»   » ಸ್ವಿಮ್‌ ಡ್ರೆಸ್‌ನಲ್ಲಿ ಮಿರಮಿರ ಮಿಂಚಿದ ತಾಪ್ಸಿ ಪನ್ನು!

ಸ್ವಿಮ್‌ ಡ್ರೆಸ್‌ನಲ್ಲಿ ಮಿರಮಿರ ಮಿಂಚಿದ ತಾಪ್ಸಿ ಪನ್ನು!

Posted By:
Subscribe to Filmibeat Kannada

ದಕ್ಷಿಣ ಭಾರತ ಮತ್ತು ಬಾಲಿವುಡ್ ಸಿನಿ ಅಂಗಳದಲ್ಲಿ ನಿರಂತರವಾಗಿ ಬ್ಯುಸಿ ಆಗಿರುವ ಲವ್ಲಿ ನಟಿ ತಾಪ್ಸಿ ಪನ್ನು, ಈಗ ಹಿಂದಿ ಕಾಮಿಡಿ ಸಿನಿಮಾ 'ಜುಡ್ವಾ 2' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

'ಸೊಂಟದ ವಿಷ್ಯ ಬೇಡವೊ ಶಿಷ್ಯ' ಎಂದ ನಟಿ ತಾಪ್ಸಿ ಪನ್ನು!

ಇತ್ತೀಚೆಗೆ, 'ತೆಲುಗಿನ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ನಟಿಯರ ಸೊಂಟದ ಭಾಗವನ್ನು ತೋರಿಸುವುದರಲ್ಲಿ ಎತ್ತಿದ ಕೈ. ನನ್ನ ದೇಹದ ಮೇಲೆ ಹೂವುಗಳನ್ನು ಎಸೆಯಲು ಸೂಕ್ತವಲ್ಲ ಎನಿಸಿ ಅವರು ತೆಂಗಿನಕಾಯಿಯನ್ನು ಎಸೆದುಬಿಟ್ಟರು' ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದರು. ಅದೇ ನಟಿ ಈಗ ಟ್ವಿಟ್ಟರ್ ನಲ್ಲಿ ಸ್ವಿಮ್‌ ಡ್ರೆಸ್ ನಲ್ಲಿನ ತಮ್ಮ ಫೋಟೋ ಅಪ್‌ಲೋಡ್ ಮಾಡಿದ್ದು ಮಿರ ಮಿರ ಮಿಂಚುತ್ತಿದ್ದಾರೆ. ಮುಂದೆ ಓದಿರಿ..

ಬೀಚ್ ಬೇಬಿ ತಾಪ್ಸಿ ಪನ್ನು

ತಾಪ್ಸಿ ಪನ್ನು ನೋಡುಗರು ಬೆರಗುಗೊಳ್ಳುವಂತ ಹಾಟ್ ಬಿಕಿನಿ ಡ್ರೆಸ್ ನ ತಮ್ಮ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ ಬೀಚ್‌ನಲ್ಲಿ ಕಳೆದ ಅನುಭವದ ಬಗ್ಗೆ 'ನೀವು ಸಹ ಸರೋವರದ ಒಂದು ಭಾಗವಾಗಬಹುದು... ಆದರೆ ಆ ಅನುಭವ ನಿಮಗೆ ಹೊಸತನವನ್ನು ನಿಮ್ಮಲ್ಲಿ ಸೃಷ್ಟಿಸಿಬೇಕು' ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರೀಕರಣದಲ್ಲಿ ಬ್ಯುಸಿ

ತಾಪ್ಸಿ ಪನ್ನು ಸದ್ಯದಲ್ಲಿ 'ಜುಡ್ವಾ 2' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಶೂಟಿಂಗ್ ವೇಳೆ ಬಿಡುವಿನಲ್ಲಿ ಸಮುದ್ರ ತೀರದಲ್ಲಿ ಕಳೆದ ಅದ್ಭುತ ಕ್ಷಣಗಳನ್ನು ಹೀಗೆ ಸೆರೆಹಿಡಿಯಲಾಗಿದೆ.

ಕಾಮಿಡಿ ಚಿತ್ರ

'ಜುಡ್ವಾ 2' ಕಾಮಿಡಿ ಚಿತ್ರವು ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಜುಡ್ವಾ' ಚಿತ್ರದ ಸೀಕ್ವೆಲ್. ಸಲ್ಲು ಅವರ ಈ ಚಿತ್ರ 1997 ರಲ್ಲಿ ಬಿಡುಗಡೆ ಆಗಿತ್ತು.

ತಾರಾಬಳಗ

'ಜುಡ್ವಾ' ಸೀಕ್ವೆಲ್ ನಲ್ಲಿ ತಾಪ್ಸಿ ಪನ್ನು, ನಟ ವರುಣ್ ಧವನ್, ಮತ್ತು ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಡೀಸ್ ಅಭಿನಯಿಸುತ್ತಿದ್ದಾರೆ. ವರುಣ್ ಚಿತ್ರದಲ್ಲಿ ಡಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಲ್ಲು ಗೆಸ್ಟ್ ರೋಲ್

ಬಿಟೌನ್‌ ಸಿನಿ ಪ್ರಿಯರಿಗೆ ಗುಡ್‌ ನ್ಯೂಸ್ ಏನಪ್ಪಾ ಅಂದ್ರೆ ಸಲ್ಮಾನ್ ಖಾನ್ ರವರು 'ಜುಡ್ವಾ 2' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

English summary
The lovely Taapsee Pannu is currently shooting for her upcoming comedy movie Judwaa 2 and the actress just posted a picture on her Twitter handle posing by the beach and looks stunning in her swimsuit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada