್ರವರ್ತಿ ಸಿದ್ಧವಾಗಿದ್ದಾರೆ. ಬಿಹಾರ ಪೊಲೀಸ್, ಎನ್‌ಸಿಬಿ, ಇಡಿ ಹಾಕಿರುವ ಯಾವುದೇ ಆರೋಪಗಳ ವಿರುದ್ಧವಾಗಿ ನಿರೀಕ್ಷಣಾ ಜಾಮೀನಿಗೆ ರಿಯಾ ಅರ್ಜಿ ಹಾಕಿಲ್ಲ'. ಎಂದು ವಕೀಲ ಸತೀಶ್ ಸ್ಪಷ್ಟಪಡಿಸಿದ್ದಾರೆ.

  ನಟಿ ರಿಯಾ ಚಕ್ರವರ್ತಿ ಮನೆ ಮೇಲೆ NCB ಅಧಿಕಾರಿಗಳ ದಾಳಿನಟಿ ರಿಯಾ ಚಕ್ರವರ್ತಿ ಮನೆ ಮೇಲೆ NCB ಅಧಿಕಾರಿಗಳ ದಾಳಿ

  ಬಂಧನಕ್ಕೆ ಒಳಗಾಗಿರುವ ರಿಯಾ ಸಹೋದರ

  ಬಂಧನಕ್ಕೆ ಒಳಗಾಗಿರುವ ರಿಯಾ ಸಹೋದರ

  ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ರಿಯಾ ಸಹೋದರ ಶೋವಿಕ್, ತಾನು ಅಕ್ಕನಿಗಾಗಿ ಡ್ರಗ್ಸ್ ಖರೀದಿ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಡ್ರಗ್ಸ್‌ನ ಪಾತ್ರವೂ ಇದೇ ಎಂಬ ಅನುಮಾನದ ಮೇಲೆ ಎನ್‌ಸಿಬಿ ತನಿಖೆ ನಡೆಸುತ್ತಿದೆ.

  25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada
  ಬಾಲಿವುಡ್ ಡ್ರಗ್ಸ್ ನಂಟು ಬಿಚ್ಚಿಕೊಳ್ಳುತ್ತಿದೆ

  ಬಾಲಿವುಡ್ ಡ್ರಗ್ಸ್ ನಂಟು ಬಿಚ್ಚಿಕೊಳ್ಳುತ್ತಿದೆ

  ಸುಶಾಂತ್ ಸಿಂಗ್ ಸಾವಿನ ತನಿಖೆ ಬಾಲಿವುಡ್‌ ನ ಡ್ರಗ್ಸ್‌ ನಂಟಿನ ಜಾಲವನ್ನು ಹೊರಗೆಳೆಯುತ್ತಿದೆ. ಸುಶಾಂತ್ ಸಿಂಗ್ ಸಾವಿನ ಕುರಿತಂತೆ ಸಿಬಿಐ ಮತ್ತೊಂದೆಡೆಯಿಂದ ತನಿಖೆ ನಡೆಸುತ್ತಿದ್ದು, ಸಿಬಿಐ, ರಿಯಾ ಅವರನ್ನು ಇನ್ನೂ ವಿಚಾರಣೆಗೆ ಒಳಪಡಿಸಿಲ್ಲ.

  ರಿಯಾ ಚಕ್ರವರ್ತಿ ಬೆಂಬಲಕ್ಕೆ ನಿಂತ ಇಬ್ಬರು ಟಾಪ್ ನಟಿಯರುರಿಯಾ ಚಕ್ರವರ್ತಿ ಬೆಂಬಲಕ್ಕೆ ನಿಂತ ಇಬ್ಬರು ಟಾಪ್ ನಟಿಯರು

  English summary
  Rhea Chakraborty is ready for arrest she would not approach court for anticipatory bail said her lawyer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X