»   » ಗೂಗಲ್ ನಿಂದ ಪೂನಂ ಪಾಂಡೆ ಆಪ್ ಬ್ಯಾನ್: ಅಭಿಮಾನಿಗಳಿಗೆ ನಿರಾಸೆ

ಗೂಗಲ್ ನಿಂದ ಪೂನಂ ಪಾಂಡೆ ಆಪ್ ಬ್ಯಾನ್: ಅಭಿಮಾನಿಗಳಿಗೆ ನಿರಾಸೆ

Posted By:
Subscribe to Filmibeat Kannada

ಬಾಲಿವುಡ್ ನ ವಿವಾದಾತ್ಮಕ ನಟಿ ಪೂನಂ ಪಾಂಡೆ ತಮ್ಮ ಚಿತ್ರಗಳನ್ನು ಅಪ್ ಲೋಡ್ ಮಾಡಲೆಂದೇ ಮೊನ್ನೆಯಷ್ಟೇ ತಮ್ಮ ಹೆಸರಿನಲ್ಲಿ ಆಪ್ ಲಾಂಚ್ ಮಾಡಿದ್ದರು. ಆಪ್ ಲಾಂಚ್ ಆದ 15 ನಿಮಿಷಗಳಲ್ಲೇ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿ 15,000 ಜನರು ಡೌನ್ ಲೋಡ್ ಸಹ ಮಾಡಿದ್ದರು. ಆದರೆ ಈಗ ಈ ಆಪ್ ಅನ್ನು ಗೂಗಲ್ ಬ್ಯಾನ್ ಮಾಡಿದ್ದು ಪೂನಂ ಪಾಂಡೆ ಮತ್ತು ಅವರ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.[ವಿಡಿಯೋ: ಪೂನಂ ಪಾಂಡೆ 'ರಂಗಿನಾಟ', ಪಡ್ಡೆ ಹುಡುಗರ ಕಣ್ಣಿಗೆ ಹಬ್ಬದೂಟ!]

ಚಿತ್ರಗಳು: ಪೂನಂ ಪಾಂಡೆ

ಆಪ್ ನಿಷೇಧ ಮಾಡಿರುವ ಗೂಗಲ್, "ಪೂನಂ ಪಾಂಡೆ ರವರು ತಮ್ಮ ಅರೆ ನಗ್ನ ಚಿತ್ರಗಳಿರುವ ಆಂಡ್ರಾಯ್ಡ್ ಆಪ್ ಲಾಂಚ್ ಮಾಡಿದ್ದರು. ಇದರಲ್ಲಿ ಅಶ್ಲೀಲ ಚಿತ್ರಗಳು ಇರುವ ಕಾರಣ ಆಪ್ ನಿಷೇದಿಸಲಾಗಿದೆ' ಎಂದು ಹೇಳಿದೆ.

SHOCKING: Google bans Poonam Pandey’s app!

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂನಂ ಪಾಂಡೆ, " ಗೂಗಲ್ ಆಪ್ ನಿಷೇಧಗೊಳಿಸಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ. ನಾನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಲ್ಲಿ ಹಲವು ವಯಸ್ಕ ಮ್ಯಾಗಜೀನ್ ಗಳನ್ನು ನೋಡಿದ್ದೇನೆ. ಹಲವು ನನ್ನ ಅಭಿಮಾನಿಗಳು ನಿನ್ನೆವರೆಗೆ ಇದ್ದ ಆಪ್ ಈಗ ಕಾಣುತ್ತಿಲ್ಲ ಎಂದು ದೂರುತ್ತಿರುವುದಾಗಿ" ಹೇಳಿದ್ದಾರೆ.

ಪೂನಂ ಪಾಂಡೆ ರವರು ಆಪ್ ಸಿಗದೇ ನಿರಾಸೆಗೊಂಡಿರುವ ಅಭಿಮಾನಿಗಳಿಗೆ ಪರಿಹಾರವನ್ನು ನೀಡಿದ್ದು, "ಗೂಗಲ್ ನನ್ನ ಆಪ್ ಅನ್ನು ಬ್ಯಾನ್ ಮಾಡಿದೆ. ಆದರೆ ಆಂಡ್ರಾಯ್ಡ್ ಬಳಕೆದಾರರು ನೇರವಾಗಿ ನನ್ನ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು" ಎಂದು ವೆಬ್ ವಿಳಾಸ ಬರೆದು ಟ್ವೀಟ್ ಮಾಡಿದ್ದಾರೆ.[ಕನ್ನಡಕ್ಕೆ ಬರಲು ಪೂನಂ ಪಾಂಡೆ ಪಡೆದುಕೊಂಡ ಸಂಭಾವನೆ ಎಷ್ಟು?]

English summary
The sensational Poonam Pandey, who recently launched her very own app, is both, happy and disheartened at the same time. Because her newly launched app has been banned by Google

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada