»   » 'ಸೊಸೈಟಿ' ಸೀರೆಯಲಿ ಮಿಂಚಿದ ಶಾರುಖ್ ಪತ್ನಿ ಗೌರಿ

'ಸೊಸೈಟಿ' ಸೀರೆಯಲಿ ಮಿಂಚಿದ ಶಾರುಖ್ ಪತ್ನಿ ಗೌರಿ

Posted By:
Subscribe to Filmibeat Kannada

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಸಾಮಾನ್ಯವಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಭಾರಿ ಅವರು ಏಕ್ ದಂ ಪತ್ರಿಕೆಯೊಂದರ ಮುಖಪುಟ ಅಲಂಕರಿಸಿದ್ದಾರೆ. ಸೀರೆಯಲ್ಲಿ ತಮ್ಮ ಹಾವಭಾವ, ಭಂಗಿಗಳನ್ನು ಆ ವಿಶೇಷ ಸಂಚಿಕೆಯಲ್ಲಿ ತೆರೆದಿಟ್ಟಿದ್ದಾರೆ.

'ಸೊಸೈಟಿ' ಎಂಬ ನಿಯತಕಾಲಿಕೆಯ ಮಾರ್ಚ್ ಸಂಚಿಕೆಯಲ್ಲಿ ಗೌರಿ ಖಾನ್ ಅವರ ಸೀರೆ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. 40ರ ಹರೆಯದಲ್ಲೂ ಗೌರಿ ಖಾನ್ ಹಾಟ್ ಲುಕ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. [ಶಾರೂಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ!]

Gauri Khan

ಇಷ್ಟು ದಿನ ಗೌರಿ ಖಾನ್ ಎಂದರೆ ಶಾರುಖ್ ಖಾನ್ ಪತ್ನಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಆದರೆ ಗೌರಿ ಅವರ ಮನಸ್ಸಿನಲ್ಲೂ ಒಬ್ಬ ಕಲಾವಿದೆ ಇದ್ದಾರೆ, ತಾನೇನು ಎಂಬುದನ್ನು ತೋರಿಸಬೇಕು ಎಂಬ ತುಡಿತ ಕಾಡುತ್ತಿತ್ತು ಎನ್ನಿಸುತ್ತದೆ. ಇದೀಗ ಅವರ ಮನೋಭಿಲಾಷೆ 'ಸೊಸೈಟಿ' ಮೂಲಕ ನೆರವೇರಿದೆ.

ಫ್ಯಾಷನ್ ಜೊತೆಗೆ ಇಂಟೀಯರ್ ಡಿಜೈನರ್ ಕಂಪನಿಯೊಂದನ್ನೂ ಮುನ್ನಡೆಸುತ್ತಿದ್ದಾರೆ ಗೌರಿ. ಈ ಮೂಲಕ ಫ್ಯಾಷನ್ ಡಿಸೈನಿಂಗ್ ನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಇದರ ಜೊತೆಗೆ ಮಕ್ಕಳ ಭವಿಷ್ಯತ್ತಿನ ಕಡೆಗೂ ಅವರು ಸಾಕಷ್ಟು ಗಮನಹರಿಸುತ್ತಿದ್ದಾರೆ.

ಒಬ್ಬ ಸ್ಟಾರ್ ಪತ್ನಿ ಎಂದರೆ ಅವರ ಮಕ್ಕಳು ಮುಂದೆ ಸ್ಟಾರ್ ಗಳೇ ಆಗುತ್ತಾರೆ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಗೌರಿ ಖಾನ್ ಮಾತ್ರ ಹಾಗಲ್ಲ. ನಿಮ್ಮ ಮಕ್ಕಳನ್ನೂ ಬಾಲಿವುಡ್ ಗೆ ಪರಿಚಯಿಸುತ್ತೀರಾ ಎಂದು ಯಾರೋ ಕೇಳಿದ್ದಕ್ಕೆ, "ನಮ್ಮ ಕುಟುಂಬಕ್ಕೆ ಒಬ್ಬ ಆಕ್ಟರ್ ಸಾಕು" ಎಂದಿದ್ದರು. (ಏಜೆನ್ಸೀಸ್)

English summary
Gauri Khan, W/O Bollywood superstar Shahrukh Khan, graces the cover of Society Magazine March 2015 issue. She looks gorgeous and sexy even at the age of 40-plus.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada