»   » ಇಷ್ಟು ಚಿಕ್ಕ ವಯಸ್ಸಿನಲ್ಲಿ 'ದಂಗಲ್' ನಟಿಗೆ ಇಂತಹ ಕಾಯಿಲೆನಾ.?

ಇಷ್ಟು ಚಿಕ್ಕ ವಯಸ್ಸಿನಲ್ಲಿ 'ದಂಗಲ್' ನಟಿಗೆ ಇಂತಹ ಕಾಯಿಲೆನಾ.?

Posted By:
Subscribe to Filmibeat Kannada
ಈ ನಟಿಗೆ ಎಂಥ ಪರಿಸ್ಥಿತಿ ಬಂತಪ್ಪ !!! | Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದ ಮೂಲಕ ಹಿಂದಿ ಸಿನಿರಂಗ ಪ್ರವೇಶ ಮಾಡಿದ 17 ವರ್ಷದ ಜೈರಾ ವಾಸೀಮ್ ಇದುವರೆಗೂ ಮಾಡಿರುವುದು ಎರಡೇ ಸಿನಿಮಾ. 'ದಂಗಲ್' ನಂತರ 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದಲ್ಲಿ ಜೈರಾ ನಟಿಸಿದ್ದರು.

ಚೊಚ್ಚಲ ಚಿತ್ರದ ಅಭಿನಯದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಖ್ಯಾತಿ ಈಕೆಯದ್ದು. ಹೀಗೆ, ಅತಿ ಚಿಕ್ಕವಯಸ್ಸಿನಲ್ಲೇ ದೊಡ್ಡ ಯಶಸ್ಸು ಕಂಡ ಜೈರಾ ತನ್ನ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ.

'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದ ತಾಯಿ ಮಗಳ ಭಾವನಾತ್ಮಕ ಹಾಡು ರಿಲೀಸ್

ಇದು ನಂಬಲು ಅಸಾಧ್ಯವೆನಿಸಿದರೂ, ನಂಬಬೇಕಾದ ಅನಿವಾರ್ಯತೆ ಇದೆ. ಹೌದು, ಕಳೆದ ಹಲವು ವರ್ಷಗಳಿಂದ ಜೈರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಏನಿದೆ ಜೈರಾ ಬರೆದುಕೊಂಡಿರುವ ಸ್ಟೇಟಸ್ ನಲ್ಲಿ.? ಮುಂದೆ ಓದಿ.....

ನಾಲ್ಕು ವರ್ಷದಿಂದ ಮಾನಸಿಕ ನೋವು

ತಾನು ಕಳೆದ ನಾಲ್ಕು ವರ್ಷಗಳಿಂದ ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದು, ಈ ಸಂದರ್ಭದಲ್ಲಿ ನಾನು ಅನುಭವಿಸುವ ಮಾನಸಿಕ ವೇತನೆ, ನೋವು ಯಾರಿಗೂ ಬೇಡ. ಇದ್ದಕ್ಕಿದ್ದ ಹಾಗೆ ಸುಸ್ತು, ನರಗಳ ತೊಂದರೆ, ಆತ್ಮಹತ್ಯೆಯ ಯೋಚನೆಗಳು ನನನ್ನು ಪೀಡಿಸುತ್ತಿದ್ದವು ಎಂದು ಜೈರಾ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ನೋವು ಯಾರಿಗೂ ಬೇಡ

''ನಾನು ಈ ವಿಚಾರವನ್ನು ಇದುವರೆಗೂ ನನ್ನೋಳಗೆ ಅದುಮಿಟ್ಟುಕೊಂಡಿದ್ದೆ. ಆದರೆ ಕೊನೆಗೂ ಇದನ್ನು ಬಹಿರಂಗಪಡಿಸುವ ನಿರ್ಧಾರಕ್ಕೆ ಬಂದಿದ್ದೇನೆ. ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗಿದೆ. ಇದೊಂದು ಜೀವನದ ಘಟ್ಟ. ನೀನು ಅತ್ಯಂತ ಕಿರಿಯ ವಯಸ್ಸಿನವಳಾಗಿದ್ದೀಯ. ಎಲ್ಲವನ್ನೂ ಎದುರಿಸಬೇಕು ಎಂಬ ಹಿತವಚನಗಳು ನನಗೆ ಎಲ್ಲರಿಂದಲೂ ಬರುತ್ತಿತ್ತು. ಆದರೆ ಆ ಸಂದರ್ಭ ನಾನು ಅನುಭವಿಸಿದ ನೋವು ಯಾರಿಗೂ ಬೇಡ'' ಎಂದಿದ್ದಾರೆ.

