»   » ಕೆಂಪು ಸೀರೆ, ಚಿನ್ನಾಭರಣ ತೊಟ್ಟ ಶ್ರೀದೇವಿಯ ಅಂತಿಮ ಯಾತ್ರೆ ಆರಂಭ

ಕೆಂಪು ಸೀರೆ, ಚಿನ್ನಾಭರಣ ತೊಟ್ಟ ಶ್ರೀದೇವಿಯ ಅಂತಿಮ ಯಾತ್ರೆ ಆರಂಭ

Posted By:
Subscribe to Filmibeat Kannada
ಕೆಂಪು ಸೀರೆ, ಚಿನ್ನಾಭರಣ ತೊಟ್ಟ ಶ್ರೀದೇವಿಯ ಅಂತಿಮ ಯಾತ್ರೆ ಆರಂಭ | Filmibeat Kannada

ಬಾಲಿವುಡ್ ನಟಿ ಶ್ರೀದೇವಿಯ ಅಂತಿಮ ಯಾತ್ರೆ ಆರಂಭಗೊಂಡಿದೆ. ಸೆಲೆಬ್ರೇಷನ್ ಸ್ಫೋರ್ಟ್ಸ್ ಕ್ಲಬ್ ನಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರು, ಸಾರ್ವಜನಿಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಶ್ರೀದೇವಿಯ ಅಂತಿಮ ಯಾತ್ರೆ ಆರಂಭಗೊಂಡಿದೆ.

ಅಂತಿಮ ಯಾತ್ರೆ ಆರಂಭಕ್ಕೂ ಮುನ್ನ ಪದ್ಮಶ್ರೀ ಪುರಸ್ಕೃತ ನಟಿ ಶ್ರೀದೇವಿ ಪಾರ್ಥೀವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಸರ್ಕಾರಿ ಗೌರವ ಸಮರ್ಪಿಸಲಾಯಿತು.

ವಿಲ್ಲೆ ಪಾರ್ಲೆಯ ಸೇವಾ ಸಮಾಜ ಚಿತಾಗಾರ, ಹಿಂದು ರುದ್ರಭೂಮಿಯಲ್ಲಿ ಶ್ರೀದೇವಿ ಅಂತಿಮ ಸಂಸ್ಕಾರ ಮಧ್ಯಾಹ್ನ 3.30 ರ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಚಿತೆಗೆ ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಮುಂದೆ ಓದಿರಿ...

ಕೆಂಪು ಸೀರೆ, ಚಿನ್ನಾಭರಣ ತೊಟ್ಟ ಶ್ರೀದೇವಿ

ಶ್ರೀದೇವಿಯ ಇಚ್ಛಾನುಸಾರ ಅವರ ಪಾರ್ಥೀವ ಶರೀರಕ್ಕೆ ಕಾಂಚೀವರಂ ನ ಕೆಂಪು ಸೀರೆಯುಡಿಸಲಾಗಿದೆ. ಕರಿಮಣಿ ಮಾಂಗಲ್ಯ ಸರ ಜೊತೆಗೆ ಚಿನ್ನಾಭರಣ ಕೂಡ ತೊಡಿಸಲಾಗಿದೆ. (ಫೋಟೋ ಕೃಪೆ: ಎ.ಎನ್.ಐ)

ಬಿಳಿ ಹೂಗಳಂದ್ರೆ ಇಷ್ಟ

ನಟಿ ಶ್ರೀದೇವಿಗೆ ಬಿಳಿ ಹೂಗಳೆಂದರೆ ತುಂಬಾ ಇಷ್ಟ. ಹೀಗಾಗಿ, ಶ್ರೀದೇವಿ ಪಾರ್ಥೀವ ಶರೀರಕ್ಕೆ ಮಲ್ಲಿಗೆ ಹೂ ಮುಡಿಸಲಾಗಿದೆ. ಅಂತಿಮ ಯಾತ್ರೆಯ ವಾಹನವನ್ನೂ ಬಿಳಿ ಹೂಗಳಿಂದ ಸಿಂಗರಿಸಲಾಗಿದೆ. (ಫೋಟೋ ಕೃಪೆ: ಎ.ಎನ್.ಐ)

ಅಂತಿಮ ಯಾತ್ರೆ ಆರಂಭ

ಸೆಲೆಬ್ರೇಷನ್ ಸ್ಫೋರ್ಟ್ಸ್ ಕ್ಲಬ್ ನಿಂದ ವಿಲ್ಲೆ ಪಾರ್ಲೆಗೆ ಅಂತಿಮ ಯಾತ್ರೆ ಆರಂಭಗೊಂಡಿದೆ. ಅಂತಿಮ ಯಾತ್ರೆಯಲ್ಲಿ ಇಡೀ ಕಪೂರ್ ಕುಟುಂಬ, ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದಾರೆ. (ಫೋಟೋ ಕೃಪೆ: ಎ.ಎನ್.ಐ)

ಜನ ಸಾಗರ

ಶ್ರೀದೇವಿ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶ್ರೀದೇವಿಯ ಅಂತಿಮ ಯಾತ್ರೆಗೆ ಹಲವು ಜನ ಸಾಕ್ಷಿಯಾದರು.(ಫೋಟೋ ಕೃಪೆ: ಎ.ಎನ್.ಐ)

ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?

'ಸೌಂದರ್ಯದ ಸಿರಿದೇವಿ' ಶ್ರೀದೇವಿ ಹಠಾತ್ ನಿಧನ: ಕಾಡುವ 5 ಪ್ರಶ್ನೆಗಳು

ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ

English summary
Bollywood Actress Sridevi's final journey begins. Cremation to take place around 3.30 - 4 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada