ಕನ್ನಡದಲ್ಲಿ ಅಭಿನಯಿಸಿದ ಪ್ರಸಿದ್ಧ ಬಾಲಿವುಡ್ ನಟರು

  ಕೆಲವು ಬಾಲಿವುಡ್ ನಟರು ದಕ್ಷಿಣ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದರೆ, ಕೆಲವರು ಕೇವಲ ಒಂದೆರೆಡು ಚಿತ್ರಗಳಲ್ಲಿ ಗೌರವ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ಪ್ರಖ್ಯಾತ ನಟ ಪೃಥ್ವಿರಾಜ್ ಕಪೂರ್ ರವರು ಡಾ.ರಾಜಕುಮಾರ್ ಮೇಲಿನ ಪ್ರೀತಿಯಿಂದ 1971 ರಲ್ಲಿ ಸಾಕ್ಷಾತ್ಕಾರ ಚಿತ್ರದಲ್ಲಿ ನಟಿಸಿದರು. ನಂತರ ಅನಿಲ್ ಕಪೂರ್ ಕೂಡ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಟಿಸಿದರು. ಕೆಲ ವರ್ಷಗಳ ಹಿಂದೆ ಅಮಿತಾಭ್ ಬಚ್ಚನ್ ಕೂಡ ನಾಗತಿಹಳ್ಳಿ ಚಂದ್ರಶೇಖರ್ ರವರ `ಅಮೃತಧಾರೆ' ಚಿತ್ರದಲ್ಲಿ ಗೌರವ ಪಾತ್ರದಲ್ಲಿ ನಟಿಸಿದರು. ಹೀಗೆ ಕನ್ನಡದಲ್ಲಿ ನಟಿಸಿದ ಪ್ರಸಿದ್ಧ ಬಾಲಿವುಡ್ ನಟರನ್ನು ಕೆಳಗೆ ನೀಡಲಾಗಿದೆ ನೋಡಿ...

  1. ಪೃಥ್ವಿರಾಜ್ ಕಪೂರ್ (ಸಾಕ್ಷಾತ್ಕಾರ)

  ಸುಪರಿಚಿತರು

  Actor

  ಜನಪ್ರಿಯ ಚಲನಚಿತ್ರಗಳು

  , ,

  ಡಾ.ರಾಜಕುಮಾರ್ ಮೇಲೆ ಅಪಾರ ಪ್ರೀತಿ ಹೊಂದಿದ್ದ ಇವರು ರಾಜ್ ರನ್ನು ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಕೇಳಿಕೊಂಡಿದ್ದರು. ಆದರೆ ರಾಜ್ ವಿನಯವಾಗಿ ನಿರಾಕರಿಸಿದಾಗ, ತಾವೇ `ಸಾಕ್ಷಾತ್ಕಾರ' ಚಿತ್ರದಲ್ಲಿ ರಾಜ್ ತಂದೆ ಪಾತ್ರದಲ್ಲಿ ನಟಿಸಿದರು. ಇದು ಪೃಥ್ವಿರಾಜ್ ರವರು ನಟಿಸಿದ ಏಕೈಕ ದಕ್ಷಿಣ ಬಾರತೀಯ ಚಿತ್ರ. ಈ ಚಿತ್ರದಲ್ಲಿ ರಾಜ್ ತಂದೆ ಪಾತ್ರದಲ್ಲಿ ನಟಿಸಿದರು.

  2. ಅನಿಲ್ ಕಪೂರ್ (ಪಲ್ಲವಿ ಅನುಪಲ್ಲವಿ)

  ಸುಪರಿಚಿತರು

  Actor

  ಜನಪ್ರಿಯ ಚಲನಚಿತ್ರಗಳು

  , ,

  ತಮ್ಮ ಸಿನಿಜೀವನದ ಆರಂಭದಲ್ಲಿ ಸುಮಾರು 5 ಹಿಂದಿ ಚಿತ್ರಗಳಲ್ಲಿ ಮತ್ತು 1 ತೆಲುಗು ಚಿತ್ರದಲ್ಲಿ ನಟಿಸಿದ್ದ ಇವರು ಕನ್ನಡದಲ್ಲಿ ಮಣಿರತ್ನಂರವರ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಗುವ ನಯನ ಮಧುರ ಮೌನ ಗೀತೆ ಇಂದಿಗೂ ಪ್ರಸಿದ್ಧವಾಗಿದೆ.

  3. ಅಮಿತಾಬ್ ಬಚನ್ (ಅಮೃತಧಾರೆ)

  ಸುಪರಿಚಿತರು

  Actor

  ಜನಪ್ರಿಯ ಚಲನಚಿತ್ರಗಳು

  ಸೈರಾ ನರಸಿಂಹ ರೆಡ್ಡಿ, ಅಮೃತಧಾರೆ,

  ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ನಾಗತಿಹಳ್ಳಿ ಚಂದ್ರಶೇಖರ್ ರವರ ಅಮೃತಧಾರೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X