twitter
    Celebs»Aakanksha Singh»Biography

    ಆಕಾಂಕ್ಷಾ ಸಿಂಗ್ ಜೀವನಚರಿತ್ರೆ

    ಆಕಾಂಕ್ಷಾ ಸಿಂಗ್ ಬಾಲಿವುಡ್, ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ, ಗಾಯಕಿ ಮತ್ತು ಬರಹಗಾರ್ತಿ. ಚಿತ್ರರಂಗದವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲಿಯೂ ಕೆಲಸ ಮಾಡಿದ ಅನುಭವ ಹೊಂದಿರುವ ಇವರು ಕಿಚ್ಚ ಸುದೀಪ್ ಅಭಿನಯದ `ಪೈಲ್ವಾನ್' ಚಿತ್ರದ ಮೂಲಕ ಚಂದನವನ ಪ್ರವೇಶಿಸುತ್ತಿದ್ದಾರೆ.

    1990 ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಜನಿಸಿದ ಆಕಾಂಕ್ಷಾ ವೃತ್ತಿಯಲ್ಲಿ ಪಿಸಿಯೋ ತೆರಪಿ ವೈದ್ಯರು. ಹಿಂದಿಯ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ `ನ ಬೋಲೆ ತುಮ್ ನ ಮೈನೇ ಕುಚ್ ಕಹಾ' ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿ ಜನಪ್ರಿಯರಾದರು. ನಂತರ 2015 ರಲ್ಲಿ `ಗುಲ್‌ಮೋಹರ್ ಗ್ರ್ಯಾಂಡ್' ಎಂಬ ಸೀರಿಯಲ್‌ನಲ್ಲಿ ಅಭಿನಯಿಸಿದರು. ಈ ಶೋ ಯುಕೆ(UK)ಯಲ್ಲಿ ಅತಿ ಹೆಚ್ಚು ಪ್ರಸಿದ್ಧಿಯಾಗಿ ನಂಬರ್ 1 ಸ್ಥಾನ ಪಡೆಯಿತು.ಹಲವು ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿದ್ದಾರೆ.

    2013 ಜುಲೈನಲ್ಲಿ ತಮ್ಮ ಬಹುಕಾಲದ ಗೆಳೆಯ ಕುನಾಲ್ ಸೇನ್‌ರನ್ನು ಸಂಪ್ರಾದಯಿಕ ಶೈಲಿಯಲ್ಲಿ ಜೈಪುರದಲ್ಲಿ ಮದುವೆಯಾದರು. ಎಲ್ಲ ನಟಿಯರಿಗೆ ಮದುವೆಯ ನಂತರ ಅವಕಾಶಗಳು ಕಡಿಮೆಯಾದರೆ ಆಕಾಂಕ್ಷಾ ನಾಯಕನಟಿಯಾಗಿದ್ದು ಮದುವೆಯ ನಂತರ.

    2017 ರಲ್ಲಿ ಹಿಂದಿಯಲ್ಲಿ `ಬದ್ರಿನಾಥ್ ಕೀ ದುಲ್ಹನಿಯಾ' ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ತೆಲುಗುವಿನಲ್ಲಿ ನಟಿಸಿದ `ಮಳ್ಳಿ ರಾವಾ' ಚಿತ್ರಕ್ಕೆ ಸೈಮಾ ಪ್ರಶಸ್ತಿ ಪಡೆದರು.2018 ರಲ್ಲಿ ತೆರೆಕಂಡ ತೆಲುಗು ಚಿತ್ರ `ದೇವದಾಸ್'ನಲ್ಲಿ ನಟಿಸಿದ್ದ ಆಕಾಂಕ್ಷಾ ಪ್ರಸ್ತುತ ಕನ್ನಡದ ಪೈಲ್ವಾನ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X