Don't Miss!
- Finance
ಬಜೆಟ್ 2023: ಗಣರಾಜ್ಯೋತ್ಸವ ದಿನದಂದೇ ಬಜೆಟ್ ಹಲ್ವಾ ಸಮಾರಂಭ
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Automobiles
ಮಾರುತಿಯಿಂದ 2023 ರಲ್ಲಿ 5 ಹೊಸ ಎಸ್ಯುವಿಗಳ ಬಿಡುಗಡೆ... ಶೀಘ್ರದಲ್ಲೇ 3 ಕಾರುಗಳು ಮಾರುಕಟ್ಟೆಗೆ
- News
Breaking: ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ತುರ್ತು ನೆಲಕ್ಕಿಳಿದ ರವಿಶಂಕರ್ ಗುರೂಜಿ ಹೆಲಿಕಾಪ್ಟರ್
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಲ್ಮಾನ್ ಕೃಷ್ಣಮೃಗ ಬೇಟೆಯಾಡಲು ಪ್ರಚೋದನೆ ನೀಡಿದ್ದೇ ಈ ನಟಿಯಂತೆ.!
Recommended Video

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆಯಾಗಿದೆ. ಆದ್ರೆ, ಆ ದಿನ ಸಲ್ಲು ಜೊತೆಯಲ್ಲಿದ್ದ ನಾಲ್ಕು ಜನ ಕಲಾವಿರದನ್ನ ಸಾಕ್ಷ್ಯಾಧಾರದ ಕೊರತೆಯಿಂದ ನಿರ್ದೋಷಿಗಳೆಂದು ಜೋಧ್ ಪುರ ನ್ಯಾಯಾಲಯ ತೀರ್ಮಾನಿಸಿದೆ.
ಸುಮಾರು 20 ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಸಲ್ಲುಗೆ ಮಾತ್ರ ಶಿಕ್ಷೆಯಾಗಿರುವುದು ಕೆಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಂದು ರಾತ್ರಿ ಕೃಷ್ಣಮೃಗದ ಮೇಲೆ ಸಲ್ಲು ಗುಂಡು ಹಾರಿಸಿದ್ದರು ಎಂಬುದು ಪ್ರತ್ಯಕ್ಷದರ್ಶಿಯ ಹೇಳಿಕೆ ಸಲ್ಲುಗೆ ಈ ಶಿಕ್ಷೆ ನೀಡುವಂತೆ ಮಾಡಿದೆ.
ಆದ್ರೆ, ಈ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಏನಪ್ಪಾ ಅಂದ್ರೆ, ಅಂದು ಬಂದೂಕಿನ ಪ್ರಚೋದಕವನ್ನು ಎಳೆಯಲು ನಟಿ ಟಬು ಪ್ರಚೋದಿಸಿದರು. ಅದರ ಪರಿಣಾಮವೇ ಸಲ್ಲು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗ್ತಿದೆ. ಸರ್ಪ್ರೈಸ್ ಅಂದ್ರೆ, ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ಪ್ರಚೋದನೆ ನೀಡಿದ ನಟಿ ಟಬು ಮೊದಲನೇಯದಾಗಿ ನಿರ್ದೋಷಿಯಾಗಿದ್ದಾರೆ.
ಸಲ್ಮಾನ್
ಗೆ
ಮಾತ್ರ
ದೋಷಿ
ಪಟ್ಟ
ಯಾಕೆ,
ಉಳಿದವರು
ಖುಲಾಸೆಯಾಗಿದ್ದು
ಹೇಗೆ?
ಸೆಪ್ಟೆಂಬರ್ 26, 1998 ರಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ, ಜೋಧ್ ಪುರ ಬಳಿಯ ಮಥಾನಿಯಾದಲ್ಲಿರುವ ಭವಾದ್ ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಆರೋಪ ಸಲ್ಮಾನ್ ಖಾನ್ ವಿರುದ್ಧ ಕೇಳಿ ಬಂತು. ಕಂಕಾನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಜೊತೆಗೆ ಜಿಪ್ಸಿಯಲ್ಲಿ ಸೋನಾಲಿ ಬೇಂದ್ರೆ, ಸೈಫ್ ಅಲಿ ಖಾನ್, ಟಬು ಹಾಗೂ ನೀಲಂ ಕೂಡ ಇದ್ದರು.
ಏನಿದು
ಕೃಷ್ಣಮೃಗ
ಬೇಟೆ
ಪ್ರಕರಣ?
ನೀವು
ತಿಳಿದುಕೊಳ್ಳಬೇಕಾದ
ಸಂಗತಿಗಳು
ರಾತ್ರಿ ಬಂದೂಕು ಸದ್ದು ಕೇಳಿಬಂದ ಕೂಡಲೆ ನಿದ್ರೆಯಿಂದ ಎಚ್ಚೆತ್ತ ಗ್ರಾಮಸ್ಥರು, ಓಡಿಬಂದು ನೋಡಿದಾಗ ಕೃಷ್ಣಮೃಗಗಳು ಸತ್ತು ಬಿದ್ದಿದ್ದವು. ಸಲ್ಮಾನ್ ಖಾನ್ ಕೈಯಲ್ಲಿ ಬಂದೂಕು ಇದ್ದದ್ದನ್ನ ಕೆಲವರು ಗಮನಿಸಿದರು. ತಕ್ಷಣ ಅಲ್ಲಿಂದ ತಪ್ಪಿಸಿಕೊಳ್ಳಲು ಸಲ್ಮಾನ್ ಹಾಗೂ ಸ್ನೇಹಿತರು ಪ್ರಯತ್ನ ಪಟ್ಟಾಗ ಜಿಪ್ಸಿಯನ್ನ ಗ್ರಾಮಸ್ಥರು ಅಟ್ಟಿಸಿಕೊಂಡು ಹೋದರು. ಬಳಿಕ ಬಿಷ್ಣೋಯಿ ಸಮುದಾಯ ಹಾಗೂ ಅರಣ್ಯ ಕಾವಲುಗಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.