ಕುಡಿದು ಶಾರುಖ್ ಖಾನ್ ಅನ್ನೇ ಕಾಡಿಸಿದ್ದಳಂತೆ ಈ ಬಾಲಿವುಡ್ ನಟಿ
ಶಾರುಖ್ ಖಾನ್ ಗೆ ಕೋಟ್ಯಂತರ ಅಭಿಮಾನಿಗಳು, ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ, ನಟ-ನಟಿಯರಲ್ಲೂ ಎಷ್ಟೋ ಮಂದಿ ಶಾರುಖ್ ಖಾನ್ ಅಭಿಮಾನಿಗಳಿದ್ದಾರೆ.
ಬಾಲಿವುಡ್‌ನಲ್ಲಿ ಚಿಗುರುತ್ತಿರುವ, ಚಿಗುರಿರುವ ಹಲವು ಯುವ ನಟ-ನಟಿಯರಿಗೆ ಶಾರುಖ್ ಖಾನ್ ಆರಾಧ್ಯ ದೈವ. ಅಂಥಹವರಲ್ಲಿ ನಟಿ ಸ್ವರಾ ಭಾಸ್ಕರ್ ಸಹ ಒಬ್ಬರು.
ಆದರೆ ನಟಿ ಸ್ವರಾ ಭಾಸ್ಕರ್, ಪಾರ್ಟಿಯೊಂದರಲ್ಲಿ ಚೆನ್ನಾಗಿ ಕುಡಿದು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರನ್ನೇ ಚೆನ್ನಾಗಿ ಗೋಳು ಹೊಯ್ದುಕೊಂಡು ಬಿಟ್ಟಿದ್ದರಂತೆ. ಈ ಬಗ್ಗೆ ಅವರೇ ಮುಜುಗರವಿಲ್ಲದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಿರ್ದೇಶಕ ಆನಂದ್ ಎಲ್ ರಾಯ್ ಪಾರ್ಟಿಯಲ್ಲಿ ಘಟನೆ
ನಿರ್ದೇಶಕ ಆನಂದ್ ಎಲ್ ರಾಯ್ ಅವರ ಹುಟ್ಟುಹಬ್ಬಕ್ಕೆ ನೀಡಲಾಗಿದ್ದ ಪಾರ್ಟಿಯಲ್ಲಿ ಈ ಘಟನೆ ನಡೆದಿತ್ತಂತೆ. ಶಾರುಖ್ ಖಾನ್ ಸಹ ಹಾಜರಿದ್ದ ಆ ಪಾರ್ಟಿಯಲ್ಲಿ ಸ್ವರಾ ಭಾಸ್ಕರ್ ಸಾಕಷ್ಟು ಕುಡಿದಿದ್ದರಂತೆ. 'ಅಂದು ನಾನು ಒಳ್ಳೆಯ ಫಾರ್ಮ್‌ನಲ್ಲಿದ್ದೆ' ಎಂದಿದ್ದಾರೆ ಸ್ವರಾ ಭಾಸ್ಕರ್.

ಕುಡಿದ ಮತ್ತಿನಲ್ಲಿ ಏನೇನೋ ಮಾತನಾಡಿದ್ದೆ: ಸ್ವರಾ
ಕುಡಿದ ಮತ್ತಿನಲ್ಲಿ ಶಾರುಖ್ ಖಾನ್ ಜೊತೆಗೆ ಏನೇನೋ ಮಾತನಾಡಿಬಿಟ್ಟೆ, ಶಾರುಖ್ ಖಾನ್ ಅನ್ನು ಬಹಳವೇ ಗೋಳುಹೊಯ್ದುಕೊಂಡೆ, ಕಾಟ ಕೊಟ್ಟುಬಿಟ್ಟೆ ಎಂದಿದ್ದಾರೆ ಸ್ವರಾ ಭಾಸ್ಕರ್. ಆದರೆ ತಾವು ಶಾರುಖ್ ಜೊತೆಗೆ ಏನು ಮಾತನಾಡಿದೆ, ಹೇಗೆ ಕಾಡಿಸಿದೆ ಎಂಬುದನ್ನು ಹೇಳಿಲ್ಲ.

ಶಾರುಖ್ ಬಹಳ ವಿನಯದಿಂದಿದ್ದರು: ಸ್ವರಾ
ಆದರೆ ಶಾರುಖ್ ಖಾನ್ ಅಂದು ಬಹಳ ವಿನಯದಿಂದಿದ್ದರು. ನಾನು ಎಷ್ಟೇ ಕಾಡಿಸಿದರೂ ಸಹ ಅವರು ನನ್ನ ಮೇಲೆ ಸಿಟ್ಟಾಗಲಿಲ್ಲ, ಜಂಟಲ್‌ಮನ್ ನಂತೆ ವರ್ತಿಸಿದರು' ಎಂದಿದ್ದಾರೆ ಸ್ವರಾ. ಶಾರುಖ್ ಖಾನ್ ಸಹ ಕುಡಿದು ಗಲಾಟೆ ಮಾಡಿದ ಕೆಲವು ಉದಾಹರಣೆಗಳಿವೆ, ಆದರೆ ಅಂದು ವಿನಯದಿಂದ ಇದ್ದರಂತೆ.
Recommended Video

ಸಾಲು-ಸಾಲು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿ
ಸಿನಿಮಾದ ವಿಷಯಕ್ಕೆ ಬರುವುದಾದರೆ ಸ್ವರಾ ಭಾಸ್ಕರ್ ಕೆಲವು ವೆಬ್ ಸರಣಿಗಳು, ಒಟಿಟಿ ಕಂಟೆಂಟ್‌ಗಳಿಗೆ ಸಹಿ ಹಾಕಿದ್ದಾರೆ. ಎರಡು ವರ್ಷಗಳಿಂದ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳದಿರುವ ಶಾರುಖ್ ಖಾನ್ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