ರಾತ್ರಿಯಲ್ಲ ನಿದ್ದೆಯಿಲ್ಲ

''ಪ್ರತಿದಿನ ಮಾತ್ರೆ, ರಾತ್ರಿ ಎಷ್ಟು ಹೊತ್ತು ಎಂದಿಲ್ಲ. ಮದ್ಯರಾತ್ರಿಯಾದರೂ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಏಕಾಂಗಿ ಎಂಬ ಭಾವ, ರೆಸ್ಪ್ ಲೆಸ್ ಆಗುತ್ತಿದ್ದೆ, ವಿಭ್ರಮೆ, ಭ್ರಮೆ ಹೀಗೆ ಎಲ್ಲವೂ ನನನ್ನು ಕಾಡುತ್ತಿತ್ತು. ಈ ಪರಿಸ್ಥಿತಿ ಯಾರಿಗೂ ಬೇಡ'' ಎಂದು ನೋವನ್ನ ತೋಡಿಕೊಂಡಿದ್ದಾರೆ.

ಆತ್ಮಹತ್ಯೆಯ ಯೋಚನೆ ಬರುತ್ತಿತ್ತು

''ಸಾಮಾನ್ಯವಾಗಿ 25ರ ಹರೆಯದ ನಂತರ ಖಿನ್ನತೆ ಕಾಡುವುದು ಸಾಮಾನ್ಯ. ಆದರೆ ಇದು ನನ್ನನ್ನು ತುಂಬಾ ಚಿಕ್ಕವಯಸ್ಸಿಗೆ ಕಾಡಿತು. ನನ್ನೊಳಗೆ ಏನೋ ಆಗುತ್ತಿದೆ ಎಂದು ನನಗಾಗುತ್ತಿತ್ತು. ನನಗೆ ನನ್ನ 12ರ ವಯಸ್ಸಿನಲ್ಲಿ ಮೊದಲ ಪ್ಯಾನಿಕ್ ಆಟ್ಯಾಕ್ ಆಯ್ತು. ಇದಾದ ಬಳಿಕ 14ನೇ ವಯಸ್ಸಿಗೆ. ನನಗೆ ಪದೇ ಪದೇ ಆತ್ಮಹತ್ಯೆಯ ಯೋಚನೆ ಬರುತ್ತಿತ್ತು. ನನ್ನೊಳಗೆ ಎಲ್ಲವೂ ಸರಿಯಿಲ್ಲ ಎಂದು ನನಗನಿಸುತ್ತಿತ್ತು. ಕೊನೆಗೆ ಇದು ಖಿನ್ನತೆ ಎಂಬುದನ್ನು ವೈದ್ಯರು ದೃಡಪಡಿಸಿದರು'' ಎಂದು ಬಹಿರಂಗಪಡಿಸಿದ್ದಾರೆ.

ಎಲ್ಲರಿಗೂ ಧನ್ಯವಾದಗಳು

'ತನ್ನ ಸಮಸ್ಯೆಯನ್ನು ನಾನೀಗ ಅರ್ಥಮಾಡಿಕೊಂಡಿದ್ದು, ಗುಣಮುಖಳಾಗಲು ಯತ್ನಿಸುತ್ತಿದ್ದೇನೆ. ತಾನು ನನ್ನ ಕೆಲಸ, ಶಾಲೆ, ಸೋಷಿಯಲ್ ಮೀಡಿಯಾದಿಂದ ಸಂಪೂರ್ಣ ದೂರವಿರಲು ನಿರ್ಧರಿಸಿದ್ದೇನೆ. ತನ್ನ ಕುಟುಂಬ ಸದಸ್ಯರಿಗೆ ಹಾಗೂ ತನ್ನ ಏಳು ಬೀಳುಗಳೊಂದಿಗಿದ್ದ ಜನರಿಗೆ ಧನ್ಯವಾದಗಳು'' ತಿಳಿಸಿದ್ದಾರೆ.

English summary
The ‘Dangal’ actor Zaira Wasim, in an Instagram post, says she’s been suffering for the last four years.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X