ಬಿ.ಸಿ.ಪಾಟೀಲ್ ಎಂದೇ ಖ್ಯಾತರಾಗಿರುವ ಬಸನಗೌಡ ಚೆನ್ನಬಸವನಗೌಡ ಪಾಟೀಲರು ಕನ್ನಡ ಚಲನಚಿತ್ರರಂಗದ ಪ್ರಮುಖ ನಟ,ನಿರ್ಮಾಪಕ ಮತ್ತು ನಿರ್ದೇಶಕ. ರಾಜಕೀಯವಾಗಿಯೂ ಸಕ್ರಿಯರಾಗಿರುವ ಪಾಟೀಲರು ಹಾಸನ ಜಿಲ್ಲೆಯ ಹಿರೇಕೇರೂರು ಮತಕ್ಷೇತ್ರದ ಶಾಸಕರು ಆಗಿದ್ದಾರೆ.
ಕಲಾ ವಿಭಾಗದಲ್ಲಿ ಪದವಿ ಪಡೆದ ಇವರು ಪೋಲಿಸ್ ಇಲಾಖೆಗೆ ಭರ್ತಿಯಾಗಿ ಸಬ್-ಇನಸ್ಪೆಕ್ಟರ್ ಆದರು.ನಂತರ ನಟನೆಯೆಡೆಗೆ ಆಸಕ್ತಿ ವಹಿಸಿದ ಪಾಟೀಲ್ 1993 ರಲ್ಲಿ ವಿಷ್ಣುವರ್ಧನ್ ಅಭಿನಯದ `ನಿಷ್ಕರ್ಷ' ಚಿತ್ರದ ಮೂಲಕ ಖಳನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.ಮುಂದೆ ನಾಯಕಟನಾಗಿ `ಪ್ರೇಮಾಚಾರಿ',`ಕೌರವ',`ಜೋಗುಳ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಸುಮಾರು ಮೂವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಪಾಟೀಲರು ಕರ್ನಾಟಕದ ಪ್ರಮುಖ ರಾಜಕಾರಣಿ.