ಎ.ಆರ್.ರೆಹಮಾನ್ ಎಂದೇ ಖ್ಯಾತಿಯಾಗಿರುವ ಅಲ್ಲಾರಕ್ಕ ರೆಹಮಾನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ,ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ರೆಹಮಾನ್ ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ. 1992 ರಲ್ಲಿ ತಮಿಳಿನ `ರೋಜಾ' ಚಿತ್ರದಿಂದ ಸಂಗೀತ ಪಯಣ ಆರಂಭಿಸಿದರು.
ಕನ್ನಡದಲ್ಲಿ ರಿಮೇಕ್ ಚಿತ್ರಗಳಾದ `ಗಾಡ್ ಫಾದರ್', `ಸಜನಿ' ಚಿತ್ರಗಳಲ್ಲಿ ಇವರ ತಮಿಳು ಮೂಲ ಚಿತ್ರಗಳ ಸಂಗೀತವನ್ನು ಬಳಸಿಕೊಳ್ಳಲಾಗಿದೆ.