ಕಿಲಾಡಿ ಎಂದೇ ಖ್ಯಾತಿಯಾಗಿರುವ ಅಕ್ಷಯ್ ಕುಮಾರ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ. ಪಂಜಾಬಿನ ಅಮೃತಸರದಲ್ಲಿ ಜನಿಸಿದ ಇವರು ಸುಮಾರು ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ. ನಟನೆ ಮಾತ್ರವಲ್ಲದೇ ತಮ್ಮ ಡೇರ್ ಡೆವಿಲ್ ಸ್ಟಂಟ್ ಗಳಿಗೂ ಪ್ರಸಿದ್ಧರಾಗಿದ್ದಾರೆ. ಸೈನಿಕರ ಒಳಿತಿಗಾಗಿ ಮತ್ತು ಹಲವು ಸಮಾಜಿಕ ವಿಷಯಗಳ ಚಿತ್ರದಲ್ಲಿ ನಟಿಸುವುದಲ್ಲದೇ ಆರ್ಥಿಕವಾಗಿಯೂ ಸಹಾಯ ಮಾಡುತ್ತಿದ್ದಾರೆ.
ರಾಜೇಶ್ ಖನ್ನಾರ ಪುತ್ರಿ ಟ್ವಿಂಕಲ್ ಖನ್ನಾರನ್ನು ವಿವಾಹವಾಗಿರುವ ಇವರಿಗೆ ಒಬ್ಬ ಪುತ್ರ ಮತ್ತು ಓರ್ವ ಪುತ್ರಿಯಿದ್ದಾಳೆ. ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ `ವಿಷ್ನು ವಿಜಯ್' ಚಿತ್ರದಲ್ಲಿ ನಟಿಸಿದ್ದಾರೆ. 2019 ರ ಪೋರ್ಬ್ಸ್ ಮ್ಯಾಗಜೀನ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದರು.