ಅನಿರುದ್ಧ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನಿತ್ವ ನಟ,ನಿರ್ದೇಶಕ, ನಿರ್ಮಾಪಕ ಮತ್ತು ರಂಗಕರ್ಮಿ. ಇವರು ಸಾಹಸಸಿಂಹ ವಿಷ್ಣುವರ್ಧನರವರ ಪುತ್ರಿ ಕೀರ್ತೀಯವರನ್ನು ವಿವಾಹವಾಗಿದ್ದಾರೆ. ಕೆಲ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
ಮುಂಬೈನ ರಹೇಜಾ ಸ್ಕೂಲ್ ಆಫ್ ಆರ್ಕಿಟಿಕ್ಚೆರ್ ನಲ್ಲಿ ಪದವಿ ಪಡೆದಿರುವ ಅನಿರುದ್ಧ 2001 ರಲ್ಲಿ ತೆರೆಕಂಡ `ಚಿಟ್ಟೆ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ `ತುಂಟಾಟ', `ನೀನೇಲ್ಲೋ ನಾನಲ್ಲೆ' ಮುಂತಾದ ಚಿತ್ರಗಳಲ್ಲಿ ನಟಿಸಿದರು.
ಸಮಾಜಿಕ ಪಿಡುಗುಗಳ ಮೇಲೆ ಇವರು ತಯಾರಿಸಿದ ಸಾಕ್ಷ್ಯಚಿತ್ರಗಳು ಏಷ್ಯಾ ಬುಕ್ ಆಫ್ ರೆಕಾರ್ಡ್ಸ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿವೆ. ಭಾರತಿ ವಿಷ್ಣುವರ್ಧನ್‌ರವ ಜೀವನದ ಮೇಲೆ ಕೂಡ ಸಾಕ್ಷ್ಯಚಿತ್ರ ತಯಾರಿಸುತ್ತಿದ್ದಾರೆ.
ಅಮರ ಚಿತ್ರ ಕಥಾರವರ ಸಹಯೋಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ರ ಮೇಲೆ ಕಾಮಿಕ್ ಸೀರಿಸ್ ಲಾಂಚ್ ಮಾಡಿದರು.ದಕ್ಷಿಣ ಭಾರತದಲ್ಲಿ ನಟನೊಬ್ಬನ ಕಾಮಿಕ್ ಸೀರಿಸ್ ಬಿಡುಗಡೆಯಾಗದ್ದು ಇದೇ ಪ್ರಥಮ. ಈ ಸೀರಿಸ್‌ನಲ್ಲಿ ಭಾರತಿಯವರು ಮತ್ತು ಅನಿರುಧ್ದರವರ ಇಬ್ಬರು ಮಕ್ಕಳು ಪಾತ್ರಗಳಾಗಿದ್ದಾರೆ. ಈ ಪುಸ್ತಕ ಮಾಲಿಕೆ ಪ್ರಸ್ತುತ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿದೆ.
ರಾಷ್ಟ್ರ ಪ್ರಶಸ್ತಿ: ಅನಿರುದ್ಧ ನಿರ್ದೇಶನದ ಭಾರತಿ ವಿಷ್ಣುವರ್ಧನ್‌ರ ಸಾಕ್ಷ್ಯಚಿತ್ರ 'ಬಾಳೆ ಬಂಗಾರ' ಸಿನಿಮಾಗೆ 69ನೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಐದು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಭಾರತಿ ವಿಷ್ಣುವರ್ಧನ್‌ರ ಸಿನಿ ಬದುಕನ್ನು ಸಾಕ್ಷ್ಯಚಿತ್ರದ ಮೂಲಕ ತೆರೆದಿಡಲಾಗಿದೆ. ಈ ಸಾಕ್ಷ್ಯಚಿತ್ರ 2 ಗಂಟೆ 31 ನಿಮಿಷಗಳಿದೆ.