ಐಂದ್ರಿತಾ ರೇ ಜೀವನಚರಿತ್ರೆ

  ಐಂದ್ರಿತಾ ರೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರು ನಟ ದಿಂಗಂತ್ ರವರ ಧರ್ಮಪತ್ನಿ. ರಾಜಾಸ್ಥಾನದ ಉದಯಪುರದಲ್ಲಿ 1985 ರಂದು ಬಂಗಾಳಿ ಕುಟುಂಬದಲ್ಲಿ ಜನಿಸಿದರು.


  ತಂದೆ ಭಾರತೀಯ ವಾಯುಸೇನೆಯಲ್ಲಿ ದಂತವೈದ್ಯರಾಗಿದ್ದರಿಂದ ಆಗಾಗ ವರ್ಗವಾಗಿ ಕೊನೆಗೆ ಬೆಂಗಳೂರಿನಲ್ಲಿ ನೆಲೆಸಿದರು.ತಾಯಿ ಸುನೀತಾ ರೇ ಮಕ್ಕಳ ಮನಶಾಸ್ತ್ರಜ್ಞೆಯಾಗಿದ್ದಾರೆ. ಐಂದ್ರಿತಾ ಬೆಂಗಳೂರಿನ ಅಂಬೇಡಕರ್ ಡೆಂಟಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್ ಕೂಡ ಮಾಡುತ್ತಿದ್ದ ಐಂದ್ರಿತಾ ಕೆಲವು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡರು.


  ಆಗಾಗ ಕೆಲ ಕಿರುಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಐಂದ್ರಿತಾ 2008 ರಲ್ಲಿ ತೆರೆಕಂಡ `ಮೆರವಣಿಗೆ' ಚಿತ್ರದಿಂದ ನಾಯಕಿಯಾಗಿ ಕನ್ನಡ ಸಿನಿರಂಗ ಪ್ರವೇಶಿಸಿದರು. ಇವರಿಗೆ ಬಿಗ ಬ್ರೇಕ್ ನೀಡಿದ ಚಿತ್ರಗಳು 2009 ರಲ್ಲಿ ತೆರೆಕಂಡ `ಜಂಗ್ಲಿ' ಮತ್ತು `ಮನಸಾರೆ'. ಮನಸಾರೆ ಚಿತ್ರದಲ್ಲಿನ ದೇವಕಿ ಪಾತ್ರಕ್ಕೆ ಪ್ರೇಕ್ಷಕ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು.


  ಮನಸಾರೆ ಚಿತ್ರದಿಂದ ಶುರುವಾದ ದಿಂಗಂತ್ - ಐಂದ್ರಿತಾ ಸಾಂಗತ್ಯ 2018,ಡಿಸೆಂಬರ್ 12 ರಂದು ವಿವಾಹ ಬಂಧನದ ಮೂಲಕ ಮತ್ತಷ್ಟು ದೃಢವಾಯಿತು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X