For Quick Alerts
  ALLOW NOTIFICATIONS  
  For Daily Alerts

  ಜಾತಿ ನಿಂದನೆ ಆರೋಪ: ನಟಿ ಯುವಿಕಾ ಚೌಧರಿ ವಿರುದ್ಧ ಎಫ್‌ಐಆರ್

  |

  ಬಾಲಿವುಡ್ ನಟಿ ಯುವಿಕಾ ಚೌಧರಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಸಮುದಾಯವೊಂದನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಹಕ್ಕುಗಳ ಹೋರಾಟಗಾರರು ದೂರು ನೀಡಿದ್ದು, ಹರಿಯಾಣ ಪೊಲೀಸರು ನಟಿ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದಾಗಿ ವರದಿಯಾಗಿದೆ.

  ವಿಡಿಯೋದಲ್ಲಿ ನಟಿ ಪರಿಶಿಷ್ಟ ಜಾತಿ ಸಮುದಾಯದ ಬಗ್ಗೆ ಕೆಲವು ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದಲಿತ ಹಕ್ಕುಗಳ ಹೋರಾಟಗಾರ ರಜತ್ ಕಲ್ಸನ್ ದೂರಿನಲ್ಲಿ ಆರೋಪಿಸಿದ್ದಾರೆ.

  ಗಣೇಶ್‌ಗೆ ನಾಯಕಿಯಾಗಿದ್ದ ನಟಿ ಯುವಿಕಾ ಚೌಧರಿ ಬಂಧನಕ್ಕೆ ಒತ್ತಾಯಗಣೇಶ್‌ಗೆ ನಾಯಕಿಯಾಗಿದ್ದ ನಟಿ ಯುವಿಕಾ ಚೌಧರಿ ಬಂಧನಕ್ಕೆ ಒತ್ತಾಯ

  ಈ ಹಿನ್ನೆಲೆ ಶುಕ್ರವಾರ ಸಂಜೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ನಟಿ ಯುವಿಕಾ ಚೌಧರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ. ಘಟನೆಯ ವಿವರ ಮುಂದೆ ಓದಿ...

  ವಿಡಿಯೋದಲ್ಲಿ ಸಮುದಾಯದ ಬಗ್ಗೆ ಅವಹೇಳನ

  ವಿಡಿಯೋದಲ್ಲಿ ಸಮುದಾಯದ ಬಗ್ಗೆ ಅವಹೇಳನ

  ಮೇ 25 ರಂದು ನಟಿ ಯುವಿಕಾ ಚೌಧರಿ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಪತಿ ಪ್ರಿನ್ಸ್ ನರುಲಾ ಮನೆಯಲ್ಲಿ ಹೇರ್‌ ಸ್ಟೈಲ್ ಮಾಡಿಸಿಕೊಳ್ಳುತ್ತಿದ್ದ ವಿಡಿಯೋದಲ್ಲಿ ಮಾತನಾಡುವ ಸಂದರ್ಭದಲ್ಲಿ ಸಮುದಾಯವೊಂದರ ಬಗ್ಗೆ ಉಲ್ಲೇಖಿಸಿದ್ದರು. ಈ ಪದ ಬಳಕೆ ಮಾಡಿದ್ದಕ್ಕೆ ತೀವ್ರ ಆಕ್ಷೇಪಾ ಎದುರಾಯಿತು. ಯುವಿಕಾ ಜಾತಿ ನಿಂದನೆ ಮಾಡಿದ್ದಾರೆ. ಬಂಧಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಎದುರಾಯಿತು.

