ಮರಿಯಾ ಆಶಿತಾ ಕ್ರಸ್ತ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್.1984, ಅಕ್ಟೋಬರ್ 3 ರಂದು ಜೆನ್ನಿಫರ್ ಮತ್ತು ಲೋವಿಸ್ ದಂಪತಿಗಳಿಗೆ ಮುಂಬೈನಲ್ಲಿ ಜನಿಸಿದ ಇವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಹದಿನೈದು ವರ್ಷದಿಂದಲೇ ಡ್ಯಾನ್ಸ್ ಮತ್ತು ಮಾಡೆಲಿಂಗ್ ಶೋಗಳಲ್ಲಿ ಭಾಗವಹಿಸತೊಡಗಿದ ಇವರು ತಮ್ಮ ಪ್ರತಿಭೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಮೌಂಟ್ ಕಾರ್ಮೆಲ್ ಕಾಲೇಜಿನಿಂದ MBA ಪದವಿ ಪಡೆದಿರುವ ಇವರು ತಮ್ಮ ಮೊದಲ ಬ್ಯೂಟಿ ಕಂಟೆಸ್ಟ್ ಗೆದಿದ್ದು ಹದಿನಾರು ವರ್ಷದವರಿದ್ದಾಗಲೇ.ಈ ಕಾರ್ಯಕ್ರಮದ ನಂತರ ಹಲವು ಬ್ರಾಂಡಗಳ ಮಾಡೆಲ್ ಆಗಿ ಕಾಣಿಸಿಕೊಂಡರು.
ಮಿಸ್ ಬ್ಲಾಸಮ್ -1998, ಮಿಸ್ ಎಕ್ಷೋಟಿಕಾ- 1999 , ಮಿಸ್ ಮಿಲೇನಿಯಂ - 2000 ಸ್ಫರ್ಧೆಗಳ ಗೆಲವು ಇವರನ್ನು ಕನ್ನಡ ಚಿತ್ರರಂಗದ ಮುನ್ನಲೆಗೆ ತಂದಿತು. `ಬಾ ಬಾ ಬಾರೋ ರಸಿಕ',ತವರಿನ ಸಿರಿ,ಆಕಾಶ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.