»   » ಬೆಂಗಳೂರನ್ನು ಬೆಚ್ಚಗೆ ಮಾಡಿದ ಸನ್ನಿ ಲಿಯೋನ್!

ಬೆಂಗಳೂರನ್ನು ಬೆಚ್ಚಗೆ ಮಾಡಿದ ಸನ್ನಿ ಲಿಯೋನ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕೆನಡಾ ಮೂಲದ ನಟಿ, ರೂಪದರ್ಶಿ ಸನ್ನಿ ಲಿಯೋನ್ ಭಾನುವಾರ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಅಡ್ಡಾಡಿದ್ದಾರೆ. ಸನ್ನಿ ತನ್ನ ಹೊಸ ಚಿತ್ರದ ಪ್ರಚಾರಕ್ಕೆ ಬಂದಿರಬಹುದು ಎಂದು ಅಭಿಮಾನಿಗಳು ಅಂದುಕೊಳ್ಳಬಹುದು ಆದರೆ, ಹೈ ಎಂಡ್ ಬೈಕ್ ಡೀಲರ್ ಶಿಪ್ ಕಾರ್ಯಕ್ರಮದ ಅತಿಥಿಯಾಗಿ ಸನ್ನಿ ಕಾಣಿಸಿಕೊಂಡರು.

ಪೋರ್ನೊಗ್ರಾಫಿಕ್ ಚಿತ್ರಗಳ ಮೂಲಕ 2000ರ ಸುಮಾರಿಗೆ ವಿಶ್ವಖ್ಯಾತಿ ಪಡೆದಿದ್ದ ಸನ್ನಿ ಈಗ ತಮ್ಮ ವೃತ್ತಿ ಜೀವನವನ್ನು ಬಾಲಿವುಡ್ ನಲ್ಲಿ ಕಂಡುಕೊಳ್ಳುತ್ತಿದ್ದಾರೆ. ಜಿಸ್ಮ್ 2 ಹಾಗೂ ಶೂಟ್ ಔಟ್ ಅಟ್ ವಡಾಲಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಮೈಮಾಟ, ಥಳಕು ಬಳಕು ಮೂಲಕ ಪ್ರೇಕ್ಷಕರನ್ನು ರಂಜಿಸಲು ಯತ್ನಿಸಿದರೂ ಅಷ್ಟು ಸಫಲವಾಗಿಲ್ಲ. ನಟನೆ ಮಟ್ಟಿಗೆ ಇನ್ನೂ ಸೊನ್ನೆಯಾದರೂ ಜಾಹೀರಾತು ಲೋಕದಲ್ಲಿ ಬೇಡಿಕೆ ಮುಂದುವರೆದಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸನ್ನಿ ಈಗಾಗಲೇ ಕನ್ನಡ ಹಾಡಿಗೆ ನರ್ತಿಸಬೇಕಾಗಿತ್ತು. ಕೊಬ್ಬರಿ ಮಂಜು ಅಲಿಯಾಸ್ ನಿರ್ಮಾಪಕ ಕೆ. ಮಂಜು ಅವರು ತಮ್ಮ ಚಿತ್ರವೊಂದಕ್ಕೆ ಸನ್ನಿ ಕರೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿ ಸೋತಿದ್ದಾರೆ. ಕಾರಣ ಏನು ಇನ್ನೂ ಗೊತ್ತಾಗಿಲ್ಲಪ್ಪ.

ಸದ್ಯಕ್ಕೆ ಸನ್ನಿ ಪಾಲಿಗೆ ರಾಗಿಣಿ ಎಂಎಂಎಸ್ 2 ಹಾಗೂ ಜಾಕ್ ಪಾಟ್ ಚಿತ್ರಗಳು ಕಾದಿವೆ. ಬಾಲಿವುಡ್ ನಲ್ಲಿ ಇನ್ನಷ್ಟು ಅವಕಾಶಗಳು ಒದಗಿ ಬರುವ ಸೂಚನೆ ಸಿಕ್ಕಿರುವುದರಿಂದ ಸದ್ಯಕ್ಕೆ ಚಂದನವನದಲ್ಲಿ ಸನ್ನಿ ಕುಣಿತ ನೋಡುವ ಭಾಗ್ಯ ಸದ್ಯಕ್ಕಿಲ್ಲ.