  ಕ್ಷಮೆ ಕೇಳಿದ ಯುವಿಕಾ

  ಕ್ಷಮೆ ಕೇಳಿದ ಯುವಿಕಾ

  ವಿಡಿಯೋ ಕುರಿತು ಹಾಗೂ ಯುವಿಕಾ ಬಳಸಿದ ಪದದ ಕುರಿತು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಎಚ್ಚೆತ್ತುಕೊಂಡ ನಟಿ ಕೂಡಲೇ ವಿಡಿಯೋ ಡಿಲೀಟ್ ಮಾಡಿದರು. ಬಳಿಕ ಕ್ಷಮೆಯಾಚಿಸಿದರು. 'ನಾನು ಉದ್ದೇಶಪೂರ್ವಕವಾಗಿ ಅಥವಾ ಯಾವುದೇ ಸಮುದಾಯದವರಿಗೆ ಬೇಸರ ತರಿಸಬೇಕೆಂದು ವಿಡಿಯೋ ಮಾಡಲಿಲ್ಲ. ನಾನು ಬಳಸಿದ ಪದದ ಅರ್ಥವೂ ನನಗೆ ಗೊತ್ತಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿಬಿಡಿ' ಎಂದು ಸ್ಪಷ್ಟನೆ ನೀಡಿದ್ದರು.

  ಯುವಿಕಾ ಪತಿಯೂ ಕ್ಷಮೆಯಾಚಿಸಿದರು

  ಯುವಿಕಾ ಪತಿಯೂ ಕ್ಷಮೆಯಾಚಿಸಿದರು

  ಯುವಿಕಾ ಪತಿ ಪ್ರಿನ್ಸ್ ನರುಲಾ ಸಹ ಈ ಬಗ್ಗೆ ಕ್ಷಮೆ ಕೇಳಿದ್ದು, 'ಯುವಿಕಾ ಸೇರಿದಂತೆ ನಮಗೆ ಯಾರಿಗೂ ಆ ಪದದ ಅರ್ಥ ಗೊತ್ತಿರಲಿಲ್ಲ. ವಿಡಿಯೋ ಚಿತ್ರೀಕರಣ ಮಾಡಿದಾಗ ನಾನೂ ಅಲ್ಲಿಯೇ ಇದ್ದೆ. ಇದು ಬೇಕೆಂದು ಮಾಡಿದ ತಪ್ಪಲ್ಲ. ಒಮ್ಮೆ ನಮಗೆ ಆ ಪದದ ಅರ್ಥ ಗೊತ್ತಾದ ಬಳಿಕ ನಾವು ಮಾಡಿದ ತಪ್ಪು ಎಷ್ಟು ದೊಡ್ಡದೆಂದು ಅರಿವಾಯಿತು. ದಯವಿಟ್ಟು ನಮ್ಮನ್ನು ಕ್ಷಮಿಸಿ' ಎಂದು ಕೇಳಿಕೊಂಡಿದ್ದರು.

  ಚಿತ್ರಗಳು: ಧಾಂ ಧೂಂ ಆಗಿ ನಡೆಯಿತು ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ಮದುವೆಚಿತ್ರಗಳು: ಧಾಂ ಧೂಂ ಆಗಿ ನಡೆಯಿತು ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ಮದುವೆ

  Recommended Video

  ಸಿನಿಮಾದಲ್ಲಿ ನಟಿಸಿ ಅಂತಾ ಅಣ್ಣಾವ್ರ ಮನೆ ಮುಂದೆ ಪ್ರತಿಭಟನೆ ಮಾಡಿದ್ರು ಅಭಿಮಾನಿಗಳು | Filmibeat Kannada
  ಕನ್ನಡದಲ್ಲಿ ನಟಿಸಿರುವ ಯುವಿಕಾ

  ಕನ್ನಡದಲ್ಲಿ ನಟಿಸಿರುವ ಯುವಿಕಾ

  ಯುವಿಕಾ ಚೌಧರಿ ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. 2009ರಲ್ಲಿ ತೆರೆಗೆ ಬಂದಿದ್ದ 'ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿ ಅಭಿನಯಿಸಿದ್ದರು. ಹಿಂದಿಯ ಓಂ ಶಾಂತಿ ಓಂ, ಸಮ್ಮರ್ 2007 ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

  English summary
  Bollywood Actress Yuvika Chaudhary bvoked for using casteist remarks in video.
  Saturday, May 29, 2021, 18:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X