For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಏಕಕಾಲಕ್ಕೆ ಎರಡೂ ಕೈಗಳಿಂದ ಬರೆಯುತ್ತಿರುವ ವಿಡಿಯೋ ವೈರಲ್: 'ಮೇಧಾವಿ' ಎಂದ ಸಹೋದರಿ

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಧನ ಹೊಂದಿ ಸುಮಾರು 3 ತಿಂಗಳು ಕಳೆದಿದೆ. ಆದರೆ ಈ ಟ್ಯಾಲೆಂಟೆಡ್ ನಟನ ಸಾವಿಗೆ ನಿಖರ ಕಾರಣವೇನು ಎನ್ನುವುದು ಇನ್ನು ತಿಳಿದುಬಂದಿಲ್ಲ. ಸದ್ಯ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಎಂ.ಎಸ್ ಧೋನಿ ಬಯೋಪಿಕ್ ಬಳಿಕ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಸುಶಾಂತ್, ಆ ನಂತರ ಸೈಲೆಂಟ್ ಆಗಿಬಿಟ್ಟಿದ್ದರು. ಅದ್ಭುತ ಸಿನಿಮಾಗಳನ್ನು ನೀಡಿದ್ದರೂ ನಿರೀಕ್ಷೆಯ ಮಟ್ಟದ ಗೆಲವು ಸಿಗಲಿಲ್ಲ. ಸುಶಾಂತ್ ಒಬ್ಬ ಅದ್ಭುತ ಕಲಾವಿದನಾಗಿರುವ ಜೊತೆಗೆ ಬುದ್ಧಿವಂತ ವ್ಯಕ್ತಿ ಕೂಡ ಆಗಿದ್ದರು. ಸುಶಾಂತ್ ಎಷ್ಟು ಬುದ್ಧಿವಂತ ಎನ್ನುವುದು ಆತನ ಸಾವಿನ ಬಳಿಕವೇ ಹೆಚ್ಚಿನವರಿಗೆ ಅರ್ಥವಾಗಿದ್ದು.

  ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲುಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

  ಇತ್ತೀಚಿಗೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸುಶಾಂತ್ ಸಿಂಗ್ ಎಂತಹ ಪ್ರತಿಭೆ ಹೊಂದಿದ್ದರು ಎನ್ನುವುದಕ್ಕೆ ಒಂದು ಸಾಕ್ಷಿ.

  ಹೌದು, ಸುಶಾಂತ್ ಏಕಕಾಲಕ್ಕೆ ಎರಡು ಕೈಗಳಿಂದ ಬರೆಯುತ್ತಿದ್ದರು. ಒಂದು ಕಾಗದ ಮೇಲೆ ಎರಡು ಕೈಗಳಿಂದ ಒಂದೇ ಸಮಯದಲ್ಲಿ ಬರೆಯುತ್ತಿರುವ ವಿಡಿಯೋವನ್ನು ಶ್ವೇತಾ ಹಂಚಿಕೊಂಡಿದ್ದಾರೆ. "ಅಪರೂಪದ ಮೇಧಾವಿ. ಏಕಕಾಲಕ್ಕೆ ಎರಡು ಕೈಗಳಿಂದ ಬರೆಯುವುದು, ಮಿರರ್ ಬರವಣಿಗೆ, ವಿಶ್ವದ ಶೇ 1ಕ್ಕಿಂತ ಕಡಿಮೆ ಜನರಲ್ಲಿ ಇರುವ ಸಾಮರ್ಥ್ಯವಿದು. ನನ್ನ ಸಹೋದರ ದಿ ಬೆಸ್ಟ್" ಎಂದು ಬರೆದುಕೊಂಡಿದ್ದಾರೆ.

  ಈ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕು ಸುಶಾಂತ್ ಬುದ್ಧಿವಂತ ಮತ್ತು ಕ್ರಿಯೇಟಿವ್ ವ್ಯಕ್ತಿ ಆಗಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  Sushant Singh Writing With Both Hands In Simultaneously Video Goes Viral

  ಇಂತಹ ಬುದ್ಧಿವಂತ, ಅದ್ಭುತ ವ್ಯಕ್ತಿಯ ಸಾವಿಗೆ ಕಾರಣವಾದ ರಹಸ್ಯವನ್ನು ಸಿಬಿಐ ಭೇದಿಸುತ್ತಿದೆ. ಈಗಾಗಲೇ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ, ಫ್ಲಾಟ್ ಮೇಟ್ ಸಿದ್ಧಾರ್ಥ್, ಮ್ಯಾನೇಜರ್ ಸೇರಿದ್ದಂತೆ ಅನೇಕರು ಸಿಬಿಐ ವಿಚಾರಣೆ ಒಳಗಾಗಿದ್ದಾರೆ. ಸುಶಾಂತ್ ಸಿಂಗ್ ಸಹೋದರಿಯರಾದ ಮೀತು ಸಿಂಗ್ ಮತ್ತು ಪ್ರಿಯಾಂಕಾ ಸಿಂಗ್ ಸಹ ವಿಚಾರಣೆ ಎದುರಿಸುವ ಸಾಧ್ಯತೆ ಇದೆ.

  English summary
  Actor Sushant Singh sister Shweta Singh shares video of Sushant Singh writing with both hands in simultaneously. She calls him rare genius.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X