For Quick Alerts
  ALLOW NOTIFICATIONS  
  For Daily Alerts

  ತಮ್ಮ ಜೀವನ ಕತೆಯನ್ನು ಜಗತ್ತಿಗೆ ಹೇಳಲು ಹೊರಟ ಸೋನು ಸೂದ್

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ, ನಿರ್ಗತರಿಗೆ ಸಹಾಯಕ್ಕೆ ನಿಂತು 'ರಾಷ್ಟ್ರೀಯ ಹೀರೋ' ಎನಿಸಿಕೊಂಡ ಸೋನು ಸೂದ್ ಈಗಲೂ ತಮ್ಮ ನೆರವಿನ ಕಾರ್ಯವನ್ನು ನಿಲ್ಲಿಸಿಲ್ಲ.

  ಕೊರೊನಾ ಗೆ ಮುಂಚೆ ವಿಲನ್ ಆಗಿಯಷ್ಟೆ ಗುರುತಾಗಿದ್ದ ಸೋನು ಸೂದ್, ಕೊರೊನಾ ಸಮಯದಲ್ಲಿ ನಿಜಜೀವನದ ಹೀರೋ ಆಗಿ ಹೆಸರು ಪಡೆದರು. ಅವರ ಬಗ್ಗೆ ದೇಶವೇ ಮಾತನಾಡುವಂತಾಯಿತು. ಅವರ ಬಗ್ಗೆ ಕುತೂಹಲ ಸಹ ಹೆಚ್ಚಾಯಿತು.

  ಸೋನು ಸೂದ್ ಸಹಾಯ ಮಾಡುತ್ತಿರುವುದೆಲ್ಲ ಪ್ರಚಾರಕ್ಕಾಗಿಯೇ? ಅನುಮಾನದ ಪ್ರಶ್ನೆಗೆ ತಿರುಗೇಟು ಕೊಟ್ಟ ನಟ

  ಈಗ ಸೋನು ಸೂದ್ ಸ್ವತಃ ತಮ್ಮ ಜೀವನ ಕತೆಯನ್ನು ಲೋಕಕ್ಕೆ ಹೇಳಲು ಹೊರಟಿದಿದ್ದಾರೆ. ಸೋನು ಸೂದ್ ತಮ್ಮ ಆತ್ಮಕತೆ ಬರೆಯುತ್ತಿದ್ದು, ಸೋನು ಸೂದ್ ರ ಆತ್ಮಕತೆ ಡಿಸೆಂಬರ್ ವೇಳೆಗೆ ಬಿಡುಗಡೆ ಆಗಲಿದೆ.

  'ಮಸೀಯಾ ಆಫ್ ಮೈಗ್ರಂಟ್ಸ್'

  'ಮಸೀಯಾ ಆಫ್ ಮೈಗ್ರಂಟ್ಸ್'

  ಕೊರೊನಾ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಮಾಡಿದ ಸಹಾಯದಿಂದಾಗಿ ಸೋನು ಸೂದ್‌ಗೆ 'ಮಸಿಯಾ ಆಫ್ ಮೈಗ್ರೆಂಟ್ಸ್' (ವಲಸೆ ಕಾರ್ಮಿಕರ ದೇವರು) ಎಂದು ಕರೆಯಲಾಗುತ್ತಿತ್ತು. ಈಗಲೂ ಸೋನು ಸೂದ್ ಅನ್ನು ಹಾಗೆಯೇ ಕರೆಯಲಾಗುತ್ತಿದೆ.

  'ಮಾಲ್ಡೀವ್ಸ್ ಗೆ ಟಿಕೆಟ್ ಕೊಡಿಸಿ' ಎಂದವನಿಗೆ ಸೋನು ಸೂದ್ ಕೊಟ್ರು ತಕ್ಕ ಉತ್ತರ

  'ಐ ಆಮ್ ನಾಟ್ ಮಸೀಯಾ'

  'ಐ ಆಮ್ ನಾಟ್ ಮಸೀಯಾ'

  ಸೋನು ಸೂದ್ ಬರೆಯುತ್ತಿರುವ ಆತ್ಮಕತೆಗೆ ಇದೇ ಹೆರಿಸನ ಆಧಾರದಲ್ಲಿ ಹೆಸರಿಡಲಾಗಿದೆ. ಸೋನು ಸೂದ್ ತಮ್ಮ ಆತ್ಮಕತೆಗೆ 'ಐ ಆನ್ ನಾಟ್ ಮಸೀಯಾ' (ನಾನು ದೇವರಲ್ಲ) ಎಂದು ಕರೆದಿದ್ದಾರೆ. ಆತ್ಮಕತೆ ಬರೆಯಲು ಮೀನಾ ಅಯ್ಯರ್ ಅವರು ಸೋನು ಸೂದ್‌ಗೆ ಸಹಾಯ ಮಾಡುತ್ತಿದ್ದಾರೆ.

  ಪೆಂಗ್ವಿನ್ ರ್ಯಾಂಡಮ್ ಹೌಸ್

  ಪೆಂಗ್ವಿನ್ ರ್ಯಾಂಡಮ್ ಹೌಸ್

  ಪ್ರಖ್ಯಾತ ಪಬ್ಲಿಕೇಶನ್ 'ಪೆಂಗ್ವಿನ್ ರ್ಯಾಂಡಮ್ ಹೌಸ್' ಸೋನು ಸೂದ್ ಅವರ ಆತ್ಮಕತೆಯನ್ನು ಮುದ್ರಣ ಮತ್ತು ಮಾರಾಟ ಮಾಡಲಿದೆ. ಆತ್ಮಕತಾ ಪುಸ್ತಕವು ಡಿಸೆಂಬರ್ ವೇಳೆಗೆ ಓದುಗರಿಗೆ ದೊರಕಲಿದೆ.

  ಸೋನು ಸೂದ್ ಭೇಟಿಗೆ ನೂರಾರು ಮೈಲಿ ದೂರದಿಂದ ಬರುತ್ತಿರುವ ಜನ

  3 ಜನ ಒಳ್ಳೆ ಗ್ಲಾಮರ್ ಎಂದು ಕಾಲೆಳೆದ Upendra | Filmibeat Kannada
  ಕೊರೊನಾ ಸಮಯದ ಅನುಭವಗಳ ದಾಖಲೀಕರಣ

  ಕೊರೊನಾ ಸಮಯದ ಅನುಭವಗಳ ದಾಖಲೀಕರಣ

  ಸೋನು ಸೂದ್ ಆತ್ಮಕತೆಯು ಅವರ ಬಾಲ್ಯದ ಬಗ್ಗೆ, ಸಿನಿಮಾ ಪಯಣದ ಜೊತೆಗೆ ಮುಖ್ಯವಾಗಿ ಕೊರೊನಾ ಸಮಯದ ಅನುಭವಗಳನ್ನು ಒಳ್ಳಗೊಳ್ಳಲಿವೆ. ಸೋನು ಸೂದ್ ಬಗ್ಗೆ ಅಪಾರ ಗೌರವ ನಿರ್ಮಾಣವಾಗಿದೆ. ಅವರ ಪುಸ್ತಕವು ಅವರ ಬಗೆಗಿನ ಗೌರವನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

  English summary
  Actor Sonu Sood writing his autobiography it will be out for December. Autobiography's name is i am not Messiah.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X