For Quick Alerts
  ALLOW NOTIFICATIONS  
  For Daily Alerts

  ತ್ರಿಡಿಯಲ್ಲಿ ಮೂಡಿಬರುತ್ತಿದೆ ಎವರ್ ಗ್ರೀನ್ 'ಶೋಲೆ'

  By Rajendra
  |

  ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ಚಿತ್ರವೆಂದು ಮನ್ನಣೆ ಪಡೆದಿರುವ 'ಶೋಲೆ' ಚಿತ್ರ ಈಗ ತ್ರಿಡಿ ರೂಪ ಪಡೆಯುತ್ತಿದೆ. ಹತ್ತು ವರ್ಷಗಳ ಕಾಲ ಪ್ರದರ್ಶನ ಕಂಡ ಭಾರತೀಯ ಏಕೈಕ ಚಿತ್ರ ಎಂಬ ಗರಿಮೆಗೂ ಶೋಲೆ ಪಾತ್ರವಾಗಿದೆ.

  ಅಮಿತಾಬ್ ಬಚ್ಚನ್, ಧರ್ಮೇಂದ್ರ ಅವರ ವೃತ್ತಿ ಜೀವನದಲ್ಲೂ ಶೋಲೆ ಹೊಸ ಮೈಲಿಗಲ್ಲು ಸೃಷ್ಟಿಸಿತು. ಅಭಿಮಾನಿಗಳ ಪಾಲಿಗಂತೂ ಈ ಚಿತ್ರ ಇಂದಿಗೂ ಹೊಚ್ಚಹೊಸದಾಗಿಯೇ ಕಾಣುತ್ತದೆ. ಈಗ ತ್ರಿಡಿಯಲ್ಲಿ ಚಿತ್ರವನ್ನು ಸವಿಯುವ ಭಾಗ್ಯ ಪ್ರೇಕ್ಷಕರಿಗೆ ಪ್ರಾಪ್ತವಾಗುತ್ತಿದೆ.

  "ಅರೆ ಓ ಸಾಂಬಾ ಕಿತನೆ ಆದ್ಮಿ ತೇ.." ಎಂಬ ಗಬ್ಬರ್ ಸಿಂಗ್ ಅಬ್ಬರದ ಡೈಲಾಗ್, ಅವನ ವಿಲಕ್ಷಣ ಹಾವಭಾವವಗಳನ್ನು ತ್ರಿಡಿ ಕನ್ನಡಕ ಹಾಕಿಕೊಂಡು ಸವಿಯಬಹುದು. ಇನ್ನು ಚಿತ್ರದಲ್ಲಿನ ಹಾರ್ಸ್ ಚೇಸಿಂಗ್, ಫೈಟ್ಸ್ ತ್ರಿಡಿಯಲ್ಲಿ ಹೇಗಿರುತ್ತವೆ ಎಂಬ ಕುತೂಹಲ ಬೇರೆ ಇದೆ.

  ಆಗಸ್ಟ್ 15, 1975ರಲ್ಲಿ ತೆರೆಕಂಡ ಈ ಚಿತ್ರ ಈಗ ಮೂವತ್ತೆಂಟು ವರ್ಷಗಳ ಬಳಿಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಆಗಸ್ಟ್ 15, 2013ರಿಂದ ಚಿತ್ರದ ಪ್ರಚಾರ ಆರಂಭವಾಗಲಿದ್ದು ಸೆಪ್ಟೆಂಬರ್ 13, 2013ರಂದು ಶೋಲೆ ತ್ರಿಡಿ ಬಿಡುಗಡೆಯಾಗುತ್ತಿದೆ.

  ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಹೊಸ ಶಕೆ ಆರಂಭಿಸಿದ ಚಿತ್ರ 'ಶೋಲೆ'. 70ರ ದಶಕದಲ್ಲಿ ಭಾರತೀಯ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನು ಮುರಿದ ಚಿತ್ರ ಇದಾಗಿತ್ತು. ಅಮಿತಾಬ್ ಬಚ್ಚನ್ ಅವರಿಗೆ ಆಂಗ್ರಿ ಎಂಗ್ ಮ್ಯಾನ್ ಪಟ್ಟ ತಂದುಕೊಟ್ಟಂತಹ ಚಿತ್ರ. ಹೊಸ ಹಾಗೂ ಹಳೆ ತಲೆಮಾರಿನ ಪ್ರೇಕ್ಷರಿಬ್ಬರಿಗೂ ಈ ಚಿತ್ರ ಹಾಟ್ ಫೇವರಿಟ್. (ಏಜೆನ್ಸೀಸ್)

  English summary
  After 38 years movie buffs can enjoy the iconic Amitabh Bachchan and Dharmendra starrer Sholay in 3D. 'Sholay 3D' is set to release on 13th September 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X