ಆದಿ ಲೊಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಇವರ ತಂದೆ ಪ್ರಸಿದ್ಧ ನಟ ಮೈಸೂರು ಲೋಕೇಶ್ ಮತ್ತು ಸಹೋದರಿ ನಟಿ ಪವಿತ್ರಾ ಲೋಕೇಶ್. ಜೋಗಿ ಚಿತ್ರದಲ್ಲಿನ ಖಳನಾಯಕನಾಗಿ ಅಬ್ಬರಿಸಿದ ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಆದಿ ಲೋಕೇಶ್ ಮುಂದಿನ ವರ್ಷ ತೆರೆಕಂಡ `ಪೂಜಾರಿ ' ಚಿತ್ರದಲ್ಲಿ ನಾಯಕನಟನಾಗಿ ಮಿಂಚಿದರು. ನಂತರ ಸಾಕಷ್ಟು ಚಿತ್ರಗಳಲ್ಲಿ ಖಳನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು.