For Quick Alerts
  ALLOW NOTIFICATIONS  
  For Daily Alerts

  ವಿಜಯ್ ಮಲ್ಯ ಆಗಲಿದ್ದಾರೆ ಅನುರಾಗ್ ಕಶ್ಯಪ್: ಸಿನಿ ಪ್ರೇಮಿಗಳಲ್ಲಿ ಕುತೂಹಲ

  |

  ಬಾಲಿವುಡ್‌ನ ಭಿನ್ನ ಸಿನಿಮಾ ನಿರ್ದೇಶಕ ಎಂದು ಹೆಸರಾಗಿರುವ ಅನುರಾಗ್ ಕಶ್ಯಪ್ ಇದೀಗ ಹೊಸ ಸಿನಿಮಾ ಒಂದಕ್ಕೆ ಕೈ ಇಟ್ಟಿರುವುದು ಸಿನಿಮಾ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

  ಸರಣಿ ಕೊಲೆಗಾರರು, ಸಣ್ಣ ನಗರಗಳ ಡಾನ್‌ಗಳು, ದರೋಡೆಕೋರರ ಬಗ್ಗೆ ಸಿನಿಮಾ ಮಾಡುತ್ತಿದ್ದ ಆ ಮೂಲಕವೇ ಕಲ್ಟ್ ಕ್ಲಾಸಿಕ್‌ಗಳನ್ನು ಸೃಷ್ಟಿಸಿದ್ದ ಅನುರಾಗ್ ಕಶ್ಯಪ್ ಇದೀಗ ವಿಜಯ್ ಮಲ್ಯ ಜೀವನದ ಬಗ್ಗೆ ಆಸಕ್ತಿವಹಿಸಿರುವುದು ಕುತೂಹಲ ಕೆರಳಿಸಿದೆ.

  ಹಾಗೆಂದು ಅನುರಾಗ್ ಕಶ್ಯಪ್, ವಿಜಯ್ ಮಲ್ಯರ ಜೀವನವನ್ನು ಸಿನಿಮಾ ಮಾಡುತ್ತಿಲ್ಲ, ಆದರೆ ನಬೇರೊಬ್ಬ ನಿರ್ದೇಶಕರು ಮಾಡುತ್ತಿರುವ ಸಿನಿಮಾದಲ್ಲಿ ವಿಜಯ್ ಮಲ್ಯರ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

  ತೆರೆಗೆ ಬರುತ್ತಿದೆ ವಿಜಯ್ ಮಲ್ಯ ಜೀವನ

  ತೆರೆಗೆ ಬರುತ್ತಿದೆ ವಿಜಯ್ ಮಲ್ಯ ಜೀವನ

  ತಮಿಳಿನ ಖ್ಯಾತ ನಿರ್ದೇಶಕ ಶಂಕರ್‌ಗೆ ಸಹಾಯಕ ನಿರ್ದೇಶಕನಾಗಿದ್ದು 'ಶಿವಾಜಿ', 'ಅಪರಿಚಿತುಡು', 'ರೋನಬೊ 2.0' ಇನ್ನಿತರೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಕಾರ್ತಿಕ್ ಇದೀಗ ಸ್ವಂತವಾಗಿ ನಿರ್ದೇಶನ ಮಾಡಲು ಮುಂದಾಗಿದ್ದು, ಮೊದಲ ಸಿನಿಮಾ ಆಗಿ ವಿಜಯ್ ಮಲ್ಯರ ಜೀವನವನ್ನು ಆಯ್ದುಕೊಂಡಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರವಾದ ವಿಜಯ್‌ ಮಲ್ಯರ ಪಾತ್ರದಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ನಟಿಸಲಿದ್ದಾರೆ.

  ವಿಜಯ್‌ ಮಲ್ಯರ ಜೀವನ ತೆರೆ ಮೇಲೆ

  ವಿಜಯ್‌ ಮಲ್ಯರ ಜೀವನ ತೆರೆ ಮೇಲೆ

  ವಿಜಯ್ ಮಲ್ಯರ ಪ್ಲೇ ಬಾಯ್‌ ಇಮೇಜು, ಅವರ ಉದ್ಯಮ, ಫ್ಲೈಟ್‌ಗಳು, ಪಾರ್ಟಿಗಳು, ಖಾಸಗಿ ಜೀವನ, ಸಂಬಂಧಗಳು, ಚತುರತೆ, ಹುಂಬತನ, ಐಶಾರಾಮಿ ಜೀವನ, ರಾಜಕೀಯ ಪ್ರವೇಶದ ಪ್ರಯತ್ನ, ಅವರ ಪತನ ಹೀಗೆ ಹಲವು ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ. ವಿಜಯ್‌ ಮಲ್ಯರ ಜೀವನದ ಹಲವು ಘಟ್ಟಗಳಲ್ಲಿ ನಡೆದ ಕತೆಯನ್ನು ಇಡಿಯಾಗಿ ಹೇಳಲು ಹೊರಟಿದ್ದಾರೆ ನಿರ್ದೇಶಕ ಕಾರ್ತಿಕ್ ಕೆ.

  ಮೊದಲ ಬಾರಿಗೆ ಗಂಭೀರ ಪಾತ್ರ

  ಮೊದಲ ಬಾರಿಗೆ ಗಂಭೀರ ಪಾತ್ರ

  ಅನುರಾಗ್ ಕಶ್ಯಪ್, ಅತ್ಯುತ್ತಮ ನಿರ್ದೇಶಕ ಆಗಿರುವ ಜೊತೆಗೆ ನಟ ಸಹ ಹೌದು. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಅವರ ನಟನೆಗೆ ಪ್ರಶಂಸೆಯೂ ವ್ಯಕ್ತವಾಗಿದೆ. ಅನುರಾಗ್‌ರ ನಿರ್ದೇಶನಕ್ಕೆ ಇದ್ದಂತೆ ನಟನೆಗೂ ಅಭಿಮಾನಿಗಳಿದ್ದಾರೆ. ಆದರೆ ಅನುರಾಗ್ ಈ ವರೆಗೆ ಪೂರ್ಣ ಪ್ರಮಾಣದ ಪ್ರಮುಖ ಪಾತ್ರದಲ್ಲಿ ನಟಿಸಿಲ್ಲ. ವಿಲನ್ ಆಗಿ, ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. 'ಎಕೆ v/s ಎಕೆ' ಸಿನಿಮಾದಲ್ಲಿ ಸ್ವತಃ ತಾವೇ ಆಗಿದ್ದರೂ ವಿಲನ್‌ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪ್ರಮುಖ ಪಾತ್ರದಲ್ಲಿ ಅನುರಾಗ್ ನಟಿಸಲಿದ್ದಾರೆ.

  ಮಂಗಳೂರು ಮೂಲದ ವಿಜಯ್ ಮಲ್ಯ

  ಮಂಗಳೂರು ಮೂಲದ ವಿಜಯ್ ಮಲ್ಯ

  ಮಂಗಳೂರು ಮೂಲದ ವಿಜಯ್ ಮಲ್ಯ ದೇಶ ಕಂಡ ಕೆಲವೇ ವರ್ಣಮಯ ಬ್ಯುಸಿನೆಸ್‌ಮನ್‌ಗಳಲ್ಲಿ ಒಬ್ಬರು. ಉದ್ಯಮಿ, ರಾಜಕಾರಣಿಯೂ ಆಗಿರುವ ವಿಜಯ್ ಮಲ್ಯ. ಭಾರತದ ಪಾಲಿಗೆ ಘೋಷಿತ ಆರ್ಥಿಕ ಅಪರಾಧಿ. ಬ್ಯಾಂಕುಗಳಿಗೆ ಸಾವಿರಾರು ಕೋಟಿ ನಷ್ಟ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅಪರಾಧಿ. ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರುವ ಯತ್ನಗಳು ನಡೆಯುತ್ತಿವೆಯಾದರೂ ಯಾವುದೂ ಇನ್ನೂ ಸಫಲವಾಗಿಲ್ಲ. ಕಿಂಗ್‌ ಫಿಶರ್ ಸಾಮ್ರಾಜ್ಯ ಕಟ್ಟಿದ ರಾಜನಂತೆ ಬದುಕಿ ಈಗ ಭಾರತದಿಂದ ದೂರಾಗಿ ಐಶಾರಾಮಿ ಜೀವನ ಶೈಲಿಗೆ ವಿದಾಯ ಹೇಳಿ ಸದ್ದಾಗದಂತೆ, ಸುದ್ದಿಯಾಗದಂತೆ ಬದುಕುತ್ತಿದ್ದಾರೆ.

  English summary
  Director K Karthik making movie on Vijay Mallya's life. Director Anurag Kashyap will play Mallya's character.
  Friday, November 11, 2022, 12:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X