ಜಾಕ್ ಪಾಕ್ ಚಿತ್ರದಲ್ಲಿ ಇತ್ತೀಚೆಗಷ್ಟೇ ಮದುವೆಯಾದ ಭರತ್ ಜತೆ ಸನ್ನಿ ನಟಿಸುತ್ತಿದ್ದಾರೆ. ಕೈಜಾದ್ ಗುಸ್ತಾದ್ ನಿರ್ದೇಶನದ ಈ ಚಿತ್ರದಲ್ಲಿ ನಾಸೀರುದ್ದೀನ್ ಶಾ, ಸಚಿನ್ ಜೋಶಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಹೌದು, ಬೆಂಗಳೂರಿಗೆ ಬಂದ ಸನ್ನಿ ಹಾರಿದ್ದು ಎಲ್ಲಿಗೆ? ಮುಂದೆ ಓದಿ...

ಮಲ್ಲಿಕಾ ಜಾಗಕ್ಕೆ ಸನ್ನಿ

The Bachelorette ಎಂಬ ಜನಪ್ರಿಯ ಟಿವಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಮಲ್ಲಿಕಾ ಶೆರಾವಾತ್ ಜಾಗಕ್ಕೆ ಸನ್ನಿ ಲಿಯೋನ್ ಬರಲಿದ್ದಾರೆ ಎಂಬ ಸುದ್ದಿ ಇದೆ.

ಬಿಗ್ ಬಾಸ್ ನಲ್ಲಿದ್ದ ಸನ್ನಿ

2011ರಲ್ಲಿ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಲಿಯೋನ್ 49ನೇ ದಿನ ಮನೆ ಪ್ರವೇಶಿಸಿದ್ದಳು. ತನ್ನ ಹಳೆ ಜೀವನ, ಪೋರ್ನ್ ಚಿತ್ರಗಳ ಮಾಡಲು ಇದ್ದ ಸಂಕಟದ ಬಗ್ಗೆ ನೇರವಾಗಿ ಬಾಯ್ಬಿಡದಿದ್ದರೂ ಆಗಾಗ ಹೇಳಿಕೊಂಡು ನೋವು ತೋಡಿಕೊಂಡಿದ್ದಳು

ಬರ್ಲಿನ್ ಗೆ ಸನ್ನಿ

ಬೆಂಗಳೂರಿನಿಂದ ನೇರವಾಗಿ ಜರ್ಮನಿಯ ಬರ್ಲಿನ್ ಗೆ ಸನ್ನಿ ತೆರಳಿದ್ದಾರೆ. ಸನ್ನಿ ಜತೆ ಪತಿ ಡೇನಿಯಲ್ ವೆಬ್ಬರ್ ಇದ್ದರು ಎಂದು ತಿಳಿದು ಬಂದಿದೆ.

ಡೇನಿಯಲ್ ಕುಟುಂಬಕ್ಕಾಗಿ

ಎರಡನೇ ವಿಶ್ವ ಮಹಾ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಡೇನಿಯಲ್ ವೆಬ್ಬರ್ ಅವರ ಕುಟುಂಬದ ಸದಸ್ಯರಿಗೆ ಶಾಂತಿ ಕೋರಿ Holocaust ಸ್ಮಾರಕದಲ್ಲಿ ದಂಪತಿ ಪ್ರಾರ್ಥಿಸಲಿದ್ದಾರೆ.

ಮುಂಬೈಗೆ ಶೀಘ್ರದಲ್ಲೇ

ಬರ್ಲಿನ್ ನಲ್ಲಿ ಹೆಚ್ಚು ದಿನ ಉಳಿಯದ ಸನ್ನಿ ಮತ್ತೆ ಮುಂಬೈಗೆ ಆಗಮಿಸಿ ರಾಗಿಣಿ ಎಂಎಂಎಸ್ 2 ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Canadian actress and model Sunny Leone visited garden city Bangalore, on Sunday, September 22. The actress was in the city to launch high end bike dealership event.
Please Wait while comments are loading...