ಆದಿತ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ಮಾಪಕ. ಇವರು ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬುರವರ ಪುತ್ರ. ಇವರ ಸಹೋದರಿ ರಿಷಿಕಾ ಸಿಂಗ್ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಕ್ರಿಯವಾಗಿದ್ದಾರೆ.
2004 ರಲ್ಲಿ ತೆರೆಕಂಡ `ಲವ್ 'ಚಿತ್ರದಿಂದ ಸಿನಿಪಯಣ ಆರಂಬಿಸಿದ ಆದಿತ್ಯ 2005 ರಲ್ಲಿ ತೆರೆಕಂಡ ಡೆಡ್ಲಿ ಸೋಮ ಚಿತ್ರದಿಂದ ಬ್ರೇಕ್ ಪಡೆದರು. ಇದಕ್ಕೂ ಮೊದಲು ಕನ್ನಡದ ಎ.ಕೆ.47 ಹಿಂದಿ ರಿಮೇಕ್‌ನಲ್ಲಿ ನಾಯಕನಾಗಿ ನಟಿಸಿದ್ದರು. ತಮ್ಮ ತಂದೆ ನಿರ್ದೇಶಿಸುತ್ತಿದ್ದ ಕೆಲವು ಚಿತ್ರಗಳನ್ನು ಆದಿತ್ಯ ನಿರ್ಮಿಸಿದ್ದಾರೆ.
ಇವರು ನಿರ್ಮಿಸಿದ `ಮುಂಗಾರಿನ ಮಿಂಚು' ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಈ ಚಿತ್ರ ನಿರ್ಮಿಸಿದಾಗ ಆದಿತ್ಯಗೆ ಕೇವಲ 23 ವರ್ಷ.