»   » 'ಕಾಮಸೂತ್ರ' ಸೆಟ್ ನಲ್ಲಿ ಅರ್ಧ ರಾತ್ರಿ ಏನು ನಡೀತು?

'ಕಾಮಸೂತ್ರ' ಸೆಟ್ ನಲ್ಲಿ ಅರ್ಧ ರಾತ್ರಿ ಏನು ನಡೀತು?

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿರುವ ತಾರೆ ಶೆರ್ಲಿನ್ ಚೋಪ್ರಾ ಸದ್ಯಕ್ಕೆ 'ಕಾಮಸೂತ್ರ 3D' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಈ ಚಿತ್ರದ ಸೆಟ್ ನಲ್ಲಿ ಬೆಂಕಿ ಅವಗಡ ಸಂಭವಿಸಿದೆ. ಅರ್ಧರಾತ್ರಿಯಲ್ಲಿ ಈ ಅವಗಡ ಸಂಭವಿಸಿ ಸೆಟ್ ಅಗ್ನಿಗೆ ಆಹುತಿಯಾಗಿದೆ.

ತಮಿಳುನಾಡಿನ ತೂತುಕುಡಿಯ ಹಳೆ ಬಂದರಿನ ಸಮೀಪ ಈ ಬೆಂಕಿ ಅವಗಡ ಸಂಭವಿಸಿದೆ. ದೋಣಿಯೊಂದರಲ್ಲಿ ಹಾಕಲಾದ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಧಗ ಧಗನೆ ಹೊತ್ತಿ ಉರಿದಿದೆ. ಅಷ್ಟೊಂದು ಹಾಟ್ ಸನ್ನಿವೇಶವನ್ನು ಚಿತ್ರೀಕರಿಸುತ್ತಿದ್ದರೋ ಏನೋ?


ದೋಣಿ ಮಾಲೀಕನಿಗೆ ಸರಿಸುಮಾರು ರು.1.5 ಲಕ್ಷ ನಷ್ಟ ಪರಿಹಾರವನ್ನೂ ಚಿತ್ರತಂಡ ನೀಡಿದೆ. ವಾತ್ಸಾಯನ ಕಾಮಸೂತ್ರ ಗ್ರಂಥದ ಆಧಾರವಾಗಿ ಈ ಶೃಂಗಾರ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಸೆಟ್ ನಲ್ಲಿದ್ದವರೆಲ್ಲಾ ದಿಕ್ಕಾಪಾಲಾಗಿ ಓಟ ಕಿತ್ತಿದ್ದಾರೆ.

ಈ ಚಿತ್ರದಲ್ಲಿ ಶೆರ್ಲಿನ್ ಚೋಪ್ರಾ ನಗ್ನವಾಗಿ ಅಭಿನಯಿಸಿದ್ದಾರೆ. ತಮ್ಮ ದೇಹದ ಸೌಂದರ್ಯವನ್ನು ನಾನಾ ಭಂಗಿಗಳಲ್ಲಿ ಪ್ರದರ್ಶಿಸಿದ್ದು ಈ ಚಿತ್ರದ ಬಗ್ಗೆ ಎಲ್ಲಿಲ್ಲದ ಕುತೂಹಲ ಮೂಡಿಸಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೆ ಬಿಡುಗಡೆಯಾಗಿದ್ದು ಎಲ್ಲರ ಗಮನಸೆಳೆದಿದೆ.

ವಾತ್ಸಾಯನ ಬರೆದ ಭಾರತದ ಅತ್ಯಂತ ಪ್ರಾಚೀನ ಗ್ರಂಥ 'ಕಾಮಸೂತ್ರ' ಮೂಲಾಧಾರವಾಗಿಟ್ಟುಕೊಂಡು ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ರುಪೇಶ್ ಪೌಲ್ ಆಕ್ಷನ್ ಕಟ್ ಹೇಳಲಿರುವ ಚಿತ್ರ. 2012ರ ಕೇನೆ ಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಪ್ರಕಟಿಸಲಾಯಿತು.

ಪೌಲ್ ಅವರು ಈಗಾಗಲೆ 'ಸೇಂಟ್ ಡ್ರಾಕುಲಾ 3D' ಎಂಬ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಈ ಬಾರಿ ಅವರು ಕಾಮಸೂತ್ರ 3D ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲೇ ಶೆರ್ಲಿನ್ ಚಿಚ್ಚಮ್ಮ ಇನ್ನು 'ಕಾಮಸೂತ್ರ' ಎಂದರೆ ಕೇಳಬೇಕೆ.

English summary
The sets of an upcoming movie titled Kamasutra 3D caught fire in the middle of the night. This was a worst nightmare for the crew members as this was a vintage set in the seas.
Please Wait while comments are loading...