For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ ನಸೀರುದ್ದೀನ್ ಶಾ ಆಸ್ಪತ್ರೆಯಿಂದ ಡಿಸ್ಚಾರ್ಜ್

  |

  ಅನಾರೋಗ್ಯದ ಕಾರಣ ಕಳೆದ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ನ ಹಿರಿಯ ನಟ ನಸೀರುದ್ದೀನ್ ಶಾ ನಿನ್ನೆ (ಜುಲೈ 7) ಡಿಸ್ಚಾರ್ಜ್ ಆಗಿದ್ದಾರೆ. ಪ್ರಖ್ಯಾತ ನಟ ನಸೀರುದ್ದೀನ್ ಆಸ್ಪತ್ರೆ ದಾಖಲಾಗಿರುವ ಸುದ್ದಿ ಜೂನ್ 30ಕ್ಕೆ ಬಹಿರಂಗವಾಗಿತ್ತು. ನ್ಯುಮೋನಿಯದ ಕಾರಣ ನಸೀರುದ್ದೀನ್ ಅವರನ್ನು ಆಸ್ಪತ್ರೆಗೆ ದಾಖಲಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ.

  ಸದ್ಯ ನಸೀರುದ್ದೀನ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಆಸ್ಪತ್ರೆಯಿಂದ ಮನೆಗೆ ತೆರಳಿರುವ ಬಗ್ಗೆ ಪುತ್ರ ವಿವಾನ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 70 ವರ್ಷದ ಹಿರಿಯ ನಟ ನಸೀರುದ್ದೀನ್ ಅವರನ್ನು ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ನಾಸಿರುದ್ದೀನ್ ಶಾ ಆರೋಗ್ಯವಾಗಿದ್ದಾರೆ, ಶೀಘ್ರದಲ್ಲೇ ಡಿಸ್ಚಾರ್ಜ್ನಾಸಿರುದ್ದೀನ್ ಶಾ ಆರೋಗ್ಯವಾಗಿದ್ದಾರೆ, ಶೀಘ್ರದಲ್ಲೇ ಡಿಸ್ಚಾರ್ಜ್

  ಸದ್ಯ ಮನೆಗೆ ಮರಳಿರುವ ಫೋಟೋವನ್ನು ನಸೀರುದ್ದೀನ್ ಶಾ ಪುತ್ರ ವಿವಾನ್ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಸೀರುದ್ದೀನ್ ಪತ್ನಿ ಕೂಡ ಇದ್ದಾರೆ. ಇತ್ತೀಚಿಗೆ ಹಿರಿಯ ನಟನ ಆರೋಗ್ಯದ ಬಗ್ಗೆ ಹಿಂದೂಜಾ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿ, "ನಸೀರುದ್ದೀನ್ ಶಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ" ಎನ್ನುವ ಮಾಹಿತಿ ಹಂಚಿಕೊಂಡಿದ್ದರು.

  ಭಾರತೀಯ ಸಿನಿಮಾರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ನಸೀರುದ್ದೀನ್ ಶಾ ಕೂಡ ಒಬ್ಬರು. 46 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಮತ್ತು ಪದ್ಮ ಭೂಷಣ ನೀಡಿ ಗೌರವಿಸಿದೆ. ಅನೇಕ ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸಿನಿಮಾ, ರಂಗಭೂಮಿ ಮತ್ತು ಟಿವಿ ಕ್ಷೇತ್ರದಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.

  ನಸೀರುದ್ದೀನ್ ಶಾ ಕೊನೆಯದಾಗಿ ಕಳೆದ ವರ್ಷ ಬಿಡುಗಡೆಯಾದ ಬಂದಿಶ್ ಬ್ಯಾಂಡಿಟ್ಸ್ ಮತ್ತು ಮೀ ರಕ್ಸಮ್ ಮೂಲಕ ಒಟಿಟಿ ಪ್ರೇಕ್ಷಕರನ್ನು ರಂಜಿಸಿದ್ದರು.

  Dr.ರಾಜ್ ಅಪರೂಪದ ವಿಡಿಯೋ: 100 ಚಿತ್ರ ಪೂರೈಸಿದ್ದಕ್ಕೆ ಸಂಭ್ರಮ | Filmibeat Kannada

  ಇನ್ನು ನಸೀರುದ್ದೀನ್ ಅನಾರೋಗ್ಯದ ಬಗ್ಗೆ ಕಳೆದ ವರ್ಷವೂ ವದಂತಿ ಹಬ್ಬಿತ್ತು. ಅನಾರೋಗ್ಯದ ಸುದ್ದಿ ವೈರಲ್ ಆದ ಬಳಿಕ ಅವರ ಪುತ್ರ ವಿವಾನ್ ಶಾ ಸುದ್ದಿ ತಳ್ಳಿ ಹಾಕಿದ್ದರು. "ಬಾಬಾ ಚೆನ್ನಾಗಿಯೇ ಇದ್ದಾರೆ. ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಎಲ್ಲಾ ವದಂತಿ ಸುಳ್ಳು. ಅವರು ಆರೋಗ್ಯವಾಗಿದ್ದಾರೆ" ಎಂದು ಪ್ರತಿಕ್ರಿಯೆ ನೀಡುವ ಮೂಲಕ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದರು.

  English summary
  Bollywood Senior Actor Naseeruddin Shah discharge from hospital, conforms son Vivaan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X