X
ಅಭಿಜಿತ್

ಅಭಿಜಿತ್

Actor
ಜೀವನ ಚರಿತ್ರೆ :  ಅಭಿಜಿತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ, ಗಾಯಕ, ನಿರ್ಮಾಪಕ ಮತ್ತು ನಿರ್ದೇಶಕ. 80 ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಇವರು ನಾಯಕನಾಗಿ, ಖಳನಾಯಕನಾಗಿ ಮತ್ತು ಪೋಷಕ ನಟನಾಗಿ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1963 ಜುಲೈ 30 ರಂದು ಚಿತ್ರದುರ್ಗದ ಚಳ್ಳಿಕೆರೆಯಲ್ಲಿ ಜನಿಸಿದರು. ತಂದೆ ಮಾಧವರಾವ್ ಮತ್ತು ತಾಯಿ ನಂಜಮ್ಮ. ಬಾಲ್ಯದ ಹೆಸರು ರಾಮಸ್ವಾಮಿ. ಶಾಲಾದಿನಗಳಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.ಬೆಳೆದ ಮೇಲೆ ಊರು ತೊರೆದು ಬೆಂಗಳೂರಿಗೆ ಉದ್ಯೋಗ ಅರಸಿ ಬಂದರು. ಹಲವು ನಿರ್ದೇಶಕರ ಬಳಿ ಅವಕಾಶಕ್ಕಾಗಿ ಸುತ್ತಾಡಿದ ಮೇಲೆ `ಸಂಸಾರದ ಗುಟ್ಟು',` ಶಾಂತಿ ನಿವಾಸ',` ಜನ ನಾಯಕ' ಮುಂತಾದ ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿದರು. 1990 ರಲ್ಲಿ ತೆರೆಕಂಡ ಕಾಲೇಜ್ ಹೀರೋ ಮತ್ತು ತದನಂತರ ತೆರೆಕಂಡ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಿದರು. 1993 ರಲ್ಲಿ ತೆರೆಕಂಡ `ರಂಜಿತಾ' ಚಿತ್ರದಿಂದ ನಾಯಕನಾಗಿ ನಟಿಸಲಾರಂಭಿಸಿದರು. ನಾಯಕನಾಗಿ ಯಶಸ್ವಿ ಆದ ಮೇಲೆ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಯಜಮಾನ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಸಹೋದರನಾಗಿ ನಟಿಸಿದ ಪಾತ್ರ ತುಂಬಾ ಮೆಚ್ಚುಗೆ ಪಡೆದರು. 2005 ರಲ್ಲಿ ಸಮರ ಸಿಂಹ ನಾಯಕ ಎಂಬ ಚಿತ್ರವನ್ನು ನಿರ್ಮಾಣ ಮಾಡಿದರು. ಆದರೆ ಚಿತ್ರ ಯಶಸ್ವಿಯಾಗಲಿಲ್ಲ. ನಂತರ 2009 ರಲ್ಲಿ ರಾಮಕುಮಾರ್ ನಾಯಕನಾಗಿ ನಟಿಸಿದ `ಜೋಡಿ ನಂ 1' ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿ ನಿರ್ಮಾಣ ಮಾಡಿದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಅಕ್ಷರಮಾಲೆ ಎಂಬ ಗಾಯನ ಸ್ಫರ್ಧೆಯ ನಿರೂಪಕರಾಗಿ ಹನ್ನೆರೆಡು ವರ್ಷಗಳ ಕಾಲ ಕಾರ್ಯಕ್ರಮ ನೆಡೆಸಿ ಕೊಟ್ಟರು. ಇವರ ಸಹ ನಿರೂಪಕರಾಗಿ ಸಂಗೀತಾ ರವಿಶಂಕರ್ ನಿರೂಪಿಸುತ್ತಿದ್ದರು.
ಮುಂದೆ ಓದಿ

ಅಭಿಜಿತ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಭಿಜಿತ್

ಹೆಸರು ಅಭಿಜಿತ್
ಹುಟ್ಟಿದ ದಿನ 30 Jul 1963
ವಯಸ್ಸು 63
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಭಿಜಿತ್ ಆಸ್ತಿ

ಆಸ್ತಿ

ಅಭಿಜಿತ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+