ಅನೂಪ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ಇವರು ಕರ್ನಾಟಕದ ಖ್ಯಾತ ರಾಜಕಾರಣಿ H.M.ರೇವಣ್ಣ ಮತ್ತು ನಿರ್ಮಾಪಕಿ ವತ್ಸಲಾ ರೇವಣ್ಣ ಅವರ ಪುತ್ರ. ಬೆಂಗಳೂರಿನ ದಯಾನಂದ ಸಾಗರ ಇಂಜಿನೀಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಇವರು ಚೆನ್ನೈನಲ್ಲಿ ನಟನೆಯ ತರಬೇತಿಯನ್ನು ಮತ್ತು ಚೀನಾದಲ್ಲಿ ಕುಂಗ-ಪು ತರಬೇತಿಯನ್ನು ಪಡೆದಿದ್ದಾರೆ.
ಆರ್.ಚಂದ್ರು ನಿರ್ದೇಶನದ `ಲಕ್ಮಣ' ಚಿತ್ರದಿಂದ ಸಿನಿ ಪಯಣ ಆರಂಭಿಸಿದ ಇವರು ನಂತರ ಎಸ್.ನಾರಾಯಣ ನಿರ್ದೇಶನದ `ನಾ ಪಂಟ ಕಣೋ' ಚಿತ್ರದಲ್ಲಿ ನಟಿಸಿದ್ದಾರೆ.