»   » ರೇಪಿಸ್ಟ್ ಗಳ ಮೇಲೆ ತಿರುಗಿಬಿದ್ದ ಸಲ್ಮಾನ್ ಖಾನ್

ರೇಪಿಸ್ಟ್ ಗಳ ಮೇಲೆ ತಿರುಗಿಬಿದ್ದ ಸಲ್ಮಾನ್ ಖಾನ್

Posted By:
Subscribe to Filmibeat Kannada

ದೇಶದ ರಾಜಧಾನಿ ನವದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಇಡೀ ದೇಶವೇ ಖಂಡಿಸುತ್ತಿದೆ. ಪಕ್ಷಭೇದ ಮರೆದ ರಾಜಕೀಯ ಮುಖಂಡರು ಸಿಡಿದು ನಿಂತಿದ್ದಾರೆ. ಈ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಕಿಡಿಕಾರಿದ್ದಾರೆ.

ಈ ರೀತಿಯ ಅತ್ಯಾಚಾರಗಳಿಗೆ ನಮ್ಮ ಸಿನಿಮಾಗಳಲ್ಲಿ ಬಿಂಬಿಸುವ ರೇಪ್ ಸೀನ್ ಗಳೇ ಕಾರಣ ಎಂಬ ಗಂಭೀರ ಆರೋಪವಿದೆ. ಸದ್ಯಕ್ಕೆ ಆ ವಿಷಯ ಪಕ್ಕಕ್ಕಿಡಿ. ಈಗ ನೇರವಾಗಿ ವಿಷಯಕ್ಕೆ ಬರುವುದಾದರೆ ನಮ್ಮ ಸಲ್ಮಾನ್ ಖಾನ್ ಅವರಂತೂ ರೇಪಿಸ್ಟ್ ಗಳನ್ನು ಮುಲಾಜಿಲ್ಲದೆ ಗಲ್ಲಿಗೇರಿಸಬೇಕು ಎಂದಿದ್ದಾರೆ.

ಈ ಸುದ್ದಿ ನನ್ನ ಕಿವಿಗೆ ಬಿದ್ದ ಕೂಡಲೆ ನನಗನ್ನಿಸಿದ್ದು ಇಂತವರನ್ನು ಸಾಯಿಸಬೇಕು. ಈ ರೀತಿಯ ಕೃತ್ಯವನ್ನು ಯಾಕೆ ಮಾಡ್ತಾರೋ. ಅವರಿಗೆ ಅಕ್ಕ ತಂಗಿ ಯಾರೂ ಇರಲ್ವಾ. ಒಂದು ವೇಳೆ ಅವರನ್ನು ಗಲ್ಲಿಗೇರಿಸಲು ಸಾಧ್ಯವಾಗಲ್ಲ ಎಂದರೆ ಜೀವಾವಧಿ ಶಿಕ್ಷೆಯನ್ನಾದರೂ ಕೊಡಬೇಕು.

ಜೈಲಲ್ಲಿ ಸುಮ್ಮನೆ ಇರಕ್ಕೆ ಬಿಡದೆ ಚೆನ್ನಾಗಿ ಬೆಂಡೆತ್ತುತ್ತಿರಬೇಕು. ಇದರಿಂದ ಬೇರೆಯವರು ರೇಪ್ ಮಾಡುವ ಸಾಹಸಕ್ಕೆ ಹೋಗೋದಿಲ್ಲ ಎಂದಿದ್ದಾರೆ. ತಮ್ಮ ಮುಂದಿನ ಚಿತ್ರ 'ದಬಾಂಗ್ 2' ಪ್ರಚಾರದಲ್ಲಿ ಮಾತನಾಡುತ್ತಿದ್ದ ಸಲ್ಮಾನ್ ಖಾನ್ ಅವರು ದೆಹಲಿ ಗ್ಯಾಂಗ್ ರೇಪ್ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ. (ಏಜೆನ್ಸೀಸ್)

English summary
Bollywood actor Salman Khan condemning the gang-rape of a medical student in the capital. He said rapists should be hanged. If not death they should be sentenced for life so that they learn a lesson. Rapists are beaten up in jails also.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada