For Quick Alerts
  ALLOW NOTIFICATIONS  
  For Daily Alerts

  ಇನ್ಫೋಸಿಸ್ ನಾರಾಯಣ ಮೂರ್ತಿ ಬಯೋಪಿಕ್ ಚಿತ್ರಕ್ಕೆ ಸ್ಟಾರ್ ನಟರ ಹೆಸರು?

  |

  ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಅವರ ಜೀವನ ಕಥೆ ಸಿನಿಮಾ ಆಗಲಿ ಎಂದು ಸಾವಿರಾರು ಜನರು ನಿರೀಕ್ಷೆ ಮಾಡುತ್ತಿದ್ದರು. ಇದೀಗ, ಈ ಕೋರಿಕೆ ಈಡೇರುತ್ತಿದೆ. ಹೌದು, ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಬಯೋಪಿಕ್ ಸಿನಿಮಾ ಆಗುತ್ತಿರುವುದು ಈಗ ಅಧಿಕೃತವಾಗಿ ಘೋಷಣೆಯಾಗಿದೆ.

  ಬಾಲಿವುಡ್ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಗೆ ಅಶ್ವಿನಿ ಅಯ್ಯರ್ ತಿವಾರಿ ಅವರೇ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನಿ ಜೊತೆ ನಿತೇಶ್ ತಿವಾರಿ ಮತ್ತು ಮಹಾವೀರ್ ಜೈನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

  ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ

  ಇದೀಗ, ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರ ಪಾತ್ರಗಳಲ್ಲಿ ಯಾರೂ ನಟಿಸಬಹುದು ಎಂಬ ಚರ್ಚೆ ಆರಂಭವಾಗಿದೆ. ನೆಟ್ಟಿಗರು ಕೂಡ ಹಲವು ಸ್ಟಾರ್ ನಟರ ಹೆಸರುಗಳನ್ನ ಈ ಚಿತ್ರಕ್ಕೆ ಸೂಕ್ತವಾಗಬಹುದು ಎಂದು ಆಯ್ಕೆ ಮಾಡುತ್ತಿದ್ದಾರೆ. ಹಾಗಿದ್ರೆ, ಐಟಿ ದಿಗ್ಗಜರ ಬಯೋಪಿಕ್ ನಲ್ಲಿ ಯಾರು ನಟಿಸಿದರೆ ಉತ್ತಮ? ಮುಂದೆ ಓದಿ....

  ಅಕ್ಷಯ್ ಕುಮಾರ್ ಮತ್ತು ಆ ನಟಿ

  ಅಕ್ಷಯ್ ಕುಮಾರ್ ಮತ್ತು ಆ ನಟಿ

  ಬಯೋಪಿಕ್ ಚಿತ್ರಗಳಿಗೆ ಮೊದಲ ಆಯ್ಕೆ ನಟ ಅಕ್ಷಯ್ ಕುಮಾರ್ ಎನ್ನುವಂತಾಗಿದೆ. ಬೇಬಿ, ಏರ್ ಲಿಫ್ಟ್, ರುಸ್ತುಂ, ಪ್ಯಾಡ್ ಪ್ಯಾನ್, ಕೇಸರಿ, ಗೋಲ್ಡ್ ಅಂತ ರಿಯಾಲಿಸ್ಟಿಕ್ ಚಿತ್ರಗಳ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿರುವ ಅಕ್ಷಯ್ ಕುಮಾರ್ ಈ ಬಯೋಪಿಕ್ ನಲ್ಲಿ ನಟಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಕ್ಷಯ್ ಕುಮಾರ್ ಜೊತೆ ತಾಪ್ಸಿ ಪೆನ್ನು ಜೋಡಿಯಾಬಹುದು ಎಂಬ ಮಾತಿದೆ.

  ರಣ್ಬೀರ್ ಕಪೂರ್ ಮತ್ತು ಆ ನಟಿ

  ರಣ್ಬೀರ್ ಕಪೂರ್ ಮತ್ತು ಆ ನಟಿ

  ಪ್ರಯೋಗಾತ್ಮಕ, ಬಯೋಪಿಕ್, ಕಮರ್ಷಿಯಲ್ ಹೀಗೆ ಯಾವುದೇ ಕಥೆಗೆ ಜೀವ ತುಂಬ ಬಲ್ಲ ನಟ ರಣ್ಬೀರ್ ಕಪೂರ್, ನಾರಾಯಣ ಮೂರ್ತಿ ಅವರ ಬಯೋಪಿಕ್ ಮಾಡಿದ್ರೆ ಉತ್ತಮ ಎಂಬ ಅಭಿಪ್ರಾಯವನ್ನ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ರಣ್ಬೀರ್ ಜೊತೆ ಆಲಿಯಾ ಭಟ್ ನಾಯಕಿಯಾಗಿ ನಟಿಸಬಹುದು ಎಂದು ಹೇಳುತ್ತಿದ್ದಾರೆ.

  ಇನ್ಫೋಸಿಸ್ ನಾರಾಯಣ ಮೂರ್ತಿ 6 ಸಾವಿರ ಸಾಲ ಪಡೆದು ಕೋಟ್ಯಧಿಪತಿ ಆದ ಕಥೆಇನ್ಫೋಸಿಸ್ ನಾರಾಯಣ ಮೂರ್ತಿ 6 ಸಾವಿರ ಸಾಲ ಪಡೆದು ಕೋಟ್ಯಧಿಪತಿ ಆದ ಕಥೆ

  ಸುಶಾಂತ್ ಸಿಂಗ್ ಮಾಡಬಹುದು

  ಸುಶಾಂತ್ ಸಿಂಗ್ ಮಾಡಬಹುದು

  ಮಹೇಂದ್ರ ಸಿಂಗ್ ಧೋನಿ ಬಯೋಪಿಕ್ ಮೂಲಕ ಸಕ್ಸಸ್ ಕಂಡ ನಟ ಸುಶಾಂತ್ ಸಿಂಗ್ ರಜಪೂತ್, ನಾರಾಯಣ ಮೂರ್ತಿ ಅವರ ಬಯೋಪಿಕ್ ನಲ್ಲಿ ನಟಿಸಿದರೆ ಸೂಕ್ತ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ಕನ್ನಡದಲ್ಲಿ ಬರಲಿ ಬಯೋಪಿಕ್

  ಕನ್ನಡದಲ್ಲಿ ಬರಲಿ ಬಯೋಪಿಕ್

  ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರ ಬಯೋಪಿಕ್ ಒಂದೇ ಭಾಷೆಯಲ್ಲಿ ಬರುತ್ತಾ ಅಥವಾ ಬಹುಭಾಷೆಯಲ್ಲಿ ಬರುತ್ತಾ ಎನ್ನುವುದರ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಕನ್ನಡದಲ್ಲಿ ಬರಲೇಬೇಕು ಎಂದು ಬೇಡಿಕೆ ಇದೆ. ಮತ್ತು ದಕ್ಷಿಣ ಭಾಷೆಗಳಲ್ಲೂ ಈ ಸಿನಿಮಾ ಬರಲಿ ಎಂಬ ಮಾತಿದೆ.

  ನಾರಾಯಣ ಮೂರ್ತಿ ಅವರನ್ನ ರಿಜೆಕ್ಟ್ ಮಾಡಿದ್ದರು ವಿಪ್ರೋ ಸಂಸ್ಥಾಪಕ ಪ್ರೇಮ್ ಜಿನಾರಾಯಣ ಮೂರ್ತಿ ಅವರನ್ನ ರಿಜೆಕ್ಟ್ ಮಾಡಿದ್ದರು ವಿಪ್ರೋ ಸಂಸ್ಥಾಪಕ ಪ್ರೇಮ್ ಜಿ

  ಕಂಗನಾ ಜೊತೆ ಸಿನಿಮಾ ಮಾಡ್ತಿದ್ದಾರೆ

  ಕಂಗನಾ ಜೊತೆ ಸಿನಿಮಾ ಮಾಡ್ತಿದ್ದಾರೆ

  ಕಂಗನಾ ರಣಾವತ್ ಜೊತೆ 'ಪಂಗಾ' ಸಿನಿಮಾ ಮಾಡುತ್ತಿದ್ದು, ಆ ಸಿನಿಮಾ ಮುಗಿದ ಮೇಲೆ ನಾರಾಯಣ ಮೂರ್ತಿ ಅವರ ಬಯೋಪಿಕ್ ಚಿತ್ರ ಆರಂಭಿಸಲಿದ್ದಾರೆ. ಈಗಾಗಲೇ ನಾರಾಯಣ ಮೂರ್ತಿ ದಂಪತಿ ಬಳಿ ಸಿನಿಮಾಗೆ ಸಂಬಂಧಿಸಿದಂತೆ ಅನುಮತಿ ಪಡೆದುಕೊಂಡಿದ್ದು, ಅದಕ್ಕೆ ಬೇಕಾಗುವ ಪೂರ್ವ ತಯಾರಿ ಕೂಡ ನಡೆಸಿಕೊಂಡಿದ್ದಾರೆ.

  English summary
  Infosys Co-Founder NR Narayana Murthy and his wife Sudha murthy biopic announced. the movie directed by Ashwiny Iyer Tiwari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X