ಬಾಲಾಜಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ. ಇವರು ಈಶ್ವರಿ ಪ್ರೊಡಕ್ಷನ್ಸ್ ಸ್ಥಾಪಕ ಮತ್ತು ಖ್ಯಾತ ನಿರ್ಮಾಪಕ ಎನ್ ವೀರಾಸ್ವಾಮಿಯವರ ಪುತ್ರ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್‌ರವರ ಕಿರಿಯ ಸಹೋದರ.
ಇವರು 2005 ರಲ್ಲಿ ತೆರಕಂಡಿದ್ದ `ಅಹಂ ಪ್ರೇಮಾಸ್ಮಿ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ರವಿಚಂದ್ರನ್ ಕೂಡ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದರು. `ರಾಜಕುಮಾರಿ',`ಇನಿಯ' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.
2018 ರಲ್ಲಿ ಸಾಹಸಸಿಂಹ ವಿಷ್ಣುವರ್ಧನರವರ `ನಾಗರಹಾವು' ಚಿತ್ರವನ್ನು ತಾಂತ್ರಿಕವಾಗಿ ಉನ್ನತೀಕರಿಸಿ ಮರು ಬಿಡುಗಡೆ ಮಾಡಿದರು.