ಅಂಕಿತಾ ಅಮರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಮತ್ತು ಗಾಯಕಿ. ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ಇವರು ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಜನಮನ ಸೆಳೆದರು.
1997 ಆಗಸ್ಟ್ 9 ರಂದು ಮೈಸೂರಿನಲ್ಲಿ ಜನಿಸಿದರು. ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿಯಲ್ಲಿ ಎಂ,ಎಸ್.ಸಿ ಮಾಡಿದ್ದಾರೆ. ಕೆಲವು ಗೀತೆಗಳಿಗೆ ಧ್ವನಿಯಾಗಿರುವ ಅಂಕಿತಾ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಅಧ್ಯಯನ ಮಾಡಿದ್ದಾರೆ.