For Quick Alerts
  ALLOW NOTIFICATIONS  
  For Daily Alerts

  ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಸ್ತುಗಳಿಗಾಗಿ ಹುಡುಕಾಡಿದರು: ತಾಪ್ಸಿ

  |

  ನಟಿ ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಮನೆ ಹಾಗೂ ಕಚೇರಿಗಳ ಮೇಲೆ ಮಾರ್ಚ್ 3 ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

  ಐಟಿ ರೇಡ್ ಆದ ಮೂರು ದಿನಗಳ ಬಳಿಕ ಇಂದು ತಾಪ್ಸಿ ಪನ್ನು ಟ್ವಿಟ್ಟರ್‌ನಲ್ಲಿ ಐಟಿ ರೇಡ್ ವಿಷಯವನ್ನು ಹಂಚಿಕೊಂಡಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಿಷಯಗಳಿಗಾಗಿ ಹುಡುಕಾಟ ನಡೆಸಿದರು ಎಂದು ಹೇಳಿದ್ದಾರೆ.

  ಮೂರು ದಿನಗಳ ಕಾಲ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಹಳ ಉಗ್ರವಾಗಿ ಮೂರು ವಸ್ತುಗಳಿಗಾಗಿ ಹುಡುಕಾಟ ನಡೆಸಿದರು ಎಂದಿರುವ ತಾಪ್ಸಿ ಆ ಮೂರು ವಸ್ತುಗಳು ಯಾವುದು ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

  ನಾನು ಪ್ಯಾರಿಸ್‌ನಲ್ಲಿ ಕೊಂಡುಕೊಂಡಿದ್ದೆ ಎನ್ನಲಾಗುತ್ತಿರುವ ಬಂಗ್ಲೆಯ ಬೀಗವನ್ನು ಅವರು ಹುಡುಕಾಡಿದರು. ಬೇಸಿಗೆ ರಜೆಗಳು ಹತ್ತಿರ ಬರುತ್ತಿದೆಯಲ್ಲ ಅದಕ್ಕಾಗಿ ಅವರು ಬಂಗ್ಲೆಯ ಬೀಗ ಹುಡುಕುತ್ತಿರಬಹುದು ಎಂದಿದ್ದಾರೆ ತಾಪ್ಸಿ ಪನ್ನು.

  ನಾನು ಪಡೆದಿದ್ದೇನೆ ಎನ್ನಲಾಗುತ್ತಿರುವ ಐದು ಕೋಟಿ ಹಣದ ರಸೀದಿಗಾಗಿ ಅವರು ಬಹಳ ಹುಡುಕಾಟ ನಡೆಸಿದರು. ನನ್ನನ್ನು 'ಫ್ರೇಮ್' ಮಾಡಲು ಹಾಗೂ ಮುಂದೆ ನನ್ನನ್ನು ಹೆದರಿಸಲು ಅದು ಬಹಳ ಅವಶ್ಯಕವಾಗಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ ತಾಪ್ಸಿ ಪನ್ನು.

  ನಮ್ಮ ಗೌರವಾನ್ವಿತ ಹಣಕಾಸು ಸಚಿವೆ ಹೇಳಿರುವಂತೆ 2013 ರಲ್ಲಿ ನನ್ನ ಮೇಲೆ ಐಟಿ ರೇಡ್ ಆಗಿತ್ತು, ಆ ಐಟಿ ರೇಡ್‌ನ ನೆನಪಿಗಾಗಿ ಅವರು ಹುಡುಕಾಡಿರಬಹುದು ಎಂದು ಕಾಲೆಳೆದಿದ್ದಾರೆ ತಾಪ್ಸಿ ಪನ್ನು. ಟ್ವೀಟ್‌ನ ಕೊನೆಯಲ್ಲಿ 'ನಾನು ಅಗ್ಗದ ನಟಿ ಅಲ್ಲ' ಎಂದು ಸಹ ಹೇಳಿದ್ದಾರೆ ತಾಪ್ಸಿ. ನಟಿ ಕಂಗನಾ, ತಾಪ್ಸಿಯನ್ನು 'ಸಸ್ತಾ ನಟಿ' (ಅಗ್ಗದ ನಟಿ) ಎಂದು ಕರೆದಿದ್ದರು.

  ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಮೇಲೆ 2013 ರಲ್ಲಿಯೇ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ ಅನುರಾಗ್ ಕಶ್ಯಪ್ ವಿರುದ್ಧ ಮಾತ್ರವೇ ಐಟಿ ರೇಡ್ ಆಗಿತ್ತು. ತಾಪ್ಸಿ ಪನ್ನು ಮೇಲೆ ಇದೇ ಮೊದಲ ಬಾರಿಗೆ ಐಟಿ ರೇಡ್ ಆಗಿದೆ.

  Recommended Video

  ಡಿ ಬಾಸ್ ಗೆ ಧನ್ಯವಾದ ಖುಷಿಯಿಂದ ಧನ್ಯವಾದ ಹೇಳಿದ ಯಡಿಯೂರಪ್ಪ | CM Yediyurappa | Darshan | Filmibeat Kannada

  ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ಸಹ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದರು. ಅವರನ್ನು ಹೆದರಿಸಿ ಮೌನವಾಗಿಸಲು ಈ ಐಟಿ ರೇಡ್ ಆಗಿದೆ ಎನ್ನಲಾಗುತ್ತಿದೆ.

  English summary
  Actress Taapsee Pannu tweets about IT raid onher house. She said IT officials search for three things in her house.
  Saturday, March 6, 2021, 16:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X