twitter
    Celebs»Arundathi Nag»Biography

    ಅರುಂಧತಿ ನಾಗ್ ಜೀವನಚರಿತ್ರೆ

    ಅರುಂಧತಿ ನಾಗ್ ಭಾರತೀಯ ಚಿತ್ರರಂಗದ ಬಹುಭಾಷಾ ನಟಿ ಮತ್ತು ರಂಗಭೂಮಿ ಕಲಾವಿದೆ. ಕನ್ನಡ ಚಿತ್ರರಂಗದ ದಂತಕಥೆ ಶಂಕರನಾಗ್ ಇವರ ಪತಿ.ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ 7 ಭಾಷೆಗಳಲ್ಲಿ ನಟಿಸಿದ್ದಾರೆ.

    ಬಾಲ್ಯ ಮತ್ತು ರಂಗಭೂಮಿ

    ಇವರು ಜನಿಸಿದ್ದು ದೆಹಲಿಯಲ್ಲಿ ಆದರೆ ಬೆಳೆದಿದ್ದು ಮುಂಬೈಯಲ್ಲಿ. 10 ವಯಸ್ಸಿನವರಿದ್ದಾಗಲೇ ರಂಗಭೂಮಿಯಲ್ಲಿ ನಟಿಸಿತೊಡಗಿದ ಇವರು ಕಾಲೇಜಿನ ದಿನಗಳಲ್ಲಿಯೇ ಮರಾಠಿ, ಗುಜರಾತಿ ಮತ್ತು ಹಿಂದಿ ನಾಟಕಗಳಲ್ಲಿ ಅಭಿನಯಿಸತೊಡಗಿದರು. ಸುಮಾರು 1970ರ ಸಮಯದಲ್ಲಿ ಅರುಂಧತಿ ತಿಂಗಳಿಗೆ ಅಂದಾಜು 40 ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಶಂಕರನಾಗ್ ರ ಪರಿಚಯ ಇವರಿಗೆ ಆದ್ದದ್ದು ರಂಗಭೂಮಿಯ ಮೂಲಕವೇ. ಆಗ ಅರುಂಧತಿಗೆ ಕೇವಲ 17 ವರ್ಷ. ಮುಂದೆ ಆರು ವರ್ಷಗಳ ನಂತರ ಇವರಿಬ್ಬರು ವಿವಾಹವಾಗುತ್ತಾರೆ. ಶಂಕರರೊಡನೆ ಬೆಂಗಳೂರಿಗೆ ಬಂದ ನಂತರವೂ ತಮ್ಮ ರಂಗಭೂಮಿಯ ನಂಟನ್ನು ಮುಂದುವರೆಸುತ್ತಾರೆ.ಇವರ ಮಗಳು ಕಾವ್ಯ ವನ್ಯಜೀವಿ ಜೀವಶಾಸ್ತ್ರದಲ್ಲಿ ಸ್ನಾತಕೋತರ ಪದವಿ ಪಡೆದು ತಮ್ಮದೇ ಆದ ಒಂದು ಚಿಕ್ಕ ಉದ್ಯಮ ನೆಡೆಸುತ್ತಿದ್ದಾರೆ.

    ಸಿನಿಪಯಣ

    ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಇವರು 1979 ರಲ್ಲಿ ಮರಾಠಿ ಚಿತ್ರದಲ್ಲಿ ಅಭಿನಯಿಸುತ್ತಾರೆ. ಮದುವೆ ನಂತರ ಬೆಂಗಳೂರಿಗೆ ಬಂದ ಇವರು 1983 ರಲ್ಲಿ ತಮ್ಮ ಪತಿ ಶಂಕರನಾಗ್ ನಿರ್ದೇಶನದ `ನೋಡಿ ಸ್ವಾಮಿ ನಾವಿರೋದೆ ಹೀಗೆ' ಚಿತ್ರದ ಮೂಲಕ ಕನ್ನಡದಲ್ಲಿ ನಟನೆ ಪ್ರಾರಂಭಿಸಿದರು.`ಪರಮೇಶಿ ಪ್ರೇಮ ಪ್ರಸಂಗ',`ಆಕ್ಸಿಡೆಂಟ್' ಚಿತ್ರಗಳಲ್ಲಿ ನಟಿಸಿದ ಅರುಂಧತಿ ಶಂಕರ ಸಾವಿನ ನಂತರ ಸ್ಪಲ್ಪ ವಿರಾಮ ತೆಗೆದುಕೊಳ್ಳುತ್ತಾರೆ. ನಂತರ ಕೇವಲ ಕೆಲವು ಆಯ್ದ ಪಾತ್ರಗಳಲ್ಲಿ ಮಾತ್ರ ನಟಿಸತೊಡಗಿದ ಇವರು ತಮಿಳುನಲ್ಲಿ `ಮಿನಸಾರ ಕನವು', ಹಿಂದಿಯಲ್ಲಿ `ದಿಲ್ ಸೇ', ಕನ್ನಡದಲ್ಲಿ `ಗೋಲಿಬಾರ್',`ಜೋಗಿ',`ಶಿವ ಸೈನ್ಯ' ಮತ್ತು ಹಾಲಿವುಡ್‌ನಲ್ಲಿ `The Man Who knew Infinity' ಚಿತ್ರದಲ್ಲಿ ಅಭಿನಯಿಸಿದರು. ಹಿಂದಿಯಲ್ಲಿ `ಪಾ' ಚಿತ್ರದ ನಟನೆಗಾಗಿ ಇವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು.

    ಶಂಕರ ಕನಸು- ರಂಗಶಂಕರ

    ಶಂಕರನಾಗ್ ರ ಹಲವು ಕನಸುಗಳಲ್ಲಿ ಬೆಂಗಳೂರಿನಲ್ಲಿ ಒಂದು ಅದ್ಭುತವಾದ ರಂಗಮಂದಿರ ಕಟ್ಟಿಸಿ, ಜನರು ಕಡಿಮೆ ವೆಚ್ಚದಲ್ಲಿ ಒಳ್ಳೆಯ ನಾಟಕಗಳನ್ನು ನೋಡಬೇಕು ಎನ್ನುವುದು ಒಂದಾಗಿತ್ತು. ಆದರೆ ದುರ್ದೈವದಿಂದ ಈ ಕನಸು ಸಾಕಾರವಾಗುವ ಮುನ್ನವೇ ಬಾರದ ಲೋಕಕ್ಕೆ ತೆರಳಿದ ಶಂಕರನ ಕನಸಿಗೆ ನೀರೆರೆಯಬೇಕೇಂದು ಅರುಂಧತಿ ಹೊರಟಾಗ ಸಾಕಷ್ಟು ಜನ ಇದು ಹುಚ್ಚು ಸಾಹಸವೆಂದು ಲೇವಡಿ ಮಾಡಿದ್ದುಂಟು. ಆದರೆ ಧೃತಿಗೆಡದ ಅರುಂಧತಿ ಆಗಿನ ಮುಖ್ಯಮಂತ್ರಿ `ಎಸ್.ಎಮ್.ಕೃಷ್ಣ' ಅವರನ್ನು ಭೇಟಿ ಮಾಡಿ ರಂಗಶಂಕರದ ಆಶಯದ ಬಗ್ಗೆ ವಿವರಿಸಿದಾಗ ಅವರು ಕೂಡಲೇ ಹತ್ತು ಲಕ್ಷ ಮೊತ್ತದ ಚೆಕ್ಕನ್ನು ಕೊಟ್ಟು ಮುಂದುವರೆಯಲು ಹೇಳುತ್ತಾರೆ. ಆದರೆ ಒಂದು ವರ್ಷದ ಪರಿಶ್ರಮದ ನಂತರ ಈ ಚಿಕ್ಕ ಮೊತ್ತದಿಂದ ರಂಗಮಂದಿರದ ನಿರ್ಮಾಣ ಅಸಾಧ್ಯವೆಂದಿರಿತ ಇವರು ಚೆಕ್ಕನ್ನು ಒಂದು ವರ್ಷದ ಬಡ್ಡಿಯ ಸಮೇತ ಹಿಂತುರುಗಿಸಲು ಹೋದಾಗ ಇವರ ಸತ್ಯತೆ ಮತ್ತು ಧೃಡತೆಯನ್ನು ಮೆಚ್ಚಿದ ಕೃ‍ಷ್ಣರವರು ಮತ್ತೆ ಇಪ್ಪತ್ತು ಲಕ್ಷ ಅನುದಾನವನ್ನು ಮಂಜೂರು ಮಾಡಿ ತಮ್ಮ ಉದ್ಯಮಿ ಸ್ನೇಹಿತ ಓ.ಪಿ.ಜಿಂದಾಲ್ ರವರಿಗೆ ಈ ರಂಗಮಂದಿರದ ನಿರ್ಮಾಣಕ್ಕೆ ನೆರವಾಗಲು ಕೋರುತ್ತಾರೆ.ಹೀಗೆ 2004 ರಲ್ಲಿ ಉದ್ಘಾಟನೆಗೊಂಡ ರಂಗಶಂಕರ ಪ್ರಸ್ತುತ ವರ್ಷಕ್ಕೆ ಸರಿಸುಮಾರು 300 ನಾಟಕಗಳನ್ನು ಪ್ರದರ್ಶಿಸಿಸುತ್ತದೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X