X
ಹೋಮ್ » ಸೆಲಬ್ರಿಟಿಗಳು » ಆಶಾ ಭಟ್ » ಜೀವನ ಚರಿತ್ರೆ
ಆಶಾ ಭಟ್
Actress

ಆಶಾ ಭಟ್ ಜೀವನ ಚರಿತ್ರೆ

ಆಶಾ ಭಟ್ ಮಿಸ್ ಸೂಪರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ನಟಿ. ಹಿಂದಿಯಲ್ಲಿ ಜಂಗ್ಲಿ ಚಿತ್ರದಲ್ಲಿ ನಟಿಸಿದ್ದ ಇವರು ಕನ್ನಡದಲ್ಲಿ ದರ್ಶನ್ ರ ರಾಬರ್ಟ್ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಸ್ಟ್ರ ಫೌಂಡೇಶನ್ ನ್ನು ಸ್ಥಾಪಿಸಿ ಪ್ರಸ್ತುತ ಅದರ ನಿರ್ದೇಶಕಿಯಾಗಿದ್ದಾರೆ.

ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು.ಮೂಡಬಿದರೆಯ ಆಳ್ವಾಸ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ. ಓದುತ್ತಿರುವಾಗಲೆ ಫ್ಯಾಶನ್ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಆಶಾ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟ ಗೆದ್ದ ನಂತರ ಜಾಹಿರಾತು ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದರು. ಓದಿನ ಕಡೆ ಹೆಚ್ಚು ಗಮನ ಹರಿಸಿದ್ದ ಆಶಾ, ಓದು ಮುಗಿಯುತ್ತಿದ್ದಂತೆ ಸಿನಿ ಪಯಣವನ್ನು ಪ್ರಾರಂಭಿಸಿದ್ದಾರೆ.

ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗಿಯಾಗಿ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2014ರಲ್ಲಿ ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ವಿಶೇಷ ಅಂದ್ರೆ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಮುಡಿಗೇರಿಸಿಕೊಂಡ ಮೊದಲ ಭಾರತಿಯ ನಾರಿ ಎನ್ನುವ ಹೆಗ್ಗಳಿಕೆ ಕೂಡ ಆಶಾ ಅವರದ್ದಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+