twitter
    Celebs»Amitabh Bachchan»Biography

    ಅಮಿತಾಭ್ ಬಚ್ಚನ್ ಜೀವನಚರಿತ್ರೆ

    ಅಮಿತಾಭ್ ಬಚ್ಚನ್ ಹಿಂದಿ ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ, ಕಿರುತೆರೆ ನಿರೂಪಕ ಮತ್ತು ಮಾಜಿ ರಾಜಕಾರಣಿ. ಉತ್ತರ ಪ್ರದೇಶದ ಅಲಹಾಬಾದಿನಲ್ಲಿ ಜನಿಸಿದ ಇವರ ಬಾಲ್ಯದ ಹೆಸರು ಇನ್ಕಿಲಾಬ್ ಶ್ರೀವಾತ್ಸವ್. 70 ರ ದಶಕದಲ್ಲಿ ಜಂಜೀರ್, ದೀವಾರ್, ಶೋಲೆ ಮುಂತಾದ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಮೂಲಕ ಭಾರತದ ಮೊದಲ ಆ್ಯಂಗ್ರಿ ಯಂಗ್ ಮ್ಯಾನ್ ಹೀರೋ ಆಗಿ ಗುರುತಿಸಿಕೊಂಡರು.

    ಕನ್ನಡದಲ್ಲಿ ಅಭಿನಯಿಸಿದ ಬಾಲಿವುಡ್ ನಟರು

    ಖ್ಯಾತ ನಟಿ ಜಯಾ ಭಾಧುರಿಯನ್ನು ವಿವಾಹವಾದ ಇವರಿಗೆ ಅಭಿಷೇಕ್ ಮತ್ತು ಶ್ವೇತಾ ಎಂಬ ಇಬ್ಬರು ಮಕ್ಕಳಿದ್ದಾರೆ. ಅಭಿಷೇಕ್ ಬಚ್ಚನ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ರವರ ಅಮೃತಧಾರೆ ಚಿತ್ರದಲ್ಲಿ ನಟಿಸಿದ್ದಾರೆ.

    ಸುಮಾರು 15 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಅಮಿತಾಭ್ ಹಿಂದಿಯಲ್ಲಿ ಕೌನ್ ಬನೇಗಾ ಕರೋಡಪತಿ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದ್ದಾರೆ. ಭಾರತ ಸರ್ಕಾರ ನೀಡುವ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಫ್ರಾನ್ಸ್ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X