ಆರ್ಯವರ್ಧನ್ ಕನ್ನಡದ ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞ. ಇವರ ಮೂಲ ಹೆಸರು ವರದರಾಜ್. ಹಲವು ವಿವಾದಗಳನ್ನು ಹೊಂದಿರುವ ಇವರು ಸದಾ ಮನರಂಜನಾ ವಾಹಿನಿಗಳಲ್ಲಿ ತಮ್ಮ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
ಇವರ ಮೇಲೆ ಆಂಧ್ರ ಮೂಲದ ಮಹಿಳೆಯೊಬ್ಬರು ಅತ್ಯಾಚಾರದ ಕೇಸ್ ನ್ನು ದಾಖಲು ಮಾಡಿದ್ದರು. ಹಾಗೇ ಕೆಲ ಸಲ ಐಪಿಎಲ್ ಮುನ್ಸೂಚನೆ ನೀಡಿ ಪೇಚೆಗೆ ಸಿಕ್ಕಿಕೊಂಡಿದ್ದುಂಟು. ಇವರು ಕನ್ನಡ ಬಿಗ್ ಬಾಸ್ ನ ಒಟಿಟಿ ಸೀಸನ್ 1 ರಲ್ಲಿ ಭಾಗವಹಿಸಿದ್ದಾರೆ.