twitter

    ಭರತ್ ಭಾಗವತರ್ ಜೀವನಚರಿತ್ರೆ

    ಭರತ್ ಭಾಗವತರ್ ಕನ್ನಡ ಚಿತ್ರರಂಗದ ಮತ್ತು ಕಿರುತರೆಯ ಪ್ರಮುಖ ಪೋಷಕ ನಟ. ಹೆಸರಾಂತ ನಟ, ಗಾಯಕ, ನಿರ್ಮಾಪಕ ಹಾಗೂ ನಿರ್ದೇಶಕ ಹೊನ್ನಪ್ಪ ಭಾಗವತರ್  ಅವರ ಪುತ್ರ ಭರತ್. ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ತಮ್ಮ 51 ನೇ ವಯಸ್ಸಿನಲ್ಲಿಯೇ ಮೆದಳು ಆಘಾತದಿಂದ ಸಾವೀಗೀಡಾದರು. ಇವರ ಪುತ್ರಿ ಮೇಘನಾ ಕೂಡ ಚಿತ್ರನಟಿ.

    ಚಿತ್ರಜೀವನ

    ಇವರು ಜಿವಿ ಅಯ್ಯರ್ ನಿರ್ದೇಶನದ 'ಹಂಸಗೀತೆ' ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಿದ್ದಲಿಂಗಯ್ಯ ಅವರ ನಿರ್ದೇಶನದ 'ಹೇಮಾವತಿ' ಚಿತ್ರದಲ್ಲಿ ಯುವನಟರಾಗಿ ಕಾಣಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಋಣಮುಕ್ತಳು' .'ಬಿಡುಗಡೆಯ ಬೇಡಿ','ಬಂಗಾರದ ಕಳಶ', 'ಪ್ರಚಂಡರಾವಣ' ಇವರ ಅಭಿನಯದ ಪ್ರಮುಖ ಚಿತ್ರಗಳು. 'ಪ್ರಚಂಡ ರಾವಣ' ಚಿತ್ರದಲ್ಲಿ ಆಂಜನೇಯನ ಪಾತ್ರವಹಿಸಿ, ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದ ಭರತ್ ಅವರು, ಟಿಎನ್ ಸೀತಾರಾಂ ಅವರ ನಿರ್ದೇಶನ 'ಮಾಯಾಮೃಗ' ಸೇರಿದಂತೆ 'ಬಿದಿಗೆ ಚಂದ್ರಮ', 'ಮನೆಯೊಂದು ಮೂರು ಬಾಗಿಲು', 'ಮಹಾಯಾನ', 'ಅಗ್ನಿಶಿಖೆ' ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 30 ವರ್ಷಗಳ ಕಾಲ ಕಲಾ ಜೀವನ ಸವೆಸಿದ್ದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X