Celebs » Akul Balaji » Biography
ಜೀವನಚರಿತ್ರೆ
ಅಕುಲ್ ಬಾಲಾಜಿ ಅವರು ಜನಿಸಿದ್ದು ೨೩ ಫೆಬ್ರವರಿ ೧೯೭೯ ಆಂದ್ರ ಪ್ರದೇಶದಲ್ಲಿ. ಇವರ ಬಾಲ್ಯ ವಿದ್ಯಬ್ಯಾಸವೆಲ್ಲ ಮುಗಿಸಿದ್ದು ಆಂದ್ರದಲ್ಲಿ. ೧೬ನೆ ವಯಸಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬೆಂಗಳೂರಿಗೆ ಬರುತ್ತಾರೆ.
 
ಇವರು ಭರತ ನಾಟ್ಯವನ್ನು ಉಷಾ ದತ್ತರ್ ಅವರ ಬಳಿ ಕಲಿತು ನಂತರ ನೃತ್ಯ ಶಾಲೆಯಲ್ಲಿ ಅಬ್ಯಾಸದಲ್ಲಿ ತೊಡಗಿಕೊಂಡವರು.
ಇವರು ನಿರೂಪಕರಾಗಿ ತಮ್ಮ ಜೀವನವನ್ನು ರೂಪಿಸಿಕೊಂಡವರು. ಇವರು ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಎಲ್ಲರ ಮನಸನ್ನು ಗೆದ್ದವರು ಅಕುಲ್ ಬಾಲಾಜಿ.

೨೦೦೮ ರಲ್ಲಿ ಇವರಿಗೆ ಜ್ಯೋತಿ ಅವರ ಜೊತೆಯಲ್ಲಿ ವಿವಾಹವಾಗುತ್ತದೆ. ದಂಪತಿಗಳಿಗೆ ಒಬ್ಬ ಮಗನಿದ್ದಾನೆ.(ಕೃಷ್ಣ ನಾಗ್)

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಳ್ಳಿ ಹುಡುಗಿರ ಪ್ಯಾಟೆ ಲೈಫು, ಕಾರ್ಯಕ್ರಮದ ನಿರೂಪಕನಾಗಿ ಕಾರ್ಯ ನಿರ್ವಹಿಸಿ ಜನರ ಮನಸನ್ನು ಇನ್ನು ಹತ್ತಿರ ಮಾಡಿಕೊಂಡವರು ಅಕುಲ್ ಬಾಲಾಜಿ. ಇದಾದ ನಂತರ ಹಳ್ಳಿ ಹೈದ ಪ್ಯಾಟೆಗೆ ಬಂದ, ಪ್ಯಾಟ್ ಮಂದಿ ಕಾಡಿಗೆ ಬಂದ್ರು, ಹಲವಾರು ಕಾರ್ಯಕ್ರಮಗಳಲ್ಲಿ ಅಕುಲ್ ಅವರು ನಿರೂಪಕನಾಗಿ ಗುರ್ತಿಸಿಕೊಂಡರು.

ಇದಲ್ಲದೆ ಅನೇಕ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಮನರಂಜನ ಕಾರ್ಯಕ್ರಮಗಳಲ್ಲಿ ಅಕುಲ್ ಅವರ ನಿರೂಪಣೆ ಎಲ್ಲರ ಮನಸನ್ನು ಸೆಳೆಯುತ್ತಿತ್ತು. ೨೦೧೪ರ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋನ ಮೂಲಕ ಮೊದಲನೇ ಬಹುಮಾನವನ್ನು ಸಹ ತಮ್ಮದಾಗಿಸಿಕೊಳ್ಳುತ್ತಾರೆ ಅಕುಲ್ ಬಾಲಾಜಿ.

ಆತ್ಮಿಯ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಬನ್ನಿ, ಗಗನ ಚುಕ್ಕಿ, ಇನ್ನು ಅನೇಕ ಚಿತ್ರಗಳಲ್ಲಿ ನಾಯಕನಾಗಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ

ಅಕುಲ್ ಬಾಲಾಜಿ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada