For Quick Alerts
  ALLOW NOTIFICATIONS  
  For Daily Alerts

  ಮಾಜಿ ಮತ್ತು ಹಾಲಿ ಬಾಯ್ ಫ್ರೆಂಡ್ ಬಗ್ಗೆ ಸುಷ್ಮಿತಾ ಸೇನ್ ಪುತ್ರಿ ಹೇಳಿದ್ದೇನು?

  |

  ಮಾಜಿ ವಿಶ್ವ ಸುಂದರಿ ಮತ್ತು ನಟಿ ಸುಷ್ಮಿತಾ ಸೇನ್ ಮೊದಲ ಪತ್ರಿ ರೆನೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಓದು ಮುಗಿಯುತ್ತಿದ್ದಂತೆ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಿರುವ ರೆನೇ ಸುಟ್ಟಬಾಜಿ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

  ಸದ್ಯ ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲೇ ಸಮಯ ಕಳೆಯುತ್ತಿರುವ ರೆನೇ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಜೊತೆ ಸಂವಾದಕ್ಕೆ ಇಳಿದಿದ್ದರು. ಆಸ್ಕ್ ಮಿ ಎನಿಥಿಂಗ್ ಮೂಲಕ ಅಭಿಮಾನಿಗಳಿಗೆ ಪ್ರಶ್ನೆ ಕೇಳಿ ಎಂದು ಹೇಳಿದ್ದರು. ರೆನೇಗೆ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದಿದೆ. ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅನೇಕರು ಬಾಯ್ ಫ್ರೆಂಡ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ..

  ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಸಲು ಮುಂದಾದರೂ ಟ್ರೋಲ್ ಆಗಿದ್ದೇಕೆ ಸುಷ್ಮಿತಾ? ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಸಲು ಮುಂದಾದರೂ ಟ್ರೋಲ್ ಆಗಿದ್ದೇಕೆ ಸುಷ್ಮಿತಾ?

  ಬಾಯ್ ಫ್ರೆಂಡ್ ಬಗ್ಗೆ ರೆನೇ ಹೇಳಿದ್ದೇನು?

  ಬಾಯ್ ಫ್ರೆಂಡ್ ಬಗ್ಗೆ ರೆನೇ ಹೇಳಿದ್ದೇನು?

  ನಿಮಗೆ ಬಾಯ್ ಫ್ರೆಂಡ್ ಇದ್ದಾರಾ? ದಯವಿಟ್ಟು ಹೇಳಿ? ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರೆನೇ ನನ್ನ ಗಮನ ಕೆಲಸದ ಕಡೆ ಎಂದಿದ್ದಾರೆ. ಇಷ್ಟಕ್ಕೆ ಬಿಡದ ಅಭಿಮಾನಿಗಳು ನಿಮ್ಮ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಏನಾದರು ಹೇಳಿ? ಎಂದು ಕೇಳಿದ್ದಾರೆ. ನಾಜೂಕಾಗಿಯೇ ಉತ್ತರಿಸಿದ ರೆನೇ ಈ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

  ಭವಿಷ್ಯದ ಗೆಳೆಯನ ಬಗ್ಗೆ ರೆನೇ ಉತ್ತರ

  ಭವಿಷ್ಯದ ಗೆಳೆಯನ ಬಗ್ಗೆ ರೆನೇ ಉತ್ತರ

  ಭವಿಷ್ಯದ ಬಾಯ್ ಫ್ರೆಂಡ್ ಬಗ್ಗೆ ಹೇಳಿ? ಎಂದು ಮತ್ತೋರ್ವ ಅಭಿಮಾನಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರೆನೇ ಭವಿಷ್ಯ ಕಾಲಕ್ಕೆ ಹೋಗಿ ಉತ್ತರಿಸಬೇಕು ಎಂದಿದ್ದಾರೆ. ರೆನೇಗೆ ತರಹೇವಾರಿ ಪ್ರಶ್ನೆಗಳು ಹರಿದುಬಂದಿವೆ. ಮುಂದಿನ ಸಿನಿಮಾ ಪ್ರಾಜೆಕ್ಟ್ ಗಳ ಬಗ್ಗೆಯೂ ಮಾತನಾಡಿದ್ದಾರೆ.

  ಬ್ರೇಕಪ್ ವದಂತಿಗೆ ಬ್ರೇಕ್ ಹಾಕಿದ ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಜೋಡಿಬ್ರೇಕಪ್ ವದಂತಿಗೆ ಬ್ರೇಕ್ ಹಾಕಿದ ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಜೋಡಿ

  ಮುಂದಿನ ಪ್ರಾಜೆಕ್ಟ್ ಯಾವುದು?

  ಮುಂದಿನ ಪ್ರಾಜೆಕ್ಟ್ ಯಾವುದು?

  ಮುಂದಿನ ಸಿನಿಮಾ ಯಾವುದು ಎಂದು ಹೇಳಿದ ಪ್ರಶ್ನೆಗೆ ರೆನೇ ಸದ್ಯದಲ್ಲೇ ಬರ್ತಿದೆ ಎಂದಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಚೊಚ್ಚಲ ಚಿತ್ರದ ಬಗ್ಗೆ ಮಾತನಾಡಿದ ರೆನೇ ಸುಟ್ಟಬಾಜಿ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ ಎಂದ್ದಿದ್ದಾರೆ.

  ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದಾಗ ಖುಷಿಯಾಗಿತ್ತು ಎಂದ ಶ್ರುತಿ ಹಾಸನ್ | Filmibeat Kannada
  ಸುಟ್ಟಬಾಜಿ ಸಿನಿಮಾ ಬಗ್ಗೆ

  ಸುಟ್ಟಬಾಜಿ ಸಿನಿಮಾ ಬಗ್ಗೆ

  ಸುಟ್ಟಬಾಜಿ ನಿರ್ದೇಶಕ ಕಬೀರ್ ಖುರಾನಾ ನಿರ್ದೇಶನದ ಚೊಚ್ಚಲ ಸಿನಿಮಾ. ಚಿತ್ರದಲ್ಲಿ ಮಗಳು ಹಾಗೂ ತಂದೆ-ತಾಯಿ ನಡುವಿನ ಕುರಿತಾದ ಕತೆ ಹೊಂದಿದ್ದು. ಸುಷ್ಮಿತಾ ಪುತ್ರಿ ತಂದೆ-ತಾಯಿ ಮಾತು ಕೇಳದ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ತಾಯಿಯಾಗಿ ಪದ್ಮಾವತ್, ಶಕುಂತಲಾ ದೇವಿ ಸಿನಿಮಾಗಳಲ್ಲಿ ನಟಿಸಿದ್ದ ಕೋಮಲ್ ಚಾಬ್ರಿಯಾ ನಟಿಸಿದ್ದಾರೆ. ತಂದೆ ಪಾತ್ರದಲ್ಲಿ ಸ್ವದೇಸ್ ಖ್ಯಾತಿಯ ರಾಹುಲ್ ವೊಹರಾ ನಟಿಸಿದ್ದಾರೆ.

  English summary
  Sushmita Sen daughter Renee answers questions on ex and current boyfriend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